ಬಳ್ಳಾರಿ,ಸೆ.30: ಶಾಲಾ ವಾಹನ ಹಾಗೂ ಅದರಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗೆ ಸಂಬAಧಿಸಿದAತೆ ಕಾಲಕಾಲಕ್ಕೆ ಸುಪ್ರೀಂಕೋರ್ಟ್, ಹೈ.ಕೋರ್ಟ್ ಹಾಗೂ ರಾಜ್ಯ ಸರಕಾರ ಹತ್ತು ಹಲವು ಆದೇ ಶಗಳನ್ನು ಹೊರಡಿಸಿವೆ. ಆದರೆ ಬಳ್ಳಾರಿ ನಗರದ ಕೆಲ ಖಾಸಗಿ ಶಾಲೆಗಳು ಈ ಆದೇಶಗಳನ್ನು ಸಮರ್ಪಕವಾಗಿ ಪಾಲನೆ ಮಾಡುತ್ತಿಲ್ಲ. ಈ ಆದೇಶಗಳಿಗೆ ಕಿಮ್ಮತ್ತೆ ಕೊಡದೆ, ಸಂಪೂರ್ಣ ನಿರ್ಲಕ್ಷ÷್ಯ ವಹಿಸಿವೆ. ಈ ಮೂಲಕ ಮುಗ್ಧ ಕಂದಮ್ಮಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ. ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ
ಒತ್ತು ನೀಡುವ ಉದ್ದೇಶದಿಂದ ಹಲವು ನಿಯಾಮಾವಳಿಗಳನ್ನು ಸರಕಾರ ರೂಪಿಸಿದೆ.
ಆದರೆ, ಇವುಗಳು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ. ಇಂದಿಗೂ ಕೆಲ ಶಾಲಾ ವಾಹನಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳ ಅಳವಡಿಕೆಯೂ ಆಗಿಲ್ಲ. ಇದನ್ನು ಗಮನಿಸಿ ಕ್ರಮಕೈಗೊಳ್ಳಬೇಕಾದ ಆಡಳಿತ ವ್ಯವಸ್ಥೆ ಮೈಮರೆತು ಕುಳಿತಿದೆ. ಇದರಿಂದ ಶಾಲಾ ವಾಹನ ಸುರಕ್ಷತೆಯ ಬಗ್ಗೆ ಹೇಳುವವರು ಕೇಳುವವರ್ಯಾರೂ ಇಲ್ಲದಂತಹ ಸ್ಥಿತಿ ಬಳ್ಳಾರಿಯಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗೆ ರಾಜ್ಯ ವ್ಯಾಪ್ತಿಯಲ್ಲಿಯೇ ಹಲವು ಶಾಲಾ ವಾಹನಗಳು ಅಪಘಾತಕ್ಕೀಡಾಗುತ್ತಿರುವ ವರದಿಗಳು ಬರುತ್ತಿವೆ. ಹಾಗೆಯೇ ಕೆಲ ಶಾಲಾ ವಾಹನ ಚಾಲಕರು ವಾಹನಗಳನ್ನು ಮಿತಿ ಮೀರಿದ ವೇಗ, ನಿರ್ಲಕ್ಷ÷್ಯದಿಂದ ಚಲಾಯಿಸುತ್ತಿರುವ ಆರೋಪಗಳಿವೆ. ವೇಗ ನಿಯಂತ್ರಣಕ್ಕೆ ಅಗತ್ಯವಾದ ಸ್ಪೀಡ್ ಗೌರ್ನರ್ಗಳನ್ನೇ ಬಹುತೇಕ ಶಾಲಾ ವಾಹನಗಳಲ್ಲಿ ಅಳವಡಿಕೆ ಮಾಡಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಆದರೆ, ಬಳ್ಳಾರಿ ನಗರದ ಮೋಕಾ ರಸ್ತೆಯಲ್ಲಿರುವ ವಿಜಡಮ್ ಲ್ಯಾಂಡ್ ಸ್ಕೂಲ್ ಬಸ್ಗಳ ಕುರಿತು ಪತ್ರಿಕೆ ರಿಯಾಲಿಟಿ ಚೆಕ್ ನಡೆಸಿದಾಗ ಕೆಲ ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಈ ಶಾಲೆಯ ರಿಯಾಲಿಟಿ ಚೆಕ್ ನಡೆಸಿದ ನಮಗೆ ಈ ಶಾಲೆಯ ಒಟ್ಟು ಏಳು ಬಸ್ಗಳ ಪೈಕಿ ಆರು ಬಸ್ಸುಗಳಿಗೆ ಇನ್ಶುರೆನ್ಸ್ ಇಲ್ಲ, ಕಳೆದ ವರ್ಷವೇ ಇನ್ಶುರೆನ್ಸ್ ಲ್ಯಾಪ್ಸ್ ಆಗಿದೆ. ಆzರೂ, ಕಳೆದೊಂದು ವರ್ಷದಿಂದ ಮಕ್ಕಳನ್ನು ಇದೇ ವಾಹನಗಳಲ್ಲೆ ಸಂಚಾರ ಮಾಡಿಸಿದ್ದಾನೆ ಸದರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಈ ಕಟ್ಟೆಗೌಡ. ಸ್ಕೂಲ್ ಫೀಸ್ ಬೇರೆ, ಬಸ್ ಫೀಸ್ ಬೇರೆ ಅಂತ ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡುವ ಈ ಶಾಲೆಯ ಮಾಲೀಕ ಕಟ್ಟೆಗೌಡ, ಮಕ್ಕಳು ಪ್ರಯಾಣಿಸುವ
ಬಸ್ಸುಗಳಿಗೆ ಇನ್ಶುರೆನ್ಸ್ ಕಟ್ಟದೇ ಕಳೆದೊಂದು ವರ್ಷದಿಂದ ಬಸ್ ಓಡಿಸುತ್ತಾನೆ ಅಂದರೆ, ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡತೊಡಗಿದೆ. ಇನ್ನು ಈ ಮಾತಿನ ಮಲ್ಲ ಕಟ್ಟೆಗೌಡ ಶಿಕ್ಷಣದ ಬಗ್ಗೆ ದೊಡ್ಡದಾಗಿ ಭಾಷಣ ಬಿಗಿಯೋ ಈತ ಮಕ್ಕಳ ಜೀವದ ಜೊತೆ ಆಟವಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಕಾಡುತ್ತದೆ.
ಇನ್ನು ಈತನ ಶಾಲೆಯ ಮತ್ತೊಂದು ಬಸ್ ಕಥೆ
