ಬಳ್ಳಾರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚುನಾವಣೆ ಮುಗಿದ್ದು ಆಯಿತು, ಸೋತೋರು ಮನೆಸೇರಿದ್ದು ಆಯಿತು, ಗೆದ್ದೋರು ಗದ್ದುಗೆ ಏರಿದ್ದು ಆಯಿತು. ಆದರೆ ಬಳ್ಳಾರಿಯಲ್ಲಿ ಮಾತ್ರ ಇನ್ನು ಈ ಚುನಾವಣೆಯ ಗೋಳಾಟ ಮುಗಿಯುತ್ತಿಲ್ಲ.
ಚುನಾವಣೆಯಲ್ಲಿ ಸೋತವರು ಹಾಗೂ ಗೆದ್ದವರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಇದು ಸಂಘರ್ಷ ಹಾಗೂ ಗಲಾಟೆಗೆ ನಾಂದಿ ಹಾಡಲಿದೆ. ಈಗಾಗಲೇ ಸೋತವರು ಗೆದ್ದವರನ್ನ ಕೆಣಕಿ ವಿನಾಕಾರಣ ಗೊಂದಲದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಗೆದ್ದ ಅಧ್ಯಕ್ಷರಿಗೆ ಹೈಜಾಕ್ ಮಾಡೋ ಕೆಲಸ ನಡಿತೀದೆ ಎಂದು ಗೆದ್ದ ಸದಸ್ಯರ ಆರೋಪ. ಇನ್ನು ಸೋತವರಿಗೆ ಕೆಣಕಿ ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಹಾಕಿ ಗಾಂಧಿನಗರ ಠಾಣೆಯಲ್ಲಿ ಗೂಸ ತಿಂದು ಸೋತವರ ಮನೆ ಬಾಗಿಲಿಗೆ ಹೋಗಿ ಗಲಾಟೆ ನಡೆದ ಘಟನೆಯು ನಡೆದಿದೆ. ಒಟ್ಟಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಚುನಾವಣೆ ಅಕ್ಷರ ಸಹ ರಣರಂಗವಾಗಿ ಘಟನೆಗಳ ಪೋಲಿಸ್ ಠಾಣೆಗಳ ಮೆಟ್ಟಿಲು ಏರಿದ್ದು ಬೂದಿ ಮುಚ್ಚಿದ ಕೆಂಡದಂತಿದೆ. ಮುಂದೆ ಈ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಥೆ ಏನಾಗುತ್ತೋ ಕಾದು ನೋಡಬೇಕಿದೆ.