ಬಳ್ಳಾರಿ,ಅ.03: ನಗರದ ಬ್ರೂಸ್ ಪೇಟೆ ಪೋಲಿಸ್ ಠಾಣೆಯ ಮುಖ್ಯಪೇದೆ ಸಿಡಿಆರ್ ಸ್ಪೆಶಲಿಸ್ಟ್ ರಾಮಲಿಂಗ ಕೊಪ್ಪಳ ಜಿಲ್ಲೆಯ ಸಿ.ಇ.ಎನ್. ಪೋಲಿಸ್ ಠಾಣೆಯ ಕೋಟೆಪ್ಪ ಎಂಬ ಪೇದೆಗೆ ಇಲ್ಲಿಂದ ಕೆಲ ಮೊಬೈಲ್ ನಂಬರ್ಗಳನ್ನು ಕಳುಹಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿಯಿಲ್ಲದೆ, ಸಿಡಿಆರ್ (ಟವರ್ ಲೋಕೆಶನ್)ಹಾಕಿ ಖಾಸಗಿ ವ್ಯಕ್ತಿಗಳ ರಹಸ್ಯ
ಪಡೆದು ಡೀಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಕೊಪ್ಪಳ ಸಿಇಎನ್ ಪೋಲಿಸ್ ಠಾಣೆಯ ಪೇದೆ ಕೋಟೆಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು ಕೋಟೆಪ್ಪ ವಿಚಾರಣೆಯಲ್ಲಿ ಈ ರಾಮಲಿಂಗ ಎಂಬ ಮುಖ್ಯಪೇದೆಯ ಹೆಸರು ಬಾಯಿ ಬಿಟ್ಟಿದ್ದಾನೆ. ಈ ಕುರಿತು ಕೊಪ್ಪಳ ಪೋಲಿಸರು ಪ್ರಕರಣ ತನಿಖೆಗೆಂದು ರಾಮಲಿಂಗನನ್ನು ಹುಡುಕಿಕೊಂಡು ಬಳ್ಳಾರಿಗೆ ಬಂದಿದ್ದಾರೆ.
ಕೊಪ್ಪಳ ಪೋಲಿಸರನ್ನು ನೋಡಿದ ರಾಮಲಿಂಗ ಅವರನ್ನು ದೂಕಿ ಪರಾ- ರಿಯಾದ ಘಟನೆ ನಡೆದಿದೆ. ಈ ಕುರಿತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕುರಿತು ಬಳ್ಳಾರಿಯ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ರಾಮಲಿಂಗನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಖ್ಯ ಪೇದೆ ರಾಮಲಿಂಗನನ್ನು ಪೋಲಿಸರು ಹುಡುಕಾಟ ಮಾಡುತ್ತಿದ್ದಾರೆ. ಸದ್ಯ ಪರಾರಿಯಲ್ಲಿರುವ ಮುಖ್ಯ ಪೋಲಿಸ್ ಪೇದೆ ರಾಮಲಿಂಗನನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾ ರಾಣಿಯವರು ಸೇವೆಯಿಂದ ಅಮಾನತು ಮಾಡಿ ನಿನ್ನೆ ಆದೇಶ ಹೊರಡಿಸಿದ್ದಾರೆ. ಕೊಪ್ಪಳದ ಸಿಇಎನ್ ಪೋಲಿಸ್ ಠಾಣೆಯ ಕೋಟೆಪ್ಪ ಎಂಬ ಪೇದೆಯಿಂದ ಬಳ್ಳಾರಿಯ ಕೆಲ ಧೋ ನಂಬರ್ ದಂಧೆಯ ಕುಳಗಳ ನಂಬರ್ಗಳ ಸಿಡಿಆರ್ ತೆಗೆಸಿಕೊಂಡು ಅವರÀನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಕೊಪ್ಪಳದ ಸಿಇಎನ್ ಪೋಲಿಸ್ ಠಾಣೆಯ ಕೋಟೆಪ್ಪ ಕೊಪ್ಪಳದಲ್ಲಿ ಪರಾರಿಯಾಗಿ ತಲೆಮರಿಸಿಕೊಂಡರೆ,
ಇತ್ತ ಬಳ್ಳಾರಿಯ ಬ್ರೂಸ್ ಪೇಟೆ ಪೋಲಿಸ್ ಠಾಣೆಯ ರಾಮಲಿಂಗನೂ ತಲೆಮರಿಸಿಕೊಂಡಿದ್ದಾನೆ ಇಬ್ಬರು ಪೋಲಿಸರನ್ನು ಹಿಡಿಯಲು ಪೋಲಿಸರೇ ಬಲೆ ಬೀಸಿದ್ದು ವಿಪರ್ಯಾಸ. ಈ ಇಬ್ಬರು 145 ಮಂದಿಯ ಮೊಬೈಲ್ ಟವರ್ ಲೊಕೇಶನ್ ಹಾಕಿಕೊಂಡು ಯಾರು ಯಾರನ್ನು ಯಾಮಾರಿಸಿದ್ದಾರೆ ಎಂಬ ಕುರಿತು ಪೋಲಿಸರ ತನಿಖೆಯಿಂದ ಅಷ್ಟೇ ಹೊರಬರಬೇಕಿದೆ.
ಮೊನ್ನೆ ಮೊನ್ನೆ ಬಂಗಾರ ನಗದು ಹಣವನ್ನು ಕಳವು ಮಾಡಿದ್ದ ಪ್ರಕರಣ ದಲ್ಲಿ ಇದೆ ಠಾಣೆಯ ಒಬ್ಬ ಪೇದೆ ಜೈಲಿನಲ್ಲಿ ಇದ್ದಾರೆ, ಇದೆ ಠಾಣೆಯ ಮತ್ತೊಬ್ಬ ಪೇದೆ ಮತ್ತು ರಾಮಲಿಂಗ ಪತ್ನಿ ತ್ರಿವೇಣಿ ವಿಚಾರಣೆ ಗುರಿ ಯಾಗಿದ್ದಾರೆ.