ಕೇಳಿದರೆ ಜೀವ ಕೈಯಲ್ಲಿ ಬರುತ್ತೆ. ರಸ್ತೆ ಮೇಲೆ ಓಡಾಡಲು ಯೋಗ್ಯವಲ್ಲದ ಸ್ಕಾç÷್ಯಪ್ ಗಾಡಿಯಲ್ಲೆ ಈ ಕಟ್ಟೆಗೌಡ ಮಕ್ಕಳನ್ನು ತುಂಬಿ ಕಳುಹಿಸುತ್ತಾನೆ ಅಂದರೆ, ಈ ಅಡ್ನಾಡಿಗೆ ಮಕ್ಕಳ ಜೀವಕ್ಕಿಂತ ಹಣನೇ ಮುಖ್ಯವಾಯಿತಾ? ಬಸ್ ಗೆ ಅಂತನೇ ಹಣ ಪಡಿಯೋ ಈ ಕಟ್ಟೇಗೌಡ ಸುರಕ್ಷಿತವಾದ ಸುಸಜ್ಜಿತವಾದ ಬಸ್ ವ್ಯವಸ್ಥೆ ಕಲ್ಪಿಸಲು ಆಗದಿದ್ದಾಗ ಮಕ್ಕಳ ಪೋಷಕ-ಂದ ಬಸ್ಗೆ ಅಂತ ಯಾಕೆ ಹಣ ಪಡೆಯಬೇಕು? ಇಂತಹ ಡಕೋಟಾ, ಸ್ಕಾç÷್ಯಪ್ ಬಸ್ಸ್ಗಳಲ್ಲಿ ಮಕ್ಕಳನ್ನು ತುಂಬಿ ಶಾಲೆಗೆ ತರುವ ಈ ಶಾಲೆಯ ಆಡಳಿತ ಮಂಡಳಿಗೆ ಸರಕಾರದ ನಿಯಮಾವಳಿಗಳು ಅನ್ವಯಿಸುವುದಿಲ್ಲವೇ? ಈ ಶಾಲಾ ಆಡಳಿತ ಮಂಡಳಿಯ ಅಧ್ವಾನದ ಕುರಿತು ಶಿಕ್ಷಣ ಇಲಾಖೆ,
ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳುವುದಿಲ್ಲವೆ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ಇನ್ನು ಈ ಶಾಲೆಯ ಮಾಲೀಕ ಕಟ್ಟೆಗೌಡ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ನಿಜ, ಪ್ರತಿ ಮಗುವಿನ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಓದು ಬರಹವನ್ನು ಪರಿಶೀಲನೆ ಮಾಡೋದು ಅತ್ಯಂತ ಶ್ಲಾಘನೀಯ. ಆದರೆ, ಇದೇ ಕಟ್ಟೆಗೌಡ ಮಕ್ಕಳ
ಸುರಕ್ಷತೆಯ ಬಗ್ಗೆ ಏಕೆ ಆಲೋಚಿಸುತ್ತಿಲ್ಲ ಎಂಬುವುದು ವಿಲಿಯನ್ ಡಾಲರ್ ಪ್ರಶ್ನೆ? ಈ ಶಾಲೆಯಲ್ಲಿ ಮಕ್ಕಳ
ಸುರಕ್ಷತೆ ಅನ್ನೊದು ಮರಿಚಿಕೆಯಾಗಿದೆ. ಈ ಶಾಲೆಗೆ ಕಾಂಪೌAಡ್ ಇಲ್ಲ, ಮುಖ್ಯಧ್ವಾರವಿಲ್ಲ, ಅಕ್ಕ-ಪಕ್ಕ ಹೊಲಗಳಿವೆ. ಶಾಲಾ ಅವರಣದಲ್ಲಿ ಬೀದಿ ನಾಯಿಗಳು ಓಡಾಡುತ್ತವೆ ಹೀಗಿದ್ದಾಗ ಮಕ್ಕಳ ಸುರಕ್ಷತೆ ಎಲ್ಲಿದೆ ಸಂಬAಧಪಟ್ಟ ಇಲಾಖೆಗಳು ಮಲಗಿವೆಯಾ? ಎಂಬುವುದು ಸಾರ್ವಜನಿಕರ ಆಕ್ರೋಶ.
ಡಕೋಟಾ ಬಸ್ಗಳಿದ್ಧರು.. ವಿದ್ಯರ್ಥಿಗಳಿಗೆ ದುಬಾರಿ ಶುಲ್ಕ…..|?
ಖಾಸಗಿ ವಾಹನಗಳು ಕುರಿಗಳನ್ನು ತುಂಬಿಕೊAಡು ಹೋಗುವಂತೆಶಾಲಾ ವಿದ್ಯಾರ್ಥಿಗಳನ್ನು ತಮ್ಮ ಶಾಲಾ ವಾಹನಗಳಲ್ಲಿ ಕರೆದೊಯ್ಯುತ್ತಿರುವ ಘಟನೆಗಳು ಆಗ್ಗಿಂದ್ದಾಗೆ ಬಳ್ಳಾರಿ ನಗರದಲ್ಲಿ ಕಣ್ಣಿಗೆ ಬೀಳುತ್ತಿವೆ.ಭವಿಷ್ಯದಲ್ಲಿ ನೂರಾರು ಕನಸುಗಳನ್ನು ಹೊತ್ತು ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಅನೇಕ ಮಕ್ಕಳು ತೂಕದ ಸ್ಕೂಲ್ ಬ್ಯಾಗ್ ಬೆನ್ನಿಗೇರಿಸಿಕೊಂಡು ಖಾಸಗಿ ಶಾಲೆಗಳು ಮತ್ತು ಆಂಗ್ಲ ಮಾಧÀ್ಯಮ ಶಾಲೆಗಳು ಎಷ್ಟೇ ದೂರದಲ್ಲಿದ್ದರೂ ಅಧ್ಯಯನ ಮಾಡಬೇಕೆಂದು ಮುಗಿಬಿದ್ದು ವಾಹನಗಳಲ್ಲಿ ಓಡಾಟ ಮಾಡುತ್ತಿದ್ದಾರೆ. ಆದರೆ ಪೋಷಕರಿಗೆ ವಾಹನದಲ್ಲಿ ಓಡಾಡುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಸೃಷ್ಟಿಯಾಗಿದೆ.ಬಳ್ಳಾರಿ ನಗರದಲ್ಲಿ ಬಹುತೇಕ ಶೇ.೮೦ ರಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಸಾರಿಗೆಯನ್ನೆ ನೆಚ್ಚಿಕೊಂಡು ಶಾಲೆಗೆ ಬರುತ್ತಿದ್ದಾರೆ. ಬೆಳಿಗ್ಗೆ, ಸಂಜೆ ವೇಳೆ ವಿದ್ಯಾರ್ಥಿಗಳು ತಮ್ಮ ಖಾಸಗಿ ಶಾಲೆಯ ಬಸ್ಸುಗಳಿಗೆ ಜೋತುಬಿದ್ದು ಒಬ್ಬರ ಮೇಲೊಬ್ಬರು ಕುಳಿತುಕೊಂಡು ಹೋಗುವ ಸ್ಥಿತಿ ನಗರದ ಹಲವು ಭಾಗಗಳಲ್ಲಿ ಜೀವಂತವಾಗಿದೆ.
ಏನೆಲ್ಲಾ ಕಂಟಕ ?: ಶಿಕ್ಷಣ ಇಲಾಖೆ ಸುರಕ್ಷಾ ನಿಯಮಗಳನ್ನು ಪಾಲಿಸಿ ಎಂದು ಹೇಳುತ್ತಿದ್ದರೂ ಖಾಸಗಿ ಶಾಲಾ ವಾಹನಗಳ ಮಾಲೀಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆಗೆ ಕೆಲವು ಕಡೆ ನಗರ ಪ್ರದೇಶಗಳಲ್ಲಿ ಶಾಲಾ ವಾಹನಗಳು ಚಲಿಸುವಾಗ ನೋಡಿದರೆ ಸುರಕ್ಷತಾ ಕ್ರಮಗಳೆ ಅಳವಡಿಸಿರುವುದಿಲ್ಲ. ಇನ್ನು ಗ್ರಾಮಾಂತರ ಪ್ರದೇಶದ ರಸ್ತೆಗಳು ಮಳೆಗಾಲದಲ್ಲಿ ಹದಗೆಟ್ಟಿರುವುದು, ಅಗತ್ಯತೆಗಿಂತ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿರುವುದರಿಂದ ಅಪಾಯಕಾರಿ ವಾಹನ ಚಾಲನೆಗೆ ಅವಕಾಶವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾಹನಗಳ ಸುಸ್ಥಿತಿಯ ಬಗ್ಗೆ ತಪಾಸಣೆ ನಡೆಸಬೇಕಾದ ಅಧಿಕಾರಿಗಳ ನಿರ್ಲಕ್ಷ÷್ಯದಿಂದ ಅನೇಕ ಶಾಲೆಗಳು ದುರಸ್ಥಿ ಸ್ಥಿತಿಯಲ್ಲಿರುವ ವಾಹನಗಳನ್ನೇ ಬಳಸಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿವೆ. ನಗರದ
ಅನೇಕ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುವ ಖಾಸಗಿ ಶಾಲಾ ವಾಹನದ ಚಾಲಕರು ಕುರಿಗಳಂತೆ ವಿದ್ಯಾರ್ಥಿಗಳನ್ನು ತುಂಬಿದ್ದರೂ ಸಮಯದ ಒತ್ತಡದಲ್ಲಿ ಹೇಗೋ ಶಾಲೆ ತಲುಪಿದರೆ ಸಾಕು ಎಂದು ಪೋಷಕರೂ ಪ್ರಶ್ನೆ ಮಾಡದಿರುವುದರಿಂದ ಎಳೆಯ ಮಕ್ಕಳು ಅನಿವಾರ್ಯವಾಗಿ ಪ್ರಯಾಣಿಸುವಾಗ ಸರ್ಕಸ್ ಮಾಡುತ್ತಿದ್ದಾರೆ. ಒಮ್ಮೆ ಆಟೋ ಮುಗುಚಿಕೊಂಡರೆ ಮಕ್ಕಳ ಗತಿಯೇನು ಎಂಬುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಗಳು ತಮ್ಮ ವಾಹನಗಳ ಸೇವೆ ಪಡೆಯುವ
ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರಿಂದ ಪೋಷಕರು ಕಡಿಮೆ ವೆಚ್ಚದ ಆಟೋಗಳನ್ನು ಅವಲಂಬಿಸುತ್ತಿದ್ದಾರೆ ಎಂಬ ಮಾತಿದೆ.
