ಬಳ್ಳಾರಿ,ಜ.2: ಪತ್ರಕರ್ತ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸುಧಾರಿಸುವಂತಹ ಸುದ್ದಿಗಳನ್ನು ಮಾಡಬೇಕೆ ಹೊರತು ಬರೀ ಋಣಾತ್ಮಕವಾಗಿರದೇ ಮತ್ತು
ಸಮಾಜ ಜಿರ್ಣಿಸಿಕೊಳ್ಳಲಾರದಂತ ಸುದ್ದಿಗಳನ್ನು ಬರೆದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಾರದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ಕುಮಾರ್ ಮಿಶ್ರಾ ಕಿವಿಮಾತುಗಳನ್ನು ಹೇಳಿದರು.
ಗುರುವಾರದಂದು ‘ಸುವರ್ಣ ವಾಹಿನಿ’ ಕನ್ನಡ ದಿನಪತ್ರಿಕೆ ನೂತನ ವರ್ಷದ ಕ್ಯಾಲೆಂಡರ್ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುವರ್ಣ ವಾಹಿನಿ ಪತ್ರಿಕೆ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದೆ, ಇನ್ನು ಮುಂದೆ ತನ್ನ ಕಾರ್ಯ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಶೋಭಾರಾಣಿ ವಿಜೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಿಷ್ಟಿ ರುದ್ರಪ್ಪ ಸುವರ್ಣ ವಾಹಿನಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುವರ್ಣ ವಾಹಿನಿ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕ ವಿ.ರವಿ ಅವರು ಜಿಲ್ಲಾಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕಾನಿಪ ಸಂಘದ ಜಿಲ್ಲಾಧ್ಯಕ್ಷ ವಲಿಭಾಷಾ , ಹಿರಿಯ ವರದಿಗಾರರಾದ ಹನುಮೇಶ್ ರಾವ್, ಎಬಿಎನ್ ಮಲ್ಲಿಕಾರ್ಜುನ, ಬಜಾರಪ್ಪ, ರಾಧಾಕೃಷ್ಣ, ಅಬೂಬಕರ್ ಸಿದ್ದಿಖಿ, ಗೋವರ್ಧನ್ ರೆಡ್ಡಿ, ಕನ್ನಡ ಚೈತನ್ಯ ವೇದಿಕೆಯ ಪ್ರಭುಕುಮಾರ್, ಕಾಂಗ್ರೆಸ್ ಮುಖಂಡ ಬಿ.ಎಂ ಪಾಟೀಲ್, ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಜೋಳದರಾಶಿ ತಿಮ್ಮಪ್ಪ , ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ , ಪತ್ರಕರ್ತ ಶ್ರೀನಿವಾಸು, ಡಿ.ಬೋಗಾರೆಡ್ಡಿ ಸೇರಿದಂತೆ ಇತರರಿದ್ದರು.