ಸಿರುಗುಪ್ಪ, ಡಿ.17:. ನಗರದ ಗಂಗಾನಗರ ನಿವಾಸಿ ರಾಜ ಎನ್ನುವವರ ಪತ್ನಿ 24 ವರ್ಷದ ಅರುಣಾ ಎಂಬ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ತಾಲೂಕಿನ ಕೆಂಚನಗುಡ್ಡದ ಪವರ್ ಪ್ಲಾಂಟ್ ಬಳಿ ತುಂಗಭದ್ರಾ ನದಿಗೆ ಭಾನುವಾರ ಸಂಜೆ ಹಾರಿದ್ದಾಳೆ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಾತ್ರಿಯವರೆಗೂ ಹುಡುಕಾಟ ನಡೆಸಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಮತ್ತೆ ಹುಡುಕುವ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಬೆಳಿಗ್ಗೆ 10.30ರ ಸುಮಾರಿನಲ್ಲಿ ಶವ ದೊರೆತಿದ್ದು ಕಾನೂನು ಕ್ರಮ ತೆಗೆದುಕೊಂಡು ತನಿಖೆ ಮುಂದುವೆರೆಸಲಾಗಿದೆ.
ರಾಜ ಮತ್ತು ಅರುಣ ದಂಪತಿಗಳಿಗೆ ಮದುವೆಯಾಗಿ ನಾಲ್ಕೈದು ವರ್ಷಗಳಾಗಿದ್ದವು. ಅರಣಾಳಿಗೆ ಮಕ್ಕಳಾಗಿಲ್ಲವೆಂಬ ಕೊರಗು ಕಾಡುತ್ತಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬ ಮೂಲಗಳಿಂದ ತಿಳಿದು
ಬಂದಿದೆ. ಸಿರುಗುಪ್ಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಗೊಂಡಿದೆ.