ಬಳ್ಳಾರಿ, ಡಿಸೆಂಬರ್. 21: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರ, ಜಿಲ್ಲಾಡಳಿತ ಬಳ್ಳಾರಿ, ಜಿಲ್ಲಾ ಪಂಚಾಯಿತಿ ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಬಳ್ಳಾರಿ, ಕೌಶಲ್ಯಾಬಿವೃದ್ದಿ ಇಲಾಖೆ ಬಳ್ಳಾರಿ
ಇವರು ಸಂಯುಕ್ತ ಆಶ್ರಯದಲ್ಲಿ ಎರಡನೇ ಬ್ಯಾಚ್ ಹೊಟೆಲ್ ಮ್ಯಾನೇಜ್ಮೆಂಟ್ ತರಬೇತಿ ಉದ್ಘಾಟನೆ ಸಮಾರಂಭ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ಶನಿವಾರ ನಡೆಯಿತು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಾದ ಪ್ರಾಣೇಶ್, ಹಾಗೂ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಯಶವಂತರಾಜ್ ನಾಗಿರೆಡ್ಡಿ ರವರು ಬಂದAತಹ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು, ಹೌಸ್ ಕೀಪಿಂಗ್ ಹಾಗೂ ಆಫೀಸ್ ಅಸೋಸಿಯೇಟ್, ಕೋರ್ಸುಗಳನ್ನು ಪ್ರಾರಂಭ ಮಾಡಿದ್ದೇವೆ ವಿದ್ಯಾರ್ಥಿಗಳು ಶ್ರದ್ದೆಯಿಂದ ಈ ಕೋರ್ಸುಗಳನ್ನು ಕಲಿತು ಪ್ರಯೋಜಕರಾಗಬೇಕೆಂಬ ನಮ್ಮ ಉದ್ದೇಶ, ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಬೋಧನೆಯನ್ನು ಮಾಡುವ ಬೋಧಕ ಸಿಬ್ಬಂದಿಗಳಿದ್ದಾರೆ, ಈ ಕೋರ್ಸುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಾದ ಪ್ರಾಣೇಶ್, ರವರ, ಬಳ್ಳಾರಿ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ, ರವರ ನಿರಂತರ ಪರಿಶ್ರಮದಿಂದ ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ಸರ್ಕಾರದಿಂದ ತರಲು ಸಾದ್ಯವಾಗಿದೆ. ಹಾಗೂ ಎಲ್ಲಾ ಪದಾಧಿಕಾರಿಗಳು ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ನೀಡಲು ಇಷ್ಟು ಅಚ್ಚುಕಟ್ಟಾಗಿ ಸುಸಜ್ಜಿತವಾಗಿ ಗುಣಮಟ್ಟದ ತರಬೇತಿ ನೀಡಲು ವ್ಯವಸ್ಥೆ ಮಾಡಿರುವುದು ಗಮನಾರ್ಹ ಹಾಗೂ ತರಬೇತಿಗೆ ಬಂದಿರುವ ವಿದ್ಯಾರ್ಥಿಗಳು ಇಂತಹ ಕೌಶ್ಯಲಾಧಿರಿತ ತರಬೇತಿ ತೆಗೆದುಕೊಂಡರೆ ಬೇರೆ ಬೇರೆ ನಗರಗಳಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ಕ್ಷೇತ್ರಕ್ಕೆ ಬೇಡಿಕೆ ಇದೆ ಎಂದು ತಿಳಿಸಿದರು.
ಕೆ.ಸಿ.ಸುರೇಶಬಾಬು, ಗೌರವ ಕಾರ್ಯದರ್ಶಿಗಳು ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್.ದೊಡ್ಡನಗೌಡ, ಜಂಟಿ ಕಾರ್ಯದರ್ಶಿಗಳಾದ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ಹಾಗೂವಿ. ರಾಮಚಂದ್ರ, ನಾಗಳ್ಳಿ ರಮೇಶ, ಚೇರ್ಮನ್, ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರ, ಬಳ್ಳಾರಿ, ಉಪಕಮಿಟಿ ಚೇರ್ಮನಗಳು, ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಕಮಟಿಗಳ ಚೇರ್ಮನ್ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.