ಬಳ್ಳಾರಿ, ಏ.25: ಮಾದಿಗ, ಛಲುವಾದಿ, ಬಂಜಾರ, ಭೋವಿ, ಕೊರವ, ಕೊರಚ ಸೇರಿದಂತೆ ಹಲವಾರು ದಲಿತ ಸಮಾಜದ ಸಂಘಟನೆಗಳು ಈ ಸಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ ತುಕಾರಾಮ್ ರವರನ್ನು ಬೆಂಬಲಿಸಲಾಗುವುದು ಎಂದು ಮುಖಂಡರಾದ ಎ ಮಾನಯ್ಯ ತಿಳಿಸಿದರು.
ಅವರು ಇಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಬಿ.ಜೆ.ಪಿ ಮತದಾರರಿಗೆ ಸುಳ್ಳು ಹೇಳಿ ಗೆದ್ದು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ,
ಹದಿನೈದು ಲಕ್ಷ ಖಾತೆಗೆ ಜಮೆ, ಎರಡು ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ ಆದರೆ ಇಲ್ಲಿಯವರೆಗೂ ಯಾವುದೇ ಭರವಸೆಯನ್ನು ಈಡೇರಿಸದೇ ಜನರಿಗೆ ಮೋಸ ಮಾಡಿದ್ದಾರೆ, ದೇಶದ ಜನರು ಅತ್ಯಂತ ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಡೆಗಣಿಸಿ ಮಾತನಾಡುವ ಬಿ.ಜೆ.ಪಿ ಮುಖಂಡರು ಕೇವಲ ಆರ್.ಎಸ್.ಎಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ,
ಅದರ ಮುಖ್ಯಸ್ಥ ಸಹ ಸಂವಿಧಾನವನ್ನು ಅತ್ಯಂತ ಸೂಕ್ಷ್ಮವಾಗಿ ಬದಲಾಯಿಸೋಣ ಎಲ್ಲೂ ಆ ವಿಷಯದ ಬಗ್ಗೆ ಮಾತನಾಡಬೇಡಿ ಎಂದು ಬದಲಾಯಿಸುವ ಮಾತನಾಡುತ್ತಿದ್ದಾರೆಂದರು.
ಲೋಕಸಭಾ ಅಭ್ಯರ್ಥಿ ತುಕಾರಾಮ್ ಮಾತನಾಡಿ, ಸಂವಿಧಾನ ಮತ್ತು ನಮ್ಮ ನಿಮ್ಮ ರಕ್ಷಣೆಗೆ ಮತ್ತು ನಮ್ಮ ಮಕ್ಕಳ ಮುಂದಿನ ಒಳ್ಳೆಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಗೆ ಮತನೀಡಿ, ನಾನು ಎಂ.ಪಿ ಆದಲ್ಲಿ ಮಹಿಷಿ ವರದಿಯನ್ನು ಚಾಚು ತಪ್ಪದೆ ಜಾರಿಗೊಳಿಸಿ ಸಿ. ಮತ್ತು ಡಿ ಗ್ರೂಪ್ ನೌಕರಿಗಳು ಶೇ 100 ರಷ್ಟು ಸ್ಥಳೀಯರಿಗೆ ನೀಡುವಂತೆ ತಿದ್ದುಪಡಿ ಮಾಡಿಸುತ್ತೇನೆಂದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಭರತ್ ರೆಡ್ಡಿ ಮುಂಡ್ರಿಗಿ ನಾಗರಾಜ್, ಅಲ್ಲಂ ಪ್ರಶಾಂತ್ ಹುಮಯೂನ್ ಖಾನ್ ಕಂದಕೂರು ರಾಮುಡು, ಎಮ್ ನರೇಶ್ ಕುಮಾರ್, ಶ್ರೀನಿವಾಸ್ ಬಂಢಾರಿ, ಭೋವಿ ಜನಾಂಗದ ಜಲಾಲ್ ಕುಮಾರ್, ನಾಯಕ ಜನಾಂಗದ ಬಿ ಜಯರಾಮ್, ರಾಮ್ ಪ್ರಸಾದ್, ಬಂಜಾರ ಸಮಾಜದ ರಾಮಾನಾಯ್ಕ್ ಮತ್ತು ಚಂಪಾ ಚೌವ್ಹಾಣ್, ಮೋಚಿ ಜನಾಂಗದ ಬಿ ಶ್ವೇತಾ, ಸೇರಿದಂತೆ ಮುಖಂಡರಾದ ಎಲ್ ಮಾರೆಣ್ಣ ಸೇರಿದಂತೆ ಅನೇಕ ಜನರಿದ್ದರು