ಇಲಾಖೆಯೊಂದಿಗೆ ಡಿಡಿಪಿಐ ಸಭೆ : ಶಾಲಾ ವಾಹನಗಳ ಸುರಕ್ಷತೆಗೆ ಸಂಬAಧಿಸಿದAತೆ ಕಳೆದ ಕೆಲ ತಿಂಗಳುಗಳ ಹಿಂದೆ ಶಾಲಾ ಆಡಳಿತ ಮಂಡಳಿಯವರ ಸಭೆ ನಡೆಸಿ ಸೂಕ್ತ ಸಲಹೆ-ಸೂಚನೆ ನೀಡಲಾಗಿದೆ. ಹಾಗೆಯೇ ಇಲಾಖೆಯ ಕೆಳಹಂತದ ಅಧಿಕಾರಿಗಳ ಸಭೆ ನಡೆಸಿ, ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ನೀಡಿ ಎಂದು ಹೇಳಲಾಗಿದೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ (ಡಿ.ಡಿ.ಪಿ.ಐ.) ಬಿ.ಉಮಾದೇವಿ ತಿಳಿಸಿದ್ದಾರೆ.
ಶಾಲೆಯವರ ಲೋಪದೋಷ ಪ್ರಶ್ನಿಸಿದರೆ ಎಲ್ಲಿ ತಮ್ಮ ಮಕ್ಕಳಿಗೆ ಶಾಲೆಗಳಲ್ಲಿ ತೊಂದರೆಯಾಗಲಿದೆಯೋ
ಕಾರಣದಿಂದ ಬಹುತೇಕ ಪೋಷಕರು ಶಾಲಾ ಆಡಳಿತ ಮಂಡಳಿಯವರನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಆರ್ಟಿಒ ಹಾಗೂ ಪೊಲೀಸ್ ಇಲಾಖೆಯವರು ಏನು ಮಾಡುತ್ತಿದ್ದಾರೆ? ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೇಕೆ? ಏನಾದರು ದುರಂತ ಸಂಭವಿಸಿದ ನಂತರವಷ್ಟೇ ಈ ಇಲಾಖೆಯವರು ಕಾರ್ಯಪ್ರವೃತ್ತರಾಗಬೇಕೇ? ದುರಂತಕ್ಕೆ ಆಸ್ಪದವಾಗದಂತೆ ನಿರಂತರ ಎಚ್ಚರಿಕೆಯ ಕ್ರಮಗಳನ್ನು ಈ ಇಲಾಖೆಯವರು ಕೈಗೊಳ್ಳಬೇಕಲ್ಲವೇ? ಮುಗ್ಧ ಮಕ್ಕಳ ಜೀವಗಳೊಂದಿಗೆ ಆಟವಾಡಬಾರದಲ್ಲವೇ? ಪೋಷಕರ ಮನಸ್ಥಿತಿಯನ್ನು ಸಂಬAಧಿಸಿದ ಇಲಾಖೆಯವರಾಗಲಿ ಅಥವಾ ಶಾಲಾ ಆಡಳಿತ ಮಂಡಳಿಯವರಾಗಲಿ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?’ ಸ್ಪೀಡ್ ಗೌರ್ನರ್, ಸಿ.ಸಿ. ಕ್ಯಾಮರಾ, ಜಿಪಿಎಸ್ ವ್ಯವಸ್ಥೆಯೇ ಇಲ್ಲ, ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ವೇಗ ನಿಯಂತ್ರಿಸುವ ಸ್ಪೀಡ್ ಗೌರ್ನರ್, ಸಿ.ಸಿ. ಕ್ಯಾಮರಾ, ಜಿಪಿಎಸ್ ತಂತ್ರಜ್ಞಾನ
