ಸುವರ್ಣವಾಹಿನಿ ಸುದ್ಧಿ
ಬಳ್ಳಾರಿ.ಮಾ.25: ಮಾಜಿ ಸಚಿವರು, ಪರಿಶಿಷ್ಟ ಜಾತಿ ಮುಖಂಡರೂ ಆಗಿರುವ ಹೆಚ್. ಆಂಜನೇಯ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಬೇಕು ಎಂದು ನಿರಾಶ್ರಿತರ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರಾದ ಎ. ಮಾನಯ್ಯ, ಛಲವಾದಿ ಮಹಾ ಸಭಾ ಜಿಲ್ಲಾಧ್ಯಕ್ಷರು ಹಾಗು ಕಾಂಗ್ರೆಸ್ ಮುಖಂಡ ಛಲವಾದಿ ನರಸಪ್ಪ, ರೂಪನಗುಡಿ ಕಾಂಗ್ರೆಸ್ ಮುಖಂಡ ರಾಮಾಂಜಿನಿ, ರ್ರಿಸ್ವಾಮಿ ಹಲಕುಂದಿ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿರುವ ಅಸ್ಪೃಶ್ಯರೆಲ್ಲರೂ ಹೆಚ್ಚಿನ ಮಟ್ಟದಲ್ಲಿ ಅವರ ಬೆಂಬಲಿಗರು ಇದ್ದು, ಅವರ ಪರವಾಗಿದ್ದಾರೆ. ಅಲ್ಲದೆ, ಉತ್ತರ ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿ ಜನಾಂಗದ ಸಮುದಾಯವು ಹೆಚ್. ಆಂಜನೇಯ ಅವರ ಪರವಾಗಿದ್ದು, ಅವರಿಗೆ ಬೆಂಬಲವಾಗಿದ್ದಾರೆ. ಅಲ್ಲದೆ, ಆಂಜನೇಯ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವುದರಿಂದ ಪ್ರಸ್ತುತ ನಡೆಯುವ ಲೋಕಸಭಾ ಚುನಾವಣೆಯಲ್ಲೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ಅಲ್ಲದೆ, ಆಂಜನೇಯ ಅವರನ್ನು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವುದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಆಂಜನೇಯ ಅವರ ನೇತೃತ್ವದಲ್ಲಿ ಮತಯಾಚಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಆಂಜನೇಯ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದಾರೆ.