ಬಳ್ಳಾರಿ,ಅ.23 : ಜಿಲ್ಲೆಯ ಸಂಡೂರಿನಲ್ಲಿ ಕಾಂಗ್ರೆಸ್ ಇವರಿಗೂ ಗೆದ್ದಿದ್ದು ಬಿಜೆಪಿಯ ಒಳಜಗಳದಿಂದ ಗೆದ್ದಿದೆ ವಿನಹ ಸ್ವಂತ ಶಕ್ತಿಯಿಂದ ಗೆದ್ದಿಲ್ಲ ಎಂದು ಬಿಜೆಪಿಯ ಹಿರಿಯ ಧುರೀಣ ಶಾಸಕ ಜನಾರ್ದನರೆಡ್ಡಿ ಹೇಳಿದರು.ನಗರದ ಮೋಕಾ ರಸ್ತೆಯ ವಾಜಪೇಯಿ ಬಡಾವಣೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
2018 ರಲ್ಲಿ ಬಂಗಾರು ಹನುಮಂತು ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೊನ್ನೆ 2023 ರಲ್ಲಿ ನಡೆದ ಚುನಾವಣೆಯಲ್ಲಿ ಇದೇ ಕೆ.ಎಸ್.ದಿವಾಕರ್ ಕೆಆರ್ ಪಿಪಿಯಿಂದ ಸ್ಪರ್ಧಿಸಿದರು ಹಾಗಾಗಿ ತುಕಾರಾಂ ಗೆ ಅನುಕೂಲವಾಗಿ ಗೆದ್ದರು ವಿನ: ಸ್ವಂತ ಶಕ್ತಿಯಿಂದ ಗೆದ್ದಿಲ್ಲ ಈ ಸಾರಿ ಬಂಗಾರು ಹನುಮಂತು, ಕೆ.ಎಸ್.ದಿವಾಕರ್ ಒಂದಾಗಿದ್ದಾರೆ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಹಾಗಾಗಿ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ ಎಂದು ಜನಾರ್ದನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ಕೈತಪ್ಪಿದ್ದರಿಂದ ಕೆ.ಎಸ್.ದಿವಾಕರ್ ಬೇಸರ ವ್ಯಕ್ತಪಡಿಸಿದರು. ಕಳೆದ ಎರಡು ದಿನದಿಂದ ಸಂಡೂರಿನಲ್ಲಿ ಅವರು ಕಾರ್ಯಕರ್ತರನ್ನ ಸಮಾಧಾನ ಪಡಿಸುವ ಕೆಲಸ ಮಾಡಿದ್ದಾರೆ. ಅವರು ನನ್ನ ಮನೆ ಬಳಿ ಅವರ ಸಾವಿರಾರು ಕಾರ್ಯಕರ್ತರನ್ನ ಕರೆ ತಂದರು ಅವರೆಲ್ಲರಿಗೂ ನಾನು ಸಹ ಮಾತನಾಡಿದ್ದೇನೆ. ಕೆ.ಎಸ್.ದಿವಾಕರ್ ಸಂಡೂರು ಕ್ಷೇತ್ರದಲ್ಲಿ ಆನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಪಕ್ಷ ಸಂಘಟನೆಯ ಕೆಲಸ ಮಾಡಿದ್ದಾರೆ. ದಿವಾಕರ್ ರವರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯವಿದೆ. ಹಾಗಾಗಿ ಇಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು ಕೆ.ಎಸ್.ದಿವಾಕರ್ ರವರನ್ನ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಿದ್ದಾರೆ. ಇದರಿಂದ ದಿವಾಕರ್ ಅವರ ಶಕ್ತಿ ರಾಜ್ಯ ಮಟ್ಟದಲ್ಲಿ ಬಳಕೆ ಮಾಡಿ ಪಕ್ಷ ಸಂಘಟನೆ ಮಾಡಲಿ ಇಲ್ಲಿ ಬಂಗಾರು ಹನುಮಂತು ಅಭ್ಯರ್ಥಿಯಲ್ಲ ಯಡಿಯೂರಪ್ಪ ಅಭ್ಯರ್ಥಿ ನರೇಂದ್ರ ಮೋದಿಜೀಯವರು ಅಭ್ಯರ್ಥಿ ಇದ್ದಂತೆ ಹಾಗಾಗಿ ನಾವೆಲ್ಲರೂ ಕೂಡ ಒಗ್ಗಟ್ಟಾಗಿದ್ದೇವೆ ಎಂದರು.
ದಿವಾಕರ್ ರವರನ್ನ ಕಾಂಗ್ರೆಸ್ ನವರು ಎಷ್ಟೆ ಸಂಪರ್ಕ ಮಾಡಿದರು ಅವರ ಫೋನ್ ಕರೆಗಳನ್ನ ದಿವಾಕರ್ ಸ್ವೀಕರಿಸಲಿಲ್ಲ. ಬಿಜೆಪಿ ನನ್ನ ತಾಯಿ ಪಕ್ಷ ಹಾಗಾಗಿ ಪಕ್ಷ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನವನ್ನು ಕಲ್ಪಿಸಿಕೊಡುತ್ತೆ ಎಂಬ ನಂಬಿಕೆಯೊಂದಿಗೆ ದಿವಾಕರ್ ರವರು ಇವತ್ತು ಯಾವ ತಪ್ಪು ದಾರಿಯನ್ನ ತುಳಿಯಲಿಲ್ಲ ಎಂದ ರೆಡ್ಡಿ ನಾನು ಈಗಾಗಲೇ 24 ಹಳ್ಳಿಗಳನ್ನ ಸುತ್ತಿ ಪ್ರಚಾರ ಮಾಡಿದ್ದೇನೆ. ಅಲ್ಲಿನ ಜನ ಬೆಂಬಲ ಅಲ್ಲಿನ ಜನ ಪ್ರತಿಕ್ರಿಯೆ ನೋಡಿದರೆ ಈ ಸಾರಿ ಬಿಜೆಪಿ ಬಹುದೊಡ್ಡ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ನಾಲ್ಕು ಸಾರಿ ತುಕಾರಾಂ ಗೆದ್ದರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಆ ಕ್ಷೇತ್ರದಲ್ಲಿ ಸರಿಯಾದ ಕುಡಿಯುವ ನೀರಿಲ್ಲ ರಸ್ತೆಗಳಿಲ್ಲ, ಆಸ್ಪತ್ರೆ ಸೇರಿದಂತೆ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ತುಕಾರಾಂ ಕಲ್ಪಿಸಿಕೊಡಲಾಗಿಲ್ಲ ಜನ ತುಕಾರಾಂ ವಿರುದ್ಧ ಇದ್ದಾರೆ ಹಾಗಾಗಿ ಈ ಸಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಡೂರು ಉಪ-ಚುನಾವಣೆಯ ಉಸ್ತುವಾರಿ ಚಿತ್ರದುರ್ಗ ನವೀನ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಯರ್ರಿಂಗಳಿ ತಿಮ್ಮಾರೆಡ್ಡಿ, ವೆಂಕಟೇಶ, ಗುತ್ತಿಗನೂರು ವಿರೂಪಾಕ್ಷಗೌಡ, ಹೆಚ್.ಹನುಮಂತಪ್ಪ, ಮುರಹರಿಗೌಡ, ಸೋಮನಗೌಡ, ಮಲ್ಲಿಕಾರ್ಜುನ ಆಚಾರ್, ರೈತ ಮೋರ್ಚಾದ ಐನಾಥ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.