ಬಳ್ಳಾರಿ, ಏ.29: ಒಂದು ಬಾರಿ ಆಡಳಿತ ಮಾಡಿ ಅಂತ ಕಳಿಸಿದರೆ ಹತ್ತು ವರ್ಷ ಆಡಳಿತ ನಡೆಸಿದರೂ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ನಟ ಪ್ರಕಾಶ್ ರೈ ನಗರದಲ್ಲಿಂದು ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ದೇಶದ ಜನರ ಕಲ್ಯಾಣ ಯಾವಾಗ? ಬರೀ ಪ್ರಧಾನಿ ಮೋದಿ ಕಲ್ಯಾಣ ವಾಗುತ್ತದೆಂದಿದ್ದಾರೆ.
ರಾಮ ಮಂದಿರ ಪ್ರತಿಷ್ಠಾಪನೆ ವೇಳೆ ವಿಪಕ್ಷದವರು ಬರಲಿಲ್ಲ ಹಾಗಾಗಿ ಅವರಿಗೆ ಮತ ನೀಡಬೇಡಿ ಎಂದು ಹೇಳಿದ್ದು ಎಷ್ಟು ಸರಿ. ಹಿಂದು ಮಠದ ಸ್ವಾಮಿಗಳು ಬರಲಿಲ್ಲ ಅಂದರೆ ಅವರು ದೇಶದ್ರೋಹಿಗಳಾ?, ರೈತರು, ಉದ್ಯೋಗ ಬಗ್ಗೆ ಮಾತನಾಡಲಿಲ್ಲ. ಮಠದ ಹೆಸರಿನಲ್ಲಿರುವ ಮೋದಿ ಅವರು ಮಠ, ಮಂದಿರ, ಮುಸ್ಲಿಂ ಬಗ್ಗೆ ಮಾತನಾಡಲು ನಾಚಿಕೆ ಇಲ್ವಾ. ದೇಶದ ಭವಿಷ್ಯಕ್ಕೆ ಅವಶ್ಯವಿರುವ ಕಾನೂನು ಜಾರಿ ಮಾಡಬೇಕು.
ಕಳೆದ ಹತ್ತು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ಜನರಿಗೆ ಹೇಳಬೇಕು. ಕಳೆದ ಎರಡು ಚುನಾವಣೆಯಲ್ಲಿ ಮಾತನಾಡಿದ್ದನ್ನು ಈ ಬಾರಿಯೂ ಮಾತನಾಡಲಾಗುತ್ತದೆ.
ಪ್ರಣಾಳಿಕೆಯಲ್ಲಿ ಮುಸ್ಲಿಂ ವಿಚಾರ ಯಾಕೆ, ರಾಜ್ಯದಿಂದ 25 ಸಂಸದರನ್ನು ಕಳೆದ ಬಾರಿ ಆಯ್ಕೆ ಮಾಡಿ ಕಳುಹಿಸಿತ್ತು ಅವರೆಲ್ಲ ಐದು ವರ್ಷ ಎಲ್ಲಿ ಹೋಗಿದ್ದರು? ಎಲ್ಲಿ ಹೋದರು ಈಗ ಮೋದಿ ನೋಡಿ ಮತ ನೀಡಿ ಎಂದು ಕೇಳಲಾಗುತ್ತದೆ.
ಬರ ಪರಿಹಾರ ವಿಚಾರದಲ್ಲಿ ಈ ಸಂಸದರು ಏನು ಮಾಡಿದರು. ಕೊನೆಗೆ ಸುಪ್ರೀಂಕೋರ್ಟ್ ಚೀಮಾರಿ ಬಳಿಕ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಉದ್ಯೋಗ ಇಲ್ಲ ಎಂದರೆ ಪಕೋಡ ಮಾರಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಆಶ್ವಾಸನೆಗಳ ಬಗ್ಗೆ ಕೇಳಿದರೆ ದೇಶ ದ್ರೋಹಿಗಳು ಎನ್ನುತ್ತಾರೆ. ಒಂದು ಜಾತಿಯನ್ನು ಬೇರೆ ಇಟ್ಟು ಮಾತನಾಡುತ್ತಾರೆ. ನೂರು ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದವರು ಕನಿಷ್ಟ ಹತ್ತು ಸ್ಮಾರ್ಟ್ ಸಿಟಿಯನ್ನು ಮಾಡಿರುವುದನ್ನು ತೋರಿಸಲಿ ಎಂದರು.
ಯುವಕರು, ರೈತರು, ಮಣಿಪುರದ ಜನರ ನೋವು ಮೋದಿ ಅವರ ಪರಿವಾರ ಅಲ್ಲವೇ?. ಮೋದಿ ದೇಶ ದ್ರೋಹಿ. ರಾಜ್ಯದ ಸಂಸದರು ಜನರ ಪ್ರತಿನಿಧಿಗಳಾ ಅಥವಾ ಹೊಗಳು ಬಟ್ಟರಾ. ಬಳ್ಳಾರಿ ಅಭ್ಯರ್ಥಿಗೆ ಹಣ ಇದೆಯಂತ ಟಿಕೆಟ್ ಕೊಟ್ಟಿದ್ದಾರೆ. ಕಳ್ಳರು, ಭ್ರಷ್ಟಾಚಾರಿಗಳಿಗೆ ಬಿಜೆಪಿಯಲ್ಲಿ ನೆಲೆ ಕೊಟ್ಟಿದ್ದಾರೆ. ಕಾಮುಕರು, ವಿಕೃತ ಕಾಮಿಗಳು, ದರೋಡೆಕೋರರು ಬಿಜೆಪಿಯಲ್ಲಿದ್ದಾರೆಂದು ಆರೋಪಿಸಿದ್ದಾರೆ.
