ಬಳ್ಳಾರಿ,ಫೆ.27: ತಾಲೂಕಿನ ಸಿಡಿಗಿನಮೊಳ ಗ್ರಾಮದ ಸರ್ಕಾರಿ ಪ್ರಾಢಶಾಲೆ ಆವರಣದಲ್ಲಿ ಜಾನಕಿ ಕಾರ್ಪ್ ಪ್ರೈವೇಟ್ ಲಿಮಿಟೆಡ್ (JCL)ವತಿಯಿಂದ ನೂತನವಾಗಿ ನಿರ್ಮಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಅನ್ವರ್ಬಾಷ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಜೆಸಿಎಲ್ ಸಂಸ್ಥೆಯ ಮುಖ್ಯಸ್ಥರು, ಪ್ರಧಾನ ವ್ಯವಸ್ಥಾಪಕರಾದ ನರಹರೆÀಡ್ಡಿ ಸೂಚನೆ ಮೇರಿಗೆ ಶಿಡಗಿನಮೊಳ ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ತಟ್ಟೆ, ಲೋಟ ಮತ್ತು ಸಮವಸ್ತç ಸೇರಿದಂತೆ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಶಿಡಗಿನಮೊಳ ಪ್ರೌಢಶಾಲೆಯ ಮಕ್ಕಳಿಗಾಗಿ ಮೂರು ಶೋಚಾಲಯಗಳು, ಒಂದು ನೀರಿನ ಟ್ಯಾಂಕ್ ಮತ್ತು ಫಿಲ್ಟರ್ ನೀರಿನ ಆರ್ಓ ಪ್ಲಾಂಟ್, ಸೇರಿದಂತೆ ಕಂಪ್ಯೂಟರ್, ಜೆರಾಕ್ಸ್ ಮಿಶನ್ ಮತ್ತಿತರ ಸಾಮಗ್ರಿಗಳನು ಜೆಸಿಲ್ ಪರವಾಗಿಕೊಡುಗೆ ನೀಡಿದರು.
ಮುಂದಿನ ತಿಂಗಳಲ್ಲಿ ನಡೆಯುವ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಕೋರಿದರು.
ಈ ಕಾರ್ಯಕ್ರಮದಲ್ಲಿ ಜೆಸಿಲ್ ಸಂಸ್ಥೆಯ ಎಸ್ಟೇಟ್ ಮ್ಯಾನೇಜರ್ ಜಡೇಸ್ವಾಮಿ, ಗ್ರಾಮ ಪಂಚಾಯತ್ ಸದಸ್ಯರು ಚೆನ್ನಬಸವನಗೌಡ, ತಲಾರಿ ಶ್ರೀನಿವಾಸುಳು, ಬಿಜೆಪಿ ಮುಖಂಡ ಓಂಕಾರ್, ಮುಖ್ಯ ಶಿಕ್ಷಕಿ ಶಾರದಮ್ಮ, ಪೂಜಾರಿ ರಮೇಶ್, ಎಸ್ಡಿಎಂಸಿ ಅಧ್ಯಕ್ಷ ವಂಡ್ರಪ್ಪ, ಉಪಾಧ್ಯಕ್ಷ ಅಂಜಿನಿ ಮತ್ತಿತರರು ಹಾಜರಿದ್ದರು.