ಬಳ್ಳಾರಿ,ಮಾ.21 : ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಮತ್ತು ಪೊಲೀಸ್ ಇಲಾಖೆ ಆಗಾಗ್ಗೆ ಜಾಗೃತಿ ಮೂಡಿಸುತ್ತಿರುತ್ತದೆ. ಒಂದು ವೇಳೆ ಸಂಚಾರಿ ನಿಯಮಗಳನ್ನು ಸಾಮಾನ್ಯ ಜನರು ಮೀರಿ ನಡೆದುಕೊಂಡರೆ ಪೈನು, ಕೋರ್ಟು ಎನ್ನುವುದನ್ನು ನೋಡಿರುತ್ತೇವೆ.
ಆದರೆ, ನಗರದಲ್ಲಿ ಪೊಲೀಸ್ ಒಬ್ಬ ಡ್ರೆöÊವಿಂಗ್ ಮಾಡುವ ಮೂಲಕ ಪೋನ್ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬAದಿದೆ.
ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯ ಸಂಬAಧಪಟ್ಟ ವಾಹನಗಳನ್ನು ಮೊಬೈಲ್ ಡ್ರೈವಿಂಗ್ ಮಾಡಿದರೆ ಇವರಿಗೆ ಆ ಕಾನೂನು ಸಂಬAಧವಿರುವುದಿಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ.
ಬಳ್ಳಾರಿ ನಗರದಲ್ಲಿ ಗುರುವಾರ ಸಂಜೆ ಗಾಂಧಿನಗರ ಪೊಲೀಸ್ ಠಾಣೆಗೆ ಸಂಬAಧಪಟ್ಟ ವಾಹನ ಡ್ರೈವರ್ ಬಲ ಕೈಯಲ್ಲಿ ವಾಹನ ಸ್ಟೀರಿಂಗ್, ಎಡ ಕೈಯಲ್ಲಿ ಮೊಬೈಲ್ ಫೋನ್ ಮಾತನಾಡುತ್ತಾ ಸಾರ್ವಜನಿಕರಿಗೆ ಕಂಡುಬAದಿದ್ದು, ಈ ದೃಶ್ಯವನ್ನು ನೋಡಿ ಸಾರ್ವಜನಿಕರು ಶಾಕ್ ಆಗಿದ್ದಾರೆ.
ಎಲ್ಲರಿಗೆ ಒಂದೇ ಕಾನೂನು ಇರಲೆಂದು ಸಾರ್ವಜನಿಕರು ಒತ್ತಾಯವಾಗಿದ್ದು, ಒಟ್ಟಾರೆ ವಿಡಿಯೋ ವೈರಲ್ ಆಗಿದೆ.