ಬಳ್ಳಾರಿ,ಅ.24 : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಣದಲ್ಲಿ ಸುಮಾರು 20 ಕೋಟಿ ರೂ. ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಇದು ಇ.ಡಿ ಚಾರ್ಜ್ ಶೀಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಹಾಗಾಗಿ ಬಳ್ಳಾರಿ ಸಂಸದ ತುಕಾರಾಂರಿಗೆ ನೈತಿಕತೆ ಹಾಗೂ ಸ್ವಾಭಿಮಾನ ಏನಾದರೂ ಇದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಹಿರಿಯ ನಾಯಕರು, ಮಾಜಿ ಸಚಿವರು ಆದ ಶ್ರೀರಾಮುಲು ತುಕಾರಾಂ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಹವಂಬಾವಿ ಪ್ರದೇಶದ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿ0ದ ಒಂದಲ್ಲೊ0ದು ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಕಾಂಗ್ರೆಸ್ ಸರಕಾರ ರಾಜ್ಯದ ಜನರ ಹಣ ಲೂಟಿ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದ್ದು ಈ ಪ್ರಕರಣದಲ್ಲಿ ಓರ್ವ ಮಂತ್ರಿ ಜೈಲಿಗೋಗಿ ಬಂದಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂದು ಇ.ಡಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಿದರು ಕಾಂಗ್ರೆಸ್ನವರು ಭಂಡತನ ತೋರಿಸುತ್ತಿದ್ದಾರೆ ಅವರಿಗೆ ಕತೆ ಏನಾದರೂ ಇದ್ದಿದ್ದರೆ ರಾಜೀನಾಮೆ ಸ್ವಾಭಿಮಾನವೇ ಇಲ್ಲ ಸ್ವಾಭಿಮಾನ, ನೈತಿಕೊಡುತ್ತಿದ್ದರು. ಕಾಂಗ್ರೆಸ್ ನವರಿಗೆ ನೈತಿಕತೆ ಇಲ್ಲ ಹಾಗಾಗಿ ಈ ಬಾರಿಯ ಸಂಡೂರು ಉಪ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ರೀಶೈಲ ಜಗದ್ಗುರುಗಳ ಖಾಸಗಿ ಕಾರ್ಯಕ್ರಮ, ಕಲ್ಯಾಣ ಮಂಟಪವೊAದರ ಉದ್ಘಾಟನೆಗೆಂದು ಬಳ್ಳಾರಿಗೆ ಬಂದಿದ್ದಾರೆ.
ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಸಂಡೂರಿಗೆ ತೆರಳಿ ನಮ್ಮ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮಕ್ಕೆ ತೆರಳಿ ಶುಕ್ರವಾರ ನಾಮಪತ್ರ ಸಲ್ಲಿಸುತ್ತೇವೆ ಎಂದು ಶ್ರೀರಾಮುಲು ತಿಳಿಸಿದರು.ಲಕ್ಷಾಂತರ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಈ ಸಾರಿ ಸಂಡೂರಿನ ಜನ ಬದಲಾವಣೆ ಬಯಸಿದ್ದಾರೆ. ಸತತ ನಾಲ್ಕು ಬಾರಿ ಗೆದ್ದ ತುಕಾರಾಂ ಅಭಿವೃದ್ಧಿ ಮಾಡಿಲ್ಲ ಎಂಬ ಕೂಗು ಇದೆ. ಹಾಗಾಗಿ ಈ ಸಾರಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಅಲ್ಲಿನ ಜನ ಗೆಲ್ಲಿಸಿ ಇತಿಹಾಸ ನಿರ್ಮಾಣ ಮಾಡುವ ತವಕದಲ್ಲಿದ್ದಾರೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಟಿ.ಹೆಚ್.ಸುರೇಶ್ ಬಾಬು, ಮಾಜಿ ಸಂಸದರಾದ ಸಣ್ಣಪಕ್ಕೀರಪ್ಪ, ಪಾಲಿಕೆಯ ಸದಸ್ಯರಾದ ಗುಡಿಗಂಟಿ ಹನುಮಂತ, ಎಂ.ಗೋವಿAದ ರಾಜುಲು, ಕೆ.ಹನುಮಂತಪ್ಪ, ಶ್ರೀನಿವಾಸ ಮೋತ್ಕರ್, ಸುರೇಖಾ ಮಲ್ಲನಗೌಡ, ಮುಖಂಡರಾದ ಡಾ.ಮಹಿಪಾಲ್, ಗುತ್ತಿಗನೂರು ವಿರೂಪಾಕ್ಷಗೌಡ, ಕೆ.ಎ.ರಾಮಲಿಂಗಪ್ಪ, ಹೆಚ್.ಹನುಮಂತಪ್ಪ, ವೀರಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಭಾಗ್ಯಲಕ್ಷಿ,ಉಜ್ವಲ ಶ್ರೀಧರ್, ಸುಗುಣ, ಡಾ.ಅರುಣಾ, ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಉಮೇಶ್, ಬಸವಲಿಂಗಪ್ಪ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಬಳೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಮಲ್ಲನಗೌಡ, ಚೌದರಿ ಸೀನಾ, ಬಟ್ಟಿ ರ್ರಿಸ್ವಾಮಿ, ನಾಗರಾಜ್, ವೆಂಕಟೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.