ಬಳ್ಳಾರಿ,ಸೆ.04 : ಪ್ರಸ್ತಕ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ ಅವರು ತಿಳಿಸಿದ್ದಾರೆ.
*ಶಿಕ್ಷಕರ ಪಟ್ಟಿ:*
*ಕಿರಿಯ ಪ್ರಾಥಮಿಕ ಶಾಲೆ ವಿಭಾಗ:*
ಬಳ್ಳಾರಿ ಪೂರ್ವ ವಲಯ ಬಾಲಯ್ಯ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹಾಂತೇಶ ಮೇಟಿ, ಕುರುಗೋಡು ತಾಲ್ಲೂಕಿನ ಕರಿಮಾರೆಮ್ಮ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊನ್ನುರ್.ಬಿ., ಸಂಡೂರು ತಾಲ್ಲೂಕಿನ ಸೋವೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಮಾರಸ್ವಾಮಿ.ಎಲ್., ಸಿರುಗುಪ್ಪ ತಾಲ್ಲೂಕಿನ ದೇವಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಫಕ್ರುದ್ದೀನ್ ಸಾಹೇಬ್.ಪಿ
*ಹಿರಿಯ ಪ್ರಾಥಮಿಕ ಶಾಲೆ ವಿಭಾಗ:*
ಬಳ್ಳಾರಿ ಪೂರ್ವ ವಲಯ ಬೈಲೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿ.ತ್ರಿವೇಣಿ, ಕುರುಗೋಡು ತಾಲ್ಲೂಕಿನ ವ್ಯಾಪ್ತಿಯ ಎಸ್ಡಬ್ಲೂö್ಯಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗವಿಸಿದ್ದಪ್ಪ, ಸಂಡೂರು ತಾಲೂಕಿನ ಎಂ.ತುAಬರಗುದ್ದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರ್ಚನಾ.ಕೆ., ಸಿರುಗುಪ್ಪ ತಾಲೂಕಿನ ಅರಳಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರೆಪ್ಪ.ಸಿ.ಡಿ., ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಮೆಟ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಎನ್.ಮಲ್ಲಿಕಾರ್ಜುನ.
*ಪ್ರೌಢ ಶಾಲೆ ವಿಭಾಗ:*
ಬಳ್ಳಾರಿ ಪೂರ್ವ ವಲಯದ ಕೆ.ವೀರಾಪುರದ ಸರ್ಕಾರಿ ಪ್ರೌಢ ಶಾಲೆಯ ಟಿ.ಜಿ.ನಾಗರಾಜ, ಕುರುಗೋಡು ಇಂದಿರಾನಗರದ ಸರ್ಕಾರಿ ಪ್ರೌಢ ಶಾಲೆಯ ಶ್ರೀಲತಾ.ಪಿ., ಸಂಡೂರು ತಾಲೂಕಿನ ಸಂಡೂರು ಎಪಿಎಂಸಿ ಸರ್ಕಾರಿ ಪ್ರೌಢ ಶಾಲೆಯ ಭಾಷಾ ಮೆಹಬೂಬ, ಸಿರುಗುಪ್ಪ ತಾಲೂಕಿನ ಕುರಿವಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಂತೋಷ್.ಆರ್.
ಸೆ.05 ರಂದು ನಡೆಯುವ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 13 ಶಿಕ್ಷಕರಿಗೆ ನೀಡಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.