ನಾನು ಯಾವುದೇ ಪಕ್ಷಕ್ಕೆ ಸೀಮಿತವಿಲ್ಲ. ದೇಶ, ಸಮಾಜ ದಾರಿ ತಪ್ಪುತ್ತಿದ್ದಾಗ ಜನರನ್ನು ಎಚ್ಚರಿಸುವುದು ನನ್ನ ಕರ್ತವ್ಯ. ನಾಳೆಯ ಭವಿಷ್ಯ ಮೌನವಾಗಿದ್ದವರನ್ನು ಕ್ಷಮಿಸಲ್ಲ. ರಾಜಕಾರಣದಲ್ಲಿ ಆಡಳಿತ ಪಕ್ಷ ಸೋಲುತ್ತದೆ. ವಿಪಕ್ಷ ಗೆಲ್ಲುತ್ತದೆ. ಮನೆಯಲ್ಲಿರಬೇಕಿರಬೇಕಿದ್ದು ಧರ್ಮ ಚುನಾವಣೆಯಲ್ಲಿ ಮತ ಕೇಳಲು ರಾಮ ಮಂದಿರ ನಿರ್ಮಿಸಲಾಗಿದೆ. ಉತ್ತರ ಪ್ರದೇಶದ ಕಾಲೇಜಿನಲ್ಲಿ ಪ್ರಳ್ನೆಗೆ ಉತ್ತರ ಗೊತ್ತಿಲ್ಲ ಕೆಲ ಕಿಡಿಗೇಡಿಗಳು ಜೈ ಶ್ರೀರಾಮ ಎಂದು ಬರೆದಿದ್ದು, ಅವರಿಗೆ ಅಂಕ ನೀಡಿದ್ದು ವಿಪರ್ಯಾಸವಾಗಿದೆ.
ರೈತರ ಹಸಿವು, ಆತ್ಮಹತ್ಯೆ ಮೋದಿಗೆ ಅರ್ಥವಾಗುವುದಿಲ್ಲ. ರೈತರ ನೋವು, ವಿದ್ಯೆಯ ಮಹತ್ವ ಗೊತ್ತಿಲ್ಲ. ಓದಿದರೆ ಮಾತ್ರ ವಿದ್ಯೆ ಮಹತ್ವ ಗೊತ್ತಿಲ್ಲ. ಚುನಾವಣಾ ಬಾಂಡ್ ಮತ್ತೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಕುಟುಂಬ ರಾಜಕಾರಣ ಎಂದವರೆ ಆ ಪಕ್ಷದೊಂದಿಗೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವುದು ನಾಚಿಕೆ ಇಲ್ವಾ. ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಹೆಲಿಕ್ಯಾಪ್ಟರ್ ಕಳಿಹಿಸದ ಇವರು ಸ್ವಾಮೀಜಿಗೆ ಕಳುಹಿಸುತ್ತಾರೆ. ಕರ್ನಾಟಕದವರು ಪಾಪಿಗಳೆನ್ನುತ್ತಿದ್ದಾರೆ ಚುನಾವಣೆಯಲ್ಲಿ ಧರ್ಮದ ಆಧಾರದಲ್ಲಿ ಮಾಡಲು ಬಿಡುವುದಿಲ್ಲ. ಅಂಧ ಭಕ್ತರನ್ನು ಪ್ರೀತಿಯಿಂದ ಮಾತನಾಡಿಸೋಣ. ನೇಹಾ ಹತ್ಯೆ ಪ್ರಕರಣವನ್ನು ಕೋಮು ಗಲಭೆ ಸೃಷ್ಠಿಸಿದ್ದಾರೆಂದರು.
ಹಾಸನದಲ್ಲಿ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಅವರು ಹಿಂದುಗಳಲ್ವಾ. ಯಾಕೆ ಇದನ್ನು ಪ್ರತಿಭಟಿಸುತ್ತಿಲ್ಲ ಎಂದರು.
ಜನತೆ ಜವಾಬ್ದಾರಿ ಪ್ರಜೆಯಾಗಿ ಮತಚಲಾಯಿಸಿ. ರಾಜ್ಯ ಸರಕಾರದ ಗ್ಯಾರಂಟಿ ಉತ್ತಮ ಯೋಜನೆಯಾಗಿದೆ. ಜನರ ತೆರಿಗೆ ಹಣ ವಾಪಸ್ ಜನರಿಗೆ ಕೊಡಲಾಗುತ್ತದೆ. ಇದರಲ್ಲಿ ತಪ್ಪೇನಿದೆ. ಬಿಜೆಪಿ ಗ್ಯಾರಂಟಿ ವಾರಂಟಿಯಿಲ್ಲದ ಗ್ಯಾರಂಟಿಗಳು ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾನಯ್ಯ, ಶಿವಶಂಕರಪ್ಪ, ಅಬ್ದುಲ್ಲಾ, ಆರ್ ಪಿ ವೆಂಕಟೇಶ್ ಚಂದ್ರಕುಮಾರಿ ಸೇರಿದಂತೆ ಅನೇಕ ಸಾಹಿತಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು