ಬಳ್ಳಾರಿ. ಅ. 09: ಇತ್ತೀಚೆಗೆ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಇಲಾಖೆಗೆ ಸಂಬAಧಿಸಿದAತೆ, ಸಾಕಷ್ಟು ದೂರುಗಳು ಬಂದಿರುವ ಸಾರ್ವಜನಿಕರು ಮತ್ತು ಸಿಬ್ಬಂದಿಗಳ ಮೇಲೆ, ಅನುಚಿತ ವರ್ತನೆ ತೋರುತ್ತಿದ್ದಾನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಮುಖ್ಯಸ್ಥರಾದ ಇನಯತ್ ಭಾಗ್ ಬಾನ್ ಕೆ.ಕೆ.ಆರ್.ಟಿ.ಸಿ.ವಿಭಾಗದ ನಿಯಂತ್ರಣಾಧಿಕಾರಿಗಳು (ಡಿ.ಸಿ) ಇವರು ಸಭೆಗೆ ಗೈರು ಹಾಜರಾಗಿರುವುದು
ಗಮನಿಸಿದ ವಸತಿ ಮತ್ತು ವಕಫ್ ಖಾತೆಯ ಸಚಿವ ಬಿ ಜೆಡ್ ಜಮೀರ್ ಅಹಮದ್ ಖಾನ್ ಜಿಲ್ಲಾಧಿಕಾರಿಗಳಿಗೆ ಕೂಡಲೇ ಅಮಾನತ್ತು ಗೊಳಿಸಲು ಸಭೆಯಲ್ಲಿ ಆದೇಶಿಸಿದ್ದರು ಕೂಡಲೇ ಅವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಳೂರು ಸಿದ್ದೇಶ್ ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ ಸಿದ್ದೇಶ್ ಅಂದು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇನಾಯತ ಭಗವಾನ್ ಅವರನ್ನು ಅಮಾನತ್ತು ಗೊಳಿಸಿರಿ
ಮತ್ತು ನಾನು ಹೇಳುವವರೆಗೂ ಅಮಾನತ್ತು ತೆರವುಗೊಳಿಸಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
ಕೆಕೆಆರ್ಟಿಸಿ ಡಿಸಿ ಇನಾಯತ್ ಭಾಗವಾನ್ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 2021ರ ನಿಯಮ 3(1)(i),(ii), (iii) ಗಳನ್ನು ಉಲ್ಲಂಘಿಸಿರುತ್ತಾರೆ. ಜಿಲ್ಲಾಧಿ ಕಾರಿಗಳು, ಕೂಡಲೇ ಕೆ.ಕೆ.ಆರ್.ಟಿ.ಸಿ.ವಿಭಾಗದ ನಿಯಂತ್ರಣಾಧಿಕಾರಿಗಳು (ಡಿ.ಸಿ) ಅಮಾನತ್ತು ಮಾಡಿ ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ್ಪಾರ್ ಮಲ್ಲಪ್ಪ ಸೇರಿದಂತೆ ಇತರರಿದ್ದರು.