ಬಳ್ಳಾರಿ,ಜ.೦3: ಬಳ್ಳಾರಿ ಜಿಲ್ಲೆಯಲ್ಲಿ ಒಂದಲ್ಲ, ಒಂದು ವಿಷಯಗಳು ಸದ್ದು ಮಾಡುತ್ತಿರುತ್ತವೆ, ಬಳ್ಳಾರಿ ಜಿಲ್ಲಾ ಆಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ಬೆಳಕಿಗೆ ಬಂದಿದ್ದು, ಬಿಮ್ಸ್ ಆಸ್ಪತ್ರೆ ಮಹಿಳೆಯರಿಗೆ ಸುರಕ್ಷಿತವಲ್ಲವೇ ಎಂಬ ಪ್ರಶ್ನೆ ಕಾಡತೊಡಗಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳಾ ಕಂಪ್ಯೂಟರ್ ಆಪರೇಟರ್ಗೆ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀಕ್ಷಕ ವಿ.ಕೆ.ವೆಂಕಟೇಶ್ ಎಂಬುವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಈ ಕುರಿತಾಗಿ ಸಂತ್ರಸ್ತೆ ವೆಂಕಟೇಶ್ ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಳ್ಳಾರಿ ಬಿಮ್ಸ್ನಲ್ಲಿ ಬಹಳ ವರ್ಷದಿಂದ ವಿಕೆ ವೆಂಕಟೇಶ ಸದ್ದು ಮಾಡಿದದ್ದರು. ಬಿಮ್ಸ್ನಲ್ಲಿ ಸಾಕಷ್ಟು ಪ್ರಭಾವ ಹೊಂದಿದ ಅಧಿಕಾರಿ, ಬಿಮ್ಸ್ನ ಕೆಲವರು ಲೂಟಿಕೋರರ ಗ್ಯಾಂಗ್ ಈ ಹೆಸರು ಪ್ರಚಲಿತವಾಗಿತ್ತು. ವಿ.ಕೆ.ವೆಂಕಟೇಶ ನೋಡೋಕೆ ಐಎಎಸ್ ಅಧಿಕಾರಿ ರೀತಿ ಫೋಸ್ ಕೊಡೊ ಈ ಅಸಾಮಿ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ. ಬಳ್ಳಾರಿ ಬಿಮ್ಸ್ನ ಆಡಳಿತ ಕಛೇರಿಯ ಮಹಿಳಾ ಸಿಬ್ಬಂದಿಯೊಬ್ಬರನ್ನು ಬ್ಲಾಕ್ಮೇಲ್ ಮಾಡಿ ಸತತವಾಗಿ ಎರಡು ವರ್ಷದಿಂದ ಲೈಂಗಿಕವಾಗಿ ಬಳಸಿಕೊಂಡು ಕಿರುಕುಳ ನೀಡಿದ ಆರೋಪದ ಮೇಲೆ ಈತನ ವಿರುದ್ಧ ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಗುರುವಾರ ರಾತ್ರಿಯೇ ಪ್ರಕರಣ ದಾಖಲಾಗಿ ಈಗ ಬಳ್ಳಾರಿ ಜೈಲು ಸೇರಿದ್ದಾನೆ.
ದೂರಿನಲ್ಲಿ ಏನಿದೆ?
ಅಧೀಕ್ಷಕ ವಿ.ಕೆ.ವೆಂಕಟೇಶ್ ಕಳೆದ ವರ್ಷ ನವೆಂಬರ್ ೨೫ ರಂದು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿ, ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ನಿಮ್ಮ ಕುಟುಂಬದ ಮರ್ಯಾದೆ ಹರಾಜು ಹಾಕುತ್ತೇನೆ ಅಂತ ಎದರಿಸಿದ್ದಾನೆ.
