ಆನೆಗುಂದಿ,ಅ.25 : ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.27-08-2024 ರಿಂದ 24-10-2024 ರವರೆಗೆ ಒಟ್ಟು 58 ದಿನಗಳ ಅವಧಿಯಲ್ಲಿ) ಒಟ್ಟು ರೂ.33,79,910/- ರೂ ಗಳು ಸಂಗ್ರಹವಾಗಿರುತ್ತದೆ. 4 ವಿದೇಶಿ ನಾಣ್ಯಗಳು( 2 ಯು ಎಇ,1 ಬ್ರೆಜಿಲ್,1 ಯು ಎಸ್ ಎ ನಾಣ್ಯ)ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ಈ ಸಂದರ್ಭದಲ್ಲಿ ಶಿರಸ್ತೇದಾರಾದ ಕೃಷ್ಣವೇಣಿ ,ರವಿಕುಮಾರ್ ನಾಯಕವಾಡಿ ,ಸುಹಸ್ , ಕಂದಾಯ ನಿರೀಕ್ಷಕರಾದ ಹಾಲೇಶ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ, ಅನ್ನಪೂರ್ಣ ಪ್ರ.ದ.ಸ, ಶೇಖರಪ್ಪ ಆಹಾರ ನಿರೀಕ್ಷಕರು,, ಗಾಯತ್ರಿ, ಶ್ರೀರಾಮ ಜೋಶಿ , ಸುಧಾ, ದ್ವಿ.ದ.ಸ, ನಾಗವೇಣಿ ,ಪೂಜಾ, ರಾಜು ಭಜಂತ್ರಿ ,ಮಂಜುನಾಥ ದುಮ್ಮಾಡಿ ,ವೀರಯ್ಯ, ರಾಘವೇಂದ್ರ, ಗ್ರಾಮ ಆಡಳಿತ ಅಧಿಕಾರಿ , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಧರ್,ಸುನಿಲ್ , ಸತೀಶ್, ಮಂಜುನಾಥ್ ಪೋಲಿಸ್ ಸಿಬ್ಬಂದಿ , ಹನುಮಂತಪ್ಪ ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಜರಿದ್ದರು
ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು.ಕಳೆದ ಬಾರಿ ದಿ .27/08/2024 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.36,96,983 /- ಸಂಗ್ರಹವಾಗಿತ್ತು.