ಬಳ್ಳಾರಿ ಅ 23. ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕೂ ಮುನ್ನ ರೈತರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಹಿಂಗಾರು ಹಂಗಾಮಿನ ಆರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಪ್ರತಿ ಕ್ವಿಂಟಾಲ್ ಗೆ 130 ರಿಂದ 300ರ ವರೆಗೆ ಏರಿಕೆ ಮಾಡಿದೆ. ಏಪ್ರಿಲ್ 2025 ರಿಂದ ಆರಂಭಗೊಳ್ಳುವ 2025-26ನೇ ಸಾಲಿನ ಮಾರುಕಟ್ಟೆ ಅವಧಿಗೆ ಈ ದರವೂ ಅನ್ವಯವಾಗಲಿದೆ. ಮುಂಗಾರು ಹಂಗಾಮಿನಂತೆಯೇ ಹಿಂಗಾರು ಹಂಗಾಮಿನ ಬೆಳೆಗಳಿಗೂ ಗಣನೀಯ ಪ್ರಮಾಣದಲ್ಲಿ ಎಂಎಸ್ಪಿ (ಎಂಎಸ್ಪಿ) ಬೆಲೆಯನ್ನು ಹೆಚ್ಚಿಸಲಾಗಿದೆ. ಮುಂಗಾರು ಹಂಗಾಮಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದ್ದು ಹಿಂಗಾರು ಹಂಗಾಮಿಗೆ 6 ಬೆಳೆಗಳಿಗೆ ಹೊಸ ಎಂಎಸ್ಪಿ ಘೋಷಿಸಲಾಗಿದೆ. ಗೋಧಿ – 150, ಬಾರ್ಲಿ – 130, ಕಡಲೆ – 210, ಮಸೂರ್ ಬೇಳೆ- 275, ಸಾಸಿವೆ – 300, ಸೂರ್ಯಕಾಂತಿ – 140 ರಂತೆ ಪ್ರತಿ ಕ್ವಿಂಟಾಲ್ ಗೆ ಎಂಎಸ್ಸಿ ಏರಿಕೆ ಹಾಗೂ ಹಿಂಗಾರು ಋತುವಿನ ಬೆಳೆಗಳಿಗೆ ಯೂರಿಯ ಹೊರತಾದ ರಸಗೊಬ್ಬರಗಳ ಸಬ್ಸಿಡಿಗೆ 24,475 ಕೋಟಿ ರೂ. ಗಳನ್ನು ವಿನಿಯೋಗಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದ ರೈತ ಪರ ನಿಲುವನ್ನು ಬಿಜೆಪಿ ರೈತ ಮೋರ್ಚಾ ಸ್ವಾಗತಿಸುತ್ತದೆ ಹಾಗೂ ಭತ್ತ ರವು, ಮಾಡಲು ಕೇಂದ ಸರ್ಕಾರವು ಅನುಮತಿ ನೀಡಿರುವ ಬಗ್ಗೆ ಬಳ್ಳಾರಿ ಜಿಲ್ಲಾ ಬಿ.ಜೆ.ಪಿ. ರೈತ ಮೋರ್ಚಾ ಅಧ್ಯಕ್ಷರಾದ ಗಣಪಾಲ ಐನಾಥರೆಡ್ಡಿ, ರವರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಯಚೂರು-ಕೊಪ್ಪಳ-ಬಳ್ಳಾರಿ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಕಡಿಮೆ ಮಾಡಿರುವುದು ಖಂಡನೀಯ ಮತ್ತು ಈ ಮೊದಲಿನಂತೆ ಹಾಲಿನ ಪ್ರೋತ್ಸಾಹ ದರವನ್ನು ಮುಂದುವರೆಸಬೇಕು. ರಾಜ್ಯ ಸರ್ಕಾರವು ಈಗಾಗಲೇ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದಾಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದರ ಹಣವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡಲಾಗುವುದೆಂದು ಈ ಸರ್ಕಾರ ಹೇಳಿತ್ತು. ಆದರೆ ಇಲ್ಲಿಯವರೆಗೆ ಹಾಲು ಉತ್ಪಾದಕರಿಗೆ ನಯಾ ಪೈಸೆಯನ್ನು ಸಹ ನೀಡಿಲ್ಲ. ಕೂಡಲೇ ಸರ್ಕಾರ ನುಡಿದಂತೆ ನಡೆಯಬೇಕೆಂದು ಬಳ್ಳಾರಿ ಜಿಲ್ಲಾ ಬಿ.ಜೆ.ಪಿ. ರೈತ ಮೋರ್ಚಾ ಅಧ್ಯಕ್ಷರಾದ ಗಣಪಾಲ ಐನಾಥರೆಡ್ಡಿ ರವರು ಒತ್ತಾಯಿಸಿದರು.