ರಾಜ್ಕೋಟ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ದಾಖಲಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲರನ್ನು 122 ರನ್ಗಳಿಗೆ ಆಲೌಟ್ ಮಾಡಿದ ರೋಹಿತ್ ಪಡೆ ಬರೋಬ್ಬರಿ 434 ರನ್ಗಳ ದಾಖಲೆಯ ಜಯ ಸಾಧಿಸಿದೆ.ಈ ಐತಿಹಾಸಿಕ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡ ಆಲ್ ರೌಂಡ್ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ 557 ರನ್ಗಳ ಗುರಿಯನ್ನು ಬೆನ್ನಟ್ಟಿದ ಆಂಗ್ಲರು ಭಾರತದ ಮಾರಕ ದಾಳಿಗೆ ತತ್ತರಿಸಿ ಕೇವಲ 122 ರನ್ಗಳಿಗೆ ಆಲೌಟ್ ಆದರು. ಇಂಗ್ಲೆಂಡ್ ತಂಡವನ್ನು 434 ರನ್ಗಳಿಂದ ಮಣಿಸಿದ ಭಾರತ, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಇತಿಹಾಸ ನಿರ್ಮಿಸಿದೆ.