ಬಳ್ಳಾರಿ : ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಡಿ ಎಂ ಎಫ್ ಅನುದಾನದ ಅಡಿಯಲ್ಲಿ 2022 ರಲ್ಲಿ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿದ್ದು, ಶೌಚಾಲಯಗಳು ಆರೋಗ್ಯ, ಸ್ವಚ್ಛತಾ ಮತ್ತು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಅದಕ್ಕಿಂತ ಹೆಚ್ಚಾಗಿ ಜಿಲ್ಲಾಸ್ಪತ್ರೆಗೆ ಬರುವವರಲ್ಲಿ ಹೆಚ್ಚಾಗಿ ಗರ್ಭಿಣಿ ಸ್ತ್ರೀಯರು ಬಹು ಮುಖ್ಯವಾಗಿದ್ದು, ಆದರೆ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಿಸಿರುವ ಶೌಚಾಲಯಗಳನ್ನು ಬೀಗ ಹಾಕಿ ಮುಚ್ಚಿ ಇಟ್ಟಿರೋದು ದುರ್ದೈವ ಎನ್ನಬಹುದು, ಆರೋಗ್ಯಧಿಕಾರಿಗಳು ಇದರ ಬಗ್ಗೆ ಕೂಡಲೇ ಗಮನಹರಿಸಿ ಶೌಚಾಲಯದ ಬೀಗ ತೆಗೆದು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಪುನರಾರಂಭಿಸಬೇಕೆಂದು ಸಾಮಾಜಿಕ ಹೋರಾಟಗಾರರಾದ ರೆಕ್ಕಲ ವೆಂಕಟ ರಾಮರೆಡ್ಡಿ ವಿನಂತಿ.