ಅಳವಡಿಕೆ, ಪ್ರತ್ಯೇಕ ಸಿಬ್ಬಂದಿ ನಿಯೋಜನೆ, ಪೋಷಕರೊಂದಿಗೆ ಸಭೆ ನಡೆಸುವುದು ಸೇರಿದಂತೆ ಹತ್ತು ಹಲವು ಮಾರ್ಗದರ್ಶಿ ಸೂತ್ರಗಳನ್ನು ಸರಕಾರ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಆದರೆ ಮುಕ್ಕಾಲುಪಾಲು ಶಾಲಾ ವಾಹನಗಳಲ್ಲಿ ಈ ನಿಯಮಗಳ ಪಾಲನೆಯಾಗುತ್ತಿಲ್ಲ. ಶಾಲಾ ವಾಹನ ಸುರಕ್ಷತೆಯ ಬಗ್ಗೆಯೇ ಶಿಕ್ಷಣ ಇಲಾಖೆ, ಆರ್ಟಿಒ ಹಾಗೂ ಪೊಲೀಸ್ ಇಲಾಖೆಯವರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸರಕಾರ ನಿರ್ದೇಶನಗಳನ್ನು ನೀಡಿದೆ. ಆದರೆ ಈ ನಿಯಮಗಳ ಪರಿಪಾಲನೆ ಸಮರ್ಪಕವಾಗಿ ನಡೆಯುತ್ತಿಲ್ಲವಾಗಿದೆ.
ಪೋಷಕರ ಆಕ್ರೋ ಶ : ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಡೊನೇಷನ್, ಇತರೆ ಶುಲ್ಕಗಳ ವಸೂಲಿಗೆ ತೋರುವ ಆಸಕ್ತಿ ಶಾಲಾ ವಾಹನಗಳ ಸುರಕ್ಷತೆಂ ಮತ್ತೊಂದೆಡೆ ಕೆಲ ಶಾಲಾ ವಾಹನ ಚಾಲಕರು ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಈ ಬಗ್ಗೆ ಕೆಲವೊಮ್ಮೆ ಶಾಲೆಯವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಟ್ರಿಪ್ಗಳ ಸಂಖ್ಯೆ ಹೆಚ್ಚಿರುವುದರಿಂದ ಸಮಯ ಹೊಂದಾಣಿಕೆ ಮಾಡಲು ವೇಗದಲ್ಲಿ ವಾಹನ ಓಡಿಸುವುದು ಅನಿವಾರ್ಯ ಎಂದು ಒಮ್ಮೊಮ್ಮೆ ಚಾಲಕರು ಹೇಳುತ್ತಾರೆ. ಈ ಬಗ್ಗೆ ಪೋಷಕರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನಾದರೂ ಶಾಲಾ ಆಡಳಿತ ಮಂಡಳಿಯವರು ಈ ಬಗ್ಗೆ ಗಮನಹರಿಸಬೇಕು’ ಎಂದು ಪೋಷಕರೊಬ್ಬರು ಆಗ್ರಹಿಸುತ್ತಾರೆ.
ಮಕ್ಕಳನ್ನು ಕುರಿಮಂದೆಗಳAತೆ ತುಂಬಿಕೊAಡು ಹೋಗಲಾಗುತ್ತಿದೆ?
