ಬಳ್ಳಾರಿ,ಆ.18 : ಬಳ್ಳಾರಿಯ ಕೌಲ್ಬಜಾರ್ನ 1ನೇ ಗೇಟ್ ಸಮೀಪದ ವೃತ್ತಕ್ಕೆ ಮೈಸೂರು ಹುಲಿ ಟಿಪ್ಪುಸುಲ್ತಾನ್ರ ವೃತ್ತ ಎಂದು ನಾಮಕರಣ ಮಾಡಲು ಸಂಬAಧಿಸಿದ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಲು ಆಲ್ ಇಂಡಿAiÀÄನ್ ಹಜರತ್ ಟಿಪ್ಪು ಸುಲ್ತಾನ್ ಆರ್ಗನೈಜೇಷನ್ (ರಿ)ನ ರಾಜ್ಯ ಘಟಕದಸರ್ವಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಮಿಲ್ಲರ್ಪೇಟೆಯ ಲ್ಲಿರುವ ಆಲ್ ಇಂಡಿಯನ್ ಹಜರತ್ ಟಿಪ್ಪು ಸುಲ್ತಾನ್ ಆರ್ಗನೈಜೇಷನ್ನ ರಾಜ್ಯ ಘಟಕದ ಕಛೇರಿಯ ಸಭಾಂಗಣದಲ್ಲಿ ಸದರಿ ಸಂಘಟನೆಯ ರಾಜ್ಯಾಧ್ಯಕ್ಷ ಅಬ್ದುಲ್ಕಲೀಂ ಅಜ್ಮಿರವರ ನೇತೃತ್ವದಲ್ಲಿ ನಡೆದ ಸದರಿ ಸಂಘಟನೆಯ ಸರ್ವ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತಂತೆ ಕೂಲಂಕುಷವಾಗಿ ಚರ್ಚಿಸಿ, ನಗರದ ಕೌಲ್ಬಜಾರ್ನ 1ನೇ ಗೇಟ್ ಸಮೀಪ ಹೊಸದಾಗಿ ಪ್ರಾರಂಭವಾಗುತ್ತಿರುವ ವೃತ್ತಕ್ಕೆ ಮೈಸೂರು ಹುಲಿ ಟಿಪ್ಪುಸುಲ್ತಾನ್ರ ವೃತ್ತವೆಂದು ನಾಮಕರಣ ಮಾಡಲು ಜನಪ್ರತಿನಿಧಿಗಳಿಗೆ, ಬಳ್ಳಾರಿ ಮಹಾನಗರಪಾಲಿಕೆಗೆ, ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ಗೆ ಸಮುಚಿತವಾದ ರೀತಿಯಲ್ಲಿ ಸವಿವರವಾದ ಮನವಿ ಪತ್ರವನ್ನು ಸಲ್ಲಿಸಲು ಸಭೆಯಲ್ಲಿದ್ದವರೆಲ್ಲರ ಸರ್ವ ಸಮ್ಮತಿಯ ಮೇರೆಗೆ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಲ್ ಇಂಡಿಯನ್ ಹಜರತ್ ಟಿಪ್ಪು ಸುಲ್ತಾನ್ ಆರ್ಗನೆ Êಜೆ Ãಷನ್ನ ರಾಜ್ಯಾಧ್ಯಕ್ಷ ಅಬ್ದುಲ್ ಕಲೀಂ ಅಜ್ಮಿರವರು 18ನೇ ಶತಮಾನದಲ್ಲಿ ಭೂಸುಧಾರಣೆಯ ಹರಿಕಾರರಾಗಿ, ಸಾಮಾಜಿಕ ನ್ಯಾಯದ ಅರಸರಾಗಿ ದೇಶಪ್ರೇಮವನ್ನೇ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದ, ದೇಶದ ಸ್ವಾತಂತ್ರö್ಯಕ್ಕಾಗಿ ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ ಧೀರ ಸ್ವಾತಂತ್ರö್ಯ ಹೋರಾಟಗಾರ, ಅಪ್ಪಟ
ದೇಶಪ್ರೇಮಿ, ವೀರ ಸೇನಾನಿ, ಕನ್ನಡಪ್ರೇಮಿ, ರೈತ ಸ್ನೇಹಿ, ವೈಜ್ಞಾನಿಕ ಚಿಂತಕ, ಜನಪರ ಆಡಳಿತಗಾರ, ಸಮಾನತೆಯ ಪ್ರತಿಪಾ ದಕ, ಬ್ರಿಟೀಷರ ವಿರುದ್ಧ ರಣರಂಗದಲ್ಲಿ ಹೋರಾಡುತ್ತಲೇ ವೀರ ಮರಣ ಹೊಂದಿರುವ ಮೈಸೂರು ಹುಲಿ ಟಿಪ್ಪು ಸುಲ್ತಾನ್ರ ಹೆಸರನ್ನು ನಗರದ ಕೌಲ್ಬಜಾರ್ನ 1ನೇ ಗೇಟ್ ಸಮೀಪದ ವೃತ್ತಕ್ಕೆ ಇಟ್ಟು, ಟಿಪ್ಪು ಸುಲ್ತಾನರಿಗೆ ಸಮುಚಿತವಾದ ಗೌರವಗಳನ್ನು ಸಲ್ಲಿಸಲು ಅನುವಾಗುವಂತೆ ಸಂಬAಧಿಸಿದ ಅಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.