ಬಳ್ಳಾರಿ: ಸಂಕ್ರಾತಿ ಹಬ್ಬದ ನಿಮಿತ್ತ `ಸಂಚಾರ ಸಂಕ್ರಾತಿ ರಂಗೋಲಿ ಸಂಪ್ರೀತಿ’ ಎಂಬ ಘೋಷವಾಕ್ಯದಡಿ ರಂಗೋಲಿ ಪ್ರಿಯರಾದ ಮಹಿಳೆಯರಿಗಾಗಿ `ರಂಗೋಲಿ ಸ್ಪರ್ಧೆ’ ಇದೇ ಜ.12 ರಂದು ಭಾನುವಾರ ಬೆಳಗ್ಗೆ 7:30 ಗಂಟೆಗೆ ನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್, ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಾಲಿಕೆ 3ನೇ ವಾರ್ಡ್ ಸದಸ್ಯ ಎಂ.ಪ್ರಭಜನ್ ಕುಮಾರ್ ನೇತೃತ್ವದಲ್ಲಿ `ರಂಗೋಲಿ ಸ್ಪರ್ಧೆ’ಯನ್ನು ನಡೆಸಲಾಯಿತು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು `ರಂಗೋಲಿ ಸ್ಪರ್ಧೆ’ಯನ್ನು ಉದ್ಘಾಟಿಸಲಿದ್ದಾರೆ. ಪಾಲಿಕೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ,ರೂಟ್ಸ್ ಪಬ್ಲಿಕ್ ಶಾಲೆಯ ಮುಖ್ಯಗುರು ಎಂ.ನಿರುಪಮಾ ಅವರು ನಿರ್ಣಾಯಕರಾಗಿ ಉಪಸ್ಥಿತರಿರಲಿದ್ದಾರೆ.
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ನಗರದ ಆಸಕ್ತ ಮಹಿಳೆಯರು, ರಂಗೋಲಿ ಪ್ರಿಯರು ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರು ರಂಗೋಲಿಯೊದಿಗೆ ಅವರ ಬಣ್ಣವನ್ನು ತಂದುಕೊಳ್ಳಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 7338466625 ಈ ಸಂಖ್ಯೆಯನ್ನು ಸಂಪರ್ಕಿಸಬೇಕು.