ಮಕ್ಕಳನ್ನು ಕರೆದೊಯ್ಯುವ ಕೆಲ ಖಾಸಗಿ ಶಾಲಾ ವಾಹನಗಳಲ್ಲಿಯೂ ಮಕ್ಕಳನ್ನು ಕುರಿಮಂದೆಗಳAತೆ ತುಂಬಿಕೊAಡು ಹೋಗಲಾಗುತ್ತಿದೆ. ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆಯೂ ಮಾಡುತ್ತಿಲ್ಲವಾಗಿದೆ. ಇದು ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದೆ. ಜೊತೆಗೆ ಕೆಲವರು
ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಈ ಬಗ್ಗೆ ಸಂಬAಧಿಸಿದ ಇಲಾಖೆಯವರು ಸೂಕ್ತ ಗಮನಹರಿಸಬೇಕಾಗಿದೆ’ ಎಂದು ಪೋಷಕರೊಬ್ಬರ ಮನವಿಯಾಗಿದೆ.
ಇದು ನಮಗೆ ದುಬಾರಿಯಾಗಿ ಪರಿಣಮಿಸುತ್ತದೆ ಎಂದು ಕೆಲ ಶಾಲೆಯವರು ಹೇಳುತ್ತಾರೆ. ಆದರೆ ಪೋಷಕರಿಂದ ಲಕ್ಷ ಲಕ್ಷ ರೂ. ಡೊನೇಷನ್ ವಸೂಲಿ ಮಾಡುವ ಪ್ರತಿಷ್ಠಿತ ಶಾಲೆಗಳು ಕೂಡ ಶಾಲಾ ವಾಹನಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಇವರಿಗಿರುವ ಕಾಳಜಿಗೆ ಸಾಕ್ಷಿಯಾಗಿದೆ’ ಎಂದು ಮತ್ತೋರ್ವಪೋಷಕರು ಸಿಡಿಮಿಡಿ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಇನ್ನಾದರೂ ಶಾಲಾ ಆಡಳಿತ ಮಂಡಳಿಗಳು ಹಾಗೂ ಆಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುವ ನಿರ್ಲಕ್ಷ÷್ಯ ಧೋರಣೆಯಿಂದ
ಹೊರಬರಲಿ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಮೇಲ್ವಿಚಾರಣೆ ಮಾಡೋರಿಲ್ಲ: ಬಳ್ಳಾರಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳ ಸುರಕ್ಷತೆ ಕುರಿತಾಗಿ ಲಿಖಿತ ಆದೇ ಶ ಹೊರಡಿಸಿದೆಯೇ ವಿನಃ ಆದೇಶ ಪಾಲನೆಯಾಗುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಕೇಂದ್ರ ಸರಕಾರ ಹೊರಡಿಸಿರುವ ಆರ್.ಟಿ.ಇ ನಿಯಮಗಳನ್ನು ಪಾಲಿಸುವಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಎಡವಿವೆೆ ಎಂಬ ಕೂಗು ಕೇಳಿಬರುತ್ತಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಶಿಕ್ಷಣ ಇಲಾಖೆ ಮತ್ತು ಪೋಲಿಸ್ ಇಲಾಖೆ ಜೊತೆಗೂಡಿ ಸುರಕ್ಷತೆಯ ಕುರಿತಾಗಿ ಹೆಚ್ಚಿನ ಗಮನಹರಿಸುವ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಉಭಯ ಇಲಾಖೆಗಳತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ.
