ಬಳ್ಳಾರಿ,ಸೆ.28: ಕರ್ನಾಟಕ ಅಹಿಂದ ಜನ ಸಂಘದ ಜಿಲ್ಲಾ ಖಜಾoಚಿ ಯಾಗಿ ಎಂ. ಬಿ. ತಿಮ್ಮಪ್ಪ ಶನಿವಾರ ನೇಮಕಗೊಂಡಿದ್ದಾರೆ.
ಕರ್ನಾಟಕ ಅಹಿಂದ ಜನ ಸಂಘದ ಜಿಲ್ಲಾಧ್ಯಕ್ಷರಾದ ಗೋನಾಳ್ ಎಂ.ತಿಮ್ಮಪ್ಪ ಅವರು ಈ ನೇಮಕಮಾಡಿ ಅಹಿಂದ ಜನರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ಮತ್ತು ಆರ್ಥಿಕವಾಗಿ ‘ಅಹಿಂದ ಜನ ಸಮುದಾಯದ ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನೆಯ ಮತ್ತು ಬಲವರ್ಧನೆಗಾಗಿ ದುಡಿಯುತ್ತೀರೆಂದು ನಂಬಿ ನಾನು ತಮಗೆ ಈ ಜವಾಬ್ದಾರಿಯನ್ನು ವಹಿಸಿರುತ್ತೇನೆ ಎಂದು ಹೇಳಿದರು.
ಜಿಲ್ಲಾ ಖಜಾoಚಿ ಯಾಗಿ ಜವಾಬ್ದಾರಿ ವಹಿಸಿಕೊಂಡ ಎಂ. ಬಿ. ತಿಮ್ಮಪ್ಪಅವರು, ನನ್ನ ಸಮಾಜಿಕ ಸೇವೆ ಪರಿಗಣಿಸಿ ಈ ಸ್ಥಾನ ಕಲ್ಪಿಸಿರುವ ಜಿಲ್ಲಾಧ್ಯಕ್ಷರು ಗೋನಾಳ್ ಎಂ.ತಿಮ್ಮಪ್ಪ ಅವರು, ಹಾಗೂ ಅಹಿಂದದ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಸಮುದಾಯವನ್ನು ಒಟ್ಟುಗೂಡಿಸಿ ಅದರ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ಕೆ.ಬಿ ಚಂದ್ರಶೇಖರ್, ಸುಂಕಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.