ಬೆಂಗಳೂರು, ನವೆಂಬರ್ 01: ಎಂದಾದರೂ ಒಂದು ದಿನ ಯಾವುದಾದರೂ ಶಕ್ತಿ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸೋಕೆ ಹೋದರೆ ಕರ್ನಾಟಕದಲ್ಲಿ ಕ್ರಾಂತಿ ಆಗುತ್ತೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕರ್ನಾಟಕ ರಾಜ್ಯೋತ್ಸವ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅಂತಾ ಪ್ರಶ್ನೆ ಅಲ್ಲ, ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತೆ. ಈ ಬಗ್ಗೆ ಎಲ್ಲಾ ಪಕ್ಷದವರು ಚಿಂತನೆ ಮಾಡಬೇಕು ಎಂದು ಹೇಳಿದ್ದಾರೆ.
ಸ್ನೇಹ ಇದೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳುತ್ತಿಲ್ಲ. 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯಗೆ ಏನೂ ಸಿಕ್ಕಿಲ್ಲ. ಯಾರೇ ಬೀದಿಯಲ್ಲಿ ಹೋಗುವವರಿಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟರು. ವಿರೋಧ ಪಕ್ಷದವರು ಎತ್ತಿಕಟ್ಟಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಿಸಿದ್ದಾರೆ. ಸಿಎಂಗೆ ನೋಟಿಸ್ ಕೊಟ್ಟಿದ ದಿನವೇ ರಾಜ್ಯಪಾಲರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ್ದೇ ನಾನು ಎಂದಿದ್ದಾರೆ.
ಸಿದ್ದರಾಮಯ್ಯ ನಂತ್ರ ಯಾರು?
ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಲ್ಲಿ ಯಾರೂ ಇಲ್ಲ. ಸಂವಿಧಾನ ಬದ್ಧವಾಗಿ ಯಾರೂ ಬೇಕಾದರೂ ಸಿಎಂ ಆಗಬಹುದು. ಆದರೆ ಸಿದ್ದರಾಮಯ್ಯ ಇತಿಹಾಸವೇನು, ಅವರ ಮಾತೇನು, ಅವರ ವಯಸ್ಸೇನು. ಜೆಡಿಎಸ್ನಿಂದ ಸಿದ್ದರಾಮಯ್ಯರನ್ನು ತೆಗೆದಾಗ ನಾನೇ ಪ್ರತಿಭಟನೆ ಮಾಡಿದ್ದು, ಅಂದು ಜೆಡಿಎಸ್ನವರನ್ನು ಪ್ರಶ್ನೆ ಮಾಡಿದ್ದೂ ನಾನೇ ಎಂದು ಹೇಳಿದ್ದಾರೆ.
ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ
ಎಂದೂ ಯಾವುದೇ ಬಂದ್ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಲಿಲ್ಲ. ಬಂದ್ ಮಾಡಲಿಬಿಡಿ ಎಂದು ಪೊಲೀಸರಿಗೆ ಹೇಳಿದ್ದರು. ಕನ್ನಡದ ಮೇಲೆ ಸಿಎಂ ಸಿದ್ದರಾಮಯ್ಯಗೆ ಅಪಾರ ಗೌರವವಿದೆ. 62 ರಿಂದ 73 ರವರೆಗೆ ನಿರಂತರವಾಗಿ ಚಳುವಳಿ ಮಾಡಿದ್ದೇನೆ. ಬೇರೆ ಬೇರೆ ಭಾಷಿಕರು ನಡುಗುತ್ತಿದ್ದರು. ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಮುಂದೊಂದು ದಿನ ನಾವು ಬೀದಿಗೆ ಇಳಿಯುತ್ತೇವೆ. ಪರಭಾಷೆ ಚಿತ್ರಗಳು ರಿಲೀಸ್ ಮಾಡುವುದಕ್ಕೆ ಬಿಡಲ್ಲ. ಬೇರೆ ಬೇರೆ ರಾಜ್ಯದಲ್ಲಿ ಕನ್ನಡ ಚಿತ್ರಗಳು ಇಲ್ಲ. ಹೀಗಾಗಿ ನಮ್ಮ ಹೋರಾಟ ಅನಿವಾರ್ಯ.
ಕನ್ನಡಿಗರ ಉದ್ಯೋಗದ ಬಗ್ಗೆ ಮಸೂದೆ ತಂದಿದ್ದರು, ಆದರೆ ಮರಳಿ ಪಡೆದಿದ್ದಾರೆ. ಮೋಹನ್ ದಾಸ್ ಪೈ ಇದ್ರೆ ಇರಲಿ ಇಲ್ಲ ಹೋಗಲಿ. ಅವರು ಯಾರು ಅಂತ ನನಗೆ ಗೊತ್ತು. ತಾವು ಕನ್ನಡದ ಬಗ್ಗೆ ಅಭಿಮಾನಿಯಾಗಿದ್ದೀರಿ, ಕನ್ನಡದ ಮುಖಂಡರು ನೀವು. ಹಿಂದೆ ತುಂಬಾ ಅದ್ಭುತವಾದ ವ್ಯಕ್ತಿಗಳಿದ್ದರು. ಇವರ ಮುಂದೆ ರಾಮಕೃಷ್ಣ ಹೆಗ್ಡೆ ನಡುಗುತ್ತಿದ್ದರು. ಈಗ ಯಾರು ಇದ್ದಾರೆ? ವಿಧಾನಸಭೆ ಅಂದರೆ ಹೇಗೆ ಇರಬೇಕು? ವಿಧಾನಸಭೆಗೆ ಯಾರು ಬರಬೇಕು. ಜೈಲಿಗೆ ಹೋದರು, ದರೋಡೆ ಮಾಡಿದವರು ಬರಬೇಕಾ ಎಂದು ಪ್ರಶ್ನಿಸಿದ್ದಾರೆ.