ಸುರಕ್ಷತೆಗೆ ಆರ್.ಟಿ.ಒ ನಿಯಮಗಳೇನು : ವಾಹನ ಚಾಲಕರಿಗೆ ಪರವಾನಗಿ ಕಡ್ಡಾಯ, ಖಾಸಗಿ ವಾಹನದಲ್ಲಿ ವೇಗ ನಿಯಂತ್ರಕ ಇರಬೇಕು. ವಾಹನಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ, ತುರ್ತು ನಿರ್ಗಮನ ಬಾಗಿಲುಗಳು ವಾಹನದಲ್ಲಿರಬೇಕು. ಅಗತ್ಯತೆಗಿಂತ ಹೆಚ್ಚಿನ ಮಕ್ಕಳು ವಾಹನದಲ್ಲಿರಬಾರದು. ವಾಹನಗಳಲ್ಲಿ ಮಹಿಳಾ ಸಹಾಯಕಿಯರು ಇರಬೇಕು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಅಗ್ನಿ ನಿರೋಧಕ ಸಾಧನ ಅಳವಡಿಸಿರಬೇಕು. ವಾಹನದ ಪರವಾನಗಿ ಮತ್ತು ವಿಮೆ ಕಡ್ಡಾಯ. ಚಾಲಕರ ಮತ್ತು ಸಹಾಯಕರ ಗುರುತಿನ ಪತ್ರ ಕಡ್ಡಾಯ. ಆಗಿಂದ್ದಾಗೆ ವಾಹನಗಳ ತಪಾಸಣೆ ಅಗತ್ಯ. ಶಾಲಾ ವಾಹನಗಳಲ್ಲದೆ ಖಾಸಗಿ ವಾಹನಗಳಲ್ಲಿಯೂ ರಾಜ್ಯ ಸಾರಿಗೆ ಸಂಸ್ಥೆಯದ್ದೇ ರೀತಿಯ ಅನೇಕ ನಿಯಮಗಳನ್ನು ಪಾಲಿಸಬೇಕಿದೆ.¸
ಡಕೋಟಾ ಬಸ್ಗಳ ವಿವರ :
1.ಬಸ್ಸ್ ನಂಬರ್ (2) Ka.16,C-9944 ಈ ಬಸ್ಸಿಗೆ ಫಿಟ್ನೇಸ್ ಲ್ಯಾಫ್ಸ್ ಆಗಿದೆ. ಸರ್ಟಿಫಿಕೇಟ್ ಇಲ್ಲ, ಇನ್ಶುರೆನ್ಸ್
ಲ್ಯಾಪ್ಸ್ ಆಗಿ ತಿಂಗಳುಗಳೇ ಕಳೆದಿದೆ.
2.ಬಸ್ ನಂಬರ್ (3) Ka.19, D-7699 ಈ ಬಸ್ಸಿಗೆ ಕಳೆದ ವರ್ಷ 2023 ಅಕ್ಟೋಬರ್ 5ಕ್ಕೆ ಇನ್ಶುರೆನ್ಸ್
ಲ್ಯಾಪ್ಸ್ ಆಗಿದೆ.
3.ಬಸ್ ನಂಬರ್ (4) Ka.15,A-0346 ಈ ಬಸ್ಸಿನ ಇನ್ಶುರೆನ್ಸ್ಕಳೆದ ಆಗಸ್ಟ್ 13, 2024 ರಂದೇ ಇನ್ಶುರೆನ್ಸ್ ಲ್ಯಾಫ್ಸ್ ಆಗಿದೆ.
4.ಬಸ್ ನಂಬರ್ (5) Ka.06,C-9089 ಬಸ್ಸಿಗೆ ಕಳೆದ ವರ್ಷ ಫೆಬ್ರವರಿ 17 ಕ್ಕೆ ಇನ್ಶುರೆನ್ಸ್ ಲ್ಯಾಪ್ಸ್ ಆಗಿದೆ.
5. ಬಸ್ ನಂಬರ್ (8) Ka.51, A-8465ಈ ಬಸ್ಸಿಗೆ ಇನ್ಶುರೆನ್ಸ್ ಕಳೆದ ವರ್ಷ ಮಾರ್ಚ್ 3 ಕ್ಕೆ ಲ್ಯಾಪ್ಸ್ ಆಗಿದೆ.
6. Ka.17,b-5703 ಬಸ್ಸಿಗೆ ಮಾರ್ಚ್ 4,2024 ರಂದೆ ಇನ್ಶುರೆನ್ಸ್ ಲ್ಯಾಪ್ಸ್ ಆಗಿದೆ.