ಹೊಸಪೇಟೆ(ವಿಜಯನಗರ)ಸೆ.14: “ವಿಶ್ವ ಪ್ರಥಮ ಚಿಕಿತ್ಸಾ ದಿನ ಅಂಗವಾಗಿ” ಹೊಸಪೇಟೆ ನಗರದ ೬೦ ಬೆಡ್ನ ಆಯುಷ್ ಮಾನ್ ಆಸ್ಪತ್ರೆಗೆ ಬೇಟಿ ನೀಡಿ, ಸದ್ರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣುಹಂಪಲನ್ನು ವಿತರಿಸುವುದರ ಮೂಲಕ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗೀತ ರತನ್ಸಿಂಗ್,
ಡಾ|| ಡಿ.ಹೆಚ್.ಓ.ಶಂಕರ್ನಾಯ್ಕ್, ಡಾ|| ಎಸ್.ಎಚ್.ಓ. ಜಂಬಯ್ಯ, ಡಾ|| ನೂರ್, ಹಾಗೂ ಕರ್ನಾಟಕ ರಾಜ್ಯ ಜಾತ್ಯಾತೀತ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್ ಬ್ರಿಗೇಡ್(ರಿ) ವತಿಯಿಂದ ರಾಜ್ಯಾಧ್ಯಕ್ಷರಾದ ಗುಜ್ಜಲ್ ಲಿಂಗಣ್ಣನಾಯಕ ಮತ್ತು ರಾಜ್ಯ ಉಪಾಧ್ಯಕ್ಷರಾದ ಮೊಹಮ್ಮದ್ ಫಯಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶಲು, ಗುಂಡಿರಘು, ಎಸ್.ವೆಂಕಟೇಶ, ಯೋಗಲಕ್ಷಿö್ಮ, ರಾಜೇಶ್ವರಿ, ಮತ್ತು ಮಹಿಳಾ ಕಾರ್ಯಕರ್ತರು ಹಾಗೂ ಆಸ್ಪತ್ರೆಯ ಸಿಬ್ಬಂಧಿವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇವರ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ವೈಧ್ಯಕೀಯ ಚಿಕಿತ್ಸೆ ಬಗ್ಗೆ ಹಾಗೂ ರೋಗಿಗಳಿಗೆ ಸರ್ಕಾರದ ಸೌಲತ್ತುಗಳ ಬಗ್ಗೆ ಚರ್ಚಿಸಿ, ಮತ್ತು ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ದೊರೆಯುತ್ತಿದ್ದೆ ಎಂದು ರೋಗಿಗಳು ವ್ಯಕ್ತಪಡಿಸಿದರು.