ಬಳ್ಳಾರಿ, ಅ.09: ಜಿಲ್ಲೆಯ ಸಂಡೂರು, ಸಿರುಗುಪ್ಪ, ಕುರುಗೋಡು ಹಾಗೂ ಬಳ್ಳಾರಿ ತಾಲೂಕಿನ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಆಯ್ಕೆಯಾದ ಕೆಲ ಪಿಡಿಓ ಅಧಿಕಾರಿಗಳು ಜನರ ನಂಬಿಕೆಗೆ ಧಕ್ಕೆ ತಂದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಹೆಸರಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ನಡೆಸುತ್ತಿದ್ದಾರೆ ಎಂದು ದಲಿತ ಸೇನೆ ಸಮಿತಿ ರಾಜ್ಯಾಧ್ಯಕ್ಷ ಹನುಮಂತ ಜಿ. ಯಲಸಂಗಿ ಆರೋಪಿಸಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,“ಅಧಿಕಾರಿಗಳ ಕರ್ತವ್ಯ ಜನಸೇವೆಯಾಗಬೇಕು. ಆದರೆ ಇಂದು ಅದು ಹಣಸೇವೆಯಾಗಿ ಬದಲಾಗಿದೆ. ಗ್ರಾಮದ ಬಡ ಜನರಿಗೆ ಸಿಗಬೇಕಾದ ಯೋಜನೆಗಳ ಹಣ ಅಧಿಕಾರಿಗಳ ಕೈಯಲ್ಲಿ ಹಾಳಾಗುತ್ತಿದೆ. ಪ್ರಜೆಗಳ ಕಣ್ಣೀರು ಅವರ ಕಚೇರಿಯ ಗೋಡೆಗಳಿಗೂ ತಟ್ಟದ ಸ್ಥಿತಿ ನಿರ್ಮಾಣವಾಗಿದೆ,” ಎಂದು ವಾಗ್ದಾಳಿ ನಡೆಸಿದರು.
ಅವರು ಮುಂದುವರಿದು, “ಬಳ್ಳಾರಿ ಜಿಲ್ಲೆ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಆಡಳಿತದ ಮೇಲ್ವಿಚಾರಣೆ, ಕಾಮಗಾರಿಗಳ ಪರಿಶೀಲನೆ ಎಲ್ಲವೂ ಕಾಗದದಲ್ಲೇ ಉಳಿದಿದೆ. ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಿ, ಜನರ ಹಣವನ್ನು ವಾಪಸ್ ಪಡೆಯುವ ಕ್ರಮ ಕೈಗೊಳ್ಳಬೇಕು,” ಎಂದು ಸರ್ಕಾರಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಟ್ಟೆ ಸ್ವಾಮಿ ಮಾತನಾಡಿ“ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳಬಾರದು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದಲಿತ ಸೇನೆ ಸಮಿತಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಮಟ್ಟದ ಭ್ರಷ್ಟಾಚಾರ ಮತ್ತು ಹಗರಣಗಳ ಕುರಿತು ಉನ್ನತ ಮಟ್ಟದ ತನಿಖೆ ತಕ್ಷಣ ಆರಂಭಿಸಬೇಕು,” ಎಂದು ಬೇಡಿಕೆ ಇಟ್ಟರು.
“ಬಡ ಜನರ ಬೆವರಿನ ಹಣವನ್ನು ಕೆಲವರು ತಮ್ಮ ಖಾಸಗಿ ಖಾತೆ ತುಂಬಲು ಬಳಸುತ್ತಿದ್ದಾರೆ. ಇದು ಕೇವಲ ಅಪರಾಧವಲ್ಲ, ಪ್ರಜೆಗಳ ಮೇಲಿನ ದ್ರೋಹ. ಇಂತಹ ಅಧಿಕಾರಿಗಳನ್ನು ಕಾನೂನಿನ ಮುಂದೆ ಎಳೆದು ತರಬೇಕು,” ಎಂದು ಕಿಡಿ ಕಾರಿದರು “ ಇನ್ನು ಎಸ್ಸಿ ಎಸ್ಟಿ ಗಳ ಹಣ ಫೋಲೋ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿ
ಭ್ರಷ್ಟ ಪಿಡಿಓಗಳ ವಿರುದ್ಧ ನಾವು ಲೋಕಾಯುಕ್ತರಿಗೆ ದೂರನ್ನು ನೀಡಿದ್ದೇವೆ. ಆದರೆ ಐದು ತಿಂಗಳು ಕಳೆದರೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿರಾಜ್ಯ ಉಪಾಧ್ಯಕ್ಷರಾದ ಎಮ್ ಎ ಸಿಂದಿಗಿಕರ್.
ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ” ಜಾವೀದ್ ಖಾನ್.ಕಲಬುರಗಿ ಜಿಲ್ಲಾಧ್ಯಕ್ಷರಾದ ಮಂಜುನಾಥ ಭಂಡಾರಿ. ಗೌರವ ಅಧ್ಯಕ್ಷರಾದ ಮುರಳಿ ಕೃಷ್ಣ. ಉಪಾಧ್ಯಕ್ಷರಾದ ಮಾನಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೇಶ್. ಕಾರ್ಮಿಕ ಅಧ್ಯಕ್ಷರಾದ ಪ್ರಸಾದ್. ಸಂಡೂರು ತಾಲೂಕು ಅಧ್ಯಕ್ಷರಾದ ರಾಜೇಶ್ ಹೆಗಡೆ. ಹನುಮಂತ. ಶಿವರಾಜ್. ಇನ್ನೂ ಅನೇಕರು ಉಪಸ್ಥಿತರಿದ್ದರು.