ಸಿರಿಗೇರಿ,ಅ.24 : ಇಲ್ಲಿನ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪಂಚಾಯತಿ ಸದಸ್ಯರ ನೇತೃತ್ವದಲ್ಲಿ ಬೆಬಾಕಿ ಮಳಿಗೆದಾರ ಮಳಿಗೆಗಳನ್ನು ಜಪ್ತಿ ಮಾಡುವ ಕಾರ್ಯಾಚರಣೆಯನ್ನು ಪೊಲೀಸ್ ಬಂದೂಬಸ್ತ್ ನೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒ ರಾಮಪ್ಪ ಸಿರಿಗೇರಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಒಟ್ಟು 41 ಮಳಿಗೆಗಳು ಇವೆ. ವಸೋಲಾತಿ ಆದರೆ ಮಾತ್ರ ಗ್ರಾಮ ಅಭಿವೃದ್ಧಿ ಸಾಧ್ಯ. ಆದರೆ 11 ಜನ ಮಳಿಗೆ ಬಾಡಿಗೆದಾರರು ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಸುಮಾರು 6 ಬಾರಿ ನೋಟಿಸ್ ನೀಡಿದ್ದರು ಗಮನಹರಿಸುತ್ತಿಲ್ಲ. ಎಲ್ಲಾ ಮಳಿಗೆ ಬಾಡಿಗೆ ಚುಕ್ತ ಮಾಡಿದರೆ ಮಾತ್ರ ಮಳಿಗೆ ಮಾಲೀಕತ್ವ ಮುಂದುವರಿಸುತ್ತೇವೆ. ಇಲ್ಲವಾದಲ್ಲಿ ಹೊಸ ಟೆಂಡರ್ ಕರೆಯುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂನ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.