ಕೋಲಾರ, ಮೇ.17: ಬೇಲಿಯೇ ಎದ್ದು ಹೊಲ ಮೆಯ್ದಂತೆ” ಎನ್ನುವ ಗಾದೆ ಮಾತಿನಂತೆ ಖದೀಮರನ್ನ ಹಿಡಿಯುವ ಪೊಲೀಸರೇ ಕಳ್ಳರಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಪೇದೆ ಅನಿಲ್ ಎಂಬಾತ ಕಳವು ಕೇಸ್ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ ಅರ್ಧ ಕೆಜಿ ಚಿನ್ನವನ್ನು ಕದ್ದು ಎಸ್ಕೇಫ್ ಆಗಿದ್ದಾನೆ.
ಕಳವು ಕೇಸ್ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ ಅರ್ಧ ಕೆಜಿ ಚಿನ್ನವನ್ನು ಕ್ರೈಂ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಕಳವು ಮಾಡಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಪೇದೆ ಅನಿಲ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಫೆಬ್ರವರಿ 25ರಂದು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಚಿನ್ನದ ವ್ಯಾಪಾರಿ ಗೌತಮ್ ಚಂದ್ಗೆ ಸೇರಿದ 2 ಕೆಜಿ ಚಿನ್ನ ಕಳ್ಳತನವಾಗಿತ್ತು. ಈ ಪೈಕಿ 1 ಕೆ.ಜಿ 408 ಗ್ರಾಂ ರಿಕವರಿ ಮಾಡಲಾಗಿತ್ತು. ಆದರೆ, ಇದರಲ್ಲಿ 582 ಗ್ರಾಂ ಚಿನ್ನ ನಾಪತ್ತೆಯಾಗಿತ್ತು.
1 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಬದಲು, 1 ಕೋಟಿ 6 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಮಾತ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಕಳೆದ 15 ದಿನಗಳಿಂದ ಅಂದರೆ, ಲೋಕಸಭೆ ಚುನಾವಣೆ 2ನೇ ಹಂತದ ಮತದಾನದ ನಂತರ ಕ್ರೈಂ ಕಾನ್ಸ್ಟೇಬಲ್ ಅನಿಲ್ ನಾಪತ್ತೆಯಾಗಿದ್ದಾನೆ. ಇದೀಗ ಚಿನ್ನಾಭರಣ ಕಳವು ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸುವಂತೆ ಕೆಜಿಎಫ್ DySPಗೆ ಎಸ್ಪಿ ಶಾಂತರಾಜು ಸೂಚನೆ ನೀಡಿದ್ದಾರೆ.