ಬಳ್ಳಾರಿ: ಬಳ್ಳಾರಿ ನಗರದಲ್ಲಿ ಎಐಸಿಸಿ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ನಿರ್ದೇಶನದಂತೆ
ಬಳ್ಳಾರಿ ಉಪ ನೋಂದಣಿ ಕಛೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮತಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಮುರಳಿ ಕೃಷ್ಣ ರವರು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಬಳ್ಳಾರಿ ನಗರದ ಸಂಗನಕಲ್ ರಸ್ತೆಯಲಿರುವ ತಮ್ಮ 0:26 ಸೆಂಟ್ಸ್ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ನೀಡಿರುವ ನಿವೇಶನವನ್ನು ನೋಂದಾಣಿ ಮಾಡಿಸಿಕೊಟ್ಟರು,ಉದ್ದೇಶಿತ ಯೋಜನಾ ಸ್ಥಳಕ್ಕೆ ಭೇಟಿ ನೀಡಿ,ಹಾಗೆಯೇ ಸಿಹಿ ಹಂಚಿ ಸಂಭ್ರಮ ಹಂಚಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ನಗರ ಶಾಸಕರಾದ ಭರತ್ ರೆಡ್ಡಿ, ಬುಡ ಅಧ್ಯಕ್ಷರಾದ ಜೆ.ಎಸ್.ಅಂಜಿನೆಯಲು, ಡಿಸಿಸಿ ಕಾರ್ಯಾಧ್ಯಕ್ಷರಾದ ಭೋಯಪಾಟಿ ವಿಷ್ಣುವರ್ಧನ್, ಡಿಸಿಸಿ ಉಪಾಧ್ಯಕ್ಷರಾದ ಪೇರಂ ವಿವೇಕ್, ಮುಖಂಡರಾದ ಎಲ್. ಮಾರೆಣ್ಣ, ವೀರಸೆನಾ ರೆಡ್ಡಿ, ಪಿ.ಜಗನ್, ವೆಂಕಟೇಶ್ ಹೆಗಡೆ, ಮುಂಚೂಣಿ ಘಟಕಗಳ ಎಂ.ಎಸ್.ಮಂಜುಳ, ಎರಕುಲ ಸ್ವಾಮಿ, ಸರಗು ನಾಗರಾಜ್, ಕನೇಕಲ್ ಮೆಹಬೂಬ್ ಸಾಬ್, ಅಲಿವೇಲು ಸುರೇಶ್, ಶೇಕ್ ಅಫಾಕ್ ಹುಸೇನ್, ಜೋಗಿನ ಚಂದ್ರಪ್ಪ, ಗೋನಾಳ್ ನಾಗಭೂಷಣ್ ಗೌಡ, ಅಯ್ಯಾಳಪ್ಪ ನಾಡ0ಗ,ಸಂಗನಕಲ್ ವಿಜಯ್ ಕುಮಾರ್ ಕೆ.ಪ್ರಹ್ಲಾದ ಮತ್ತು ಇನ್ನಿತರರು ಉಪಸ್ಥಿತರಿದ್ದರು.