ನಂತರ, ಸಂತ್ರಸ್ತೆಯನ್ನು ಬಲವಂತವಾಗಿ ಕಾರ್ನಲ್ಲಿ ಕೂಡಿಸಿಕೊಂಡು ಬೆಳಗಲ್ ರಸ್ತೆ ಬಳಿಯ ಆಕಾಶವಾಣಿ ಕೇಂದ್ರದ ಹತ್ತಿರ ಇರುವ ಲೇ-ಔಟ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೇ ರೀತಿಯಾಗಿ ಸಂತ್ರಸ್ತೆ ಮೇಲೆ ಪದೇ ಪದೇಅಧೀಕ್ಷಕ ವಿಕೆ ವೆಂಕಟೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಅಲ್ಲದೇ, “ನಿನ್ನ ಪತಿಯ ನಡವಳಿಕೆ ಸರಿ ಇಲ್ಲ, ಅವನನ್ನು ಏಕೆ ಮದುವೆಯಾದೆ? ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ನಿನ್ನ ಪತಿ ಮತ್ತು ಕುಟುಂಬದರ ಮೊಬೈಲ್ಗೆ ಬಿಡುತ್ತೇನೆ. ನಿನ್ನನ್ನು ಬೀದಿಯಲ್ಲಿ ನಿಲ್ಲಿಸುತ್ತೇನೆ. ನಿನ್ನ ತಂಗಿ ಮತ್ತು ತಾಯಿಯನ್ನು ವೇಶ್ಯವಾಟಿಕೆ ಪ್ರಕರಣದಲ್ಲಿ ಜೈಲಿಗೆ ಕಳುಹಿಸುತ್ತೇನೆ” ಎಂದು ಅಧೀಕ್ಷಕ ವಿಕೆ ವೆಂಕಟೇಶ್ ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ
ವೆಂಕಟೇಶ ಈ ಹಿಂದೆ ವಿಮ್ಸ್ನಲ್ಲಿ ಸಾಕಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದು, ಅಲ್ಲೆ ಈ ಸಂತ್ರಸ್ತೆಗೆ ಪರಿಚಯ ಮಾಡಿಕೊಂಡು ಕೆಲಸದ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಸಂತ್ರಸೆÀ್ತ ನಿರಾಕರಿಸಿದ್ದಾಳೆ, ಮರ್ಯಾದೆೆಗೆ ಅಂಜಿ ಯಾರಿಗೂ ಹೇಳದೆ ಸುಮ್ಮನಾಗಿದ್ದಾಳೆ. ನಂತರ ಈ ವಿಕೆ ಆ ಸಂತ್ರಸ್ತೆ ಯುವತಿಗೆ ಮತ್ತು ಬರುವ ಜ್ಯೂಸ್ ನೀಡಿ ತನ್ನ ಕಾರಿನಲ್ಲಿ ಹೊರಗಡೆ ಕರೆದ್ಯೊದು ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಬಳ್ಳಾರಿ ಬಿಮ್ಸ್ನ ಈ ಲೈಂಗಿಕ ಕಾಮುಕ ಅಧಿಕಾರಿಗಳಿಂದ ಬಿಮ್ಸ್ ಆಸ್ಪತ್ರೆಗೆ ಗ್ರಹಣ ಬಡಿದಿದೆ. ಸದ್ಯ ಬಿಮ್ಸ್ನ ಪ್ರಮುಖ ಹುದ್ದೆಯಲ್ಲಿರುವ ಓರ್ವ ಅಧಿಕಾರಿಯು ಸಹ ಬಿಮ್ಸ್ನ ಮಹಿಳಾ ಉದ್ಯೋಗಿಯೋಬ್ಬರನ್ನು ತನ್ನ ಕಾರಿನಲ್ಲಿ ರಾತ್ರಿ ವೇಳೆ ಮೋಕಾ ರಸ್ತೆಗೆ ಕರೆದ್ಯೊದು ಕಾರಿನಲ್ಲೆ ಸರಸ ಸಲ್ಲಾಪವಾಡಿದ ವಿಡಿಯೋ ಒಂದು ಸಾರ್ವಜನಿಕ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ ಈ ವಿಡಿಯೋ ಬಹಿರಂಗಗೊAಡು ಈ ಪ್ರಕರಣವೂ ಸಹ ಸದ್ಯದಲ್ಲೆ ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬಿಮ್ಸ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಸುರಕ್ಷತೆ ಇದೆಯಾ? ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಕಂಪ್ಯೂಟರ್ ಆಪರೇಟರ್ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿ ಅಧಿಕ್ಷಕ ವಿಕೆ ವೆಂಕಟೇಶ್ ರಿಂದ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಸಂತ್ರಸ್ತೆ ದೂರು ದಾಖಲಿಸಿದ್ದು, ವೆಂಕಟೇಶ್ ಬ್ಲಾ÷್ಯಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದ ಬಿಮ್ಸ್ ಆಸ್ಪತ್ರೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿವೆ.
ಕ್ರಮ ಜರುಗಿಸಿ
ಬಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳಾ ಕಂಪ್ಯೂಟರ್ ಆಪರೇಟರ್ಗೆ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀಕ್ಷಕ ವಿ.ಕೆ.ವೆಂಕಟೇಶ್ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದು, ವ್ಯಕ್ತಿಯ ಮೇಲೆ ಕ್ರಮ ಜರುಗಿಸಿ ಕೆಲಸದಿಂದ ವಜಾ ಮಾಡಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿ ಆಗ್ರಹಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ನಿರ್ವಸುತ್ತಿರುವ ಯುವತಿಯು ಆರು ತಿಂಗಳ ಹಿಂದಯೇ ಮದುವೆಯಾಗಿದ್ದು, ಆದರೆ ವಿಕೆ ವೆಂಕಟೇಶ್ ಮಾನಸಿಕ ಹಿಂಸೆ ನೀಡಿರುತ್ತಾನೆ. ಈಗ ಯುವತಿ ಜೀವನ ಹಾಳು ಮಾಡಿದ್ದು, ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಿಗೆ ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಉರುಕುಂದ.ಯು ಆಗ್ರಹಿಸಿದ್ದಾರೆ.