ಬಳ್ಳಾರಿ, ಆ.6 ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ನಗರದ ಶ್ರೀ ಕರಿಮಾರೆಮ್ಮ ದೇವಿ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕೆಂದು ಮಹಾನಗರಪಾಲಿಕೆಯ 35ನೇ ವಾರ್ಡಿನ ಸದಸ್ಯರಾದ ವಿ.ಶ್ರೀನಿವಾಸುಲು ಮಿಂಚುರವರು ಒತ್ತಾಯಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿರುವ ಯುವ ಮುಖಂಡರೂ ಆದ ವಿ.ಶ್ರೀನಿವಾಸುಲು ಮಿಂಚುರವರು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪುರಾತನ
ಕಾಲದ ದೇವಸ್ಥಾನ ಇದಾಗಿದ್ದು. ನಗರದಲ್ಲಿ ನಡೆಯುವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ಹಾಗೂ ಶ್ರೀ ಕನಕದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದಂತೆ, ಈ ಹಿಂದೆ ಪ್ರತಿ ವರ್ಷವೂ ಕೂಡ ವಿಜೃಂಭಣೆಯಿAದ ಶ್ರೀ ಕರಿಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗುತ್ತಿತ್ತು.
ಈ ಜಾತ್ರೆಗೆ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶದಿAದ ಜನರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿ ಶ್ರೀ ಕರಿಮಾರೆಮ್ಮ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದರು, ಆದರೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ, ಅರ್ಚಕರ ನಿರ್ಲಕ್ಷ್ಯದಿಂದ ಕೆಲ ವರ್ಷಗಳಿಂದ ಜಾತ್ರೆಗೆ ಸಂಬAಧಪಟ್ಟ ಮಾಹಿತಿಯನ್ನು ಹೊರಹಾಕದೆ ತಮ್ಮಷ್ಟಕ್ಕೆ ತಾವು ಮನಸ್ಸಿಗೆ ಬಂದAತೆ ವರ್ತಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಆಯುಕ್ತರು ಆದಷ್ಟು ಬೇಗ ಎಚ್ಚೆತ್ತುಕೊಂಡು
ಇದೇ ತಿಂಗಳು 12ರಂದು ನಡೆಯುವ ಶ್ರೀ ಕರಿಮಾರೆಮ್ಮ ಜಾತ್ರೆಯನ್ನು ವಿಜೃಂಭಣೆಯಿAದ ಆಚರಿಸುವಂತೆ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮಹಾನಗರ ಪಾಲಿಕೆಯ ಸದಸ್ಯರಾದ ವಿ.ಶ್ರೀನಿವಾಸುಲು ಮಿಂಚುರವರು ಮತ್ತು 35ನೇ ವಾರ್ಡಿನ ಜನರು ಧಾರ್ಮಿಕ ದತ್ತಿ ಇಲಾಖೆಯ
ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.