ಬಳ್ಳಾರಿ: ಮದ್ಯಪಾನ ಮಾಡುವವರಿಗೆ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿದ್ದು, ಒಕ್ಕೂಟದವರು ಸ್ವ ಸಹಾಯ ಸಂಘದ ಸದಸ್ಯರು ಸಾರ್ವಜನಿಕರು, ಸ್ಥಳೀಯ ಸಂಘ–ಸಂಸ್ಥೆಗಳು ಕೈಜೋಡಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅವರು ಹೇಳಿದರು.
ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿ ದೇವಸ್ಥಾನದ ದಾಸೋಹ ಸೇವಾ ಸಂಘದ ಯಾತ್ರಾ ನಿವಾಸದಲ್ಲಿ ಬಳ್ಳಾರಿ-1 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ನಡೆದ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಒಂದು ವಾರಗಳ ಕಾಲ ಮದ್ಯ ವರ್ಜನ ಶಿಬಿರ ನಡೆಯಲಿದೆ, ಶ್ರೀ ಧರ್ಮಸ್ಥಳ ಕ್ಷೇತ್ರದ ಮಹಿಮೆ ಕುರಿತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲಾಗುವುದು. ಮಧ್ಯವರ್ಜನ ಶಿಬಿರ ಯೋಜನೆಯಿಂದ ಕಡು ಬಡವರು ಮಧ್ಯಮವರ್ಗದವರು ಹಾಗೆಯೇ ಇತ್ತೀಚಿನ ದಿನಗಳಲ್ಲಿ ಯುವಕರು ಮಧ್ಯ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಕುಡಿತದಿಂತ ಮುಕ್ತಿ ನೀಡಿ ಹೊಸ ಜೀವನಕ್ಕೆ ದಾರಿ ಡಿಯೋವಾಗಿರುವ ಮದ್ಯ ವರ್ಜನ ಶಿಬಿರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಲ್. ವಿರೂಪಾಕ್ಷಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆರೆ ತುಂಬಿಸುವ ಯೋಜನೆ, ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಬೇಕು, ಮಧ್ಯವ್ಯಸನಿಗಳನ್ನು ಮಧ್ಯದಿಂದ ಮುಕ್ತ ಮಾಡುವ ಸಂಕಲ್ಪವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ, ಸರ್ಕಾರ ಮಾಡುವ ಕೆಲಸವನ್ನು ಯೋಜನೆ ಮಾಡುತ್ತಿದ್ದು, ನಿಜಕ್ಕೂ ಶ್ಲಾಘನೀಯ ಎಂದರು.
ಕಲ್ಯಾಣ ಕರ್ನಾಟಕ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ನಾಗೇಶ್ ಅವರು ಮಾತನಾಡಿ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು, 8 ದಿನಗಳ ಕಾಲ ನಡೆಯುವ ಶಿಬಿರದ ಸದುಪಯೋಗವನ್ನು ಪಡೆಯಬಹುದು ಎಂದರು. ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾಗಿ ವೈ.ಎಸ್. ಏರ್ರಣ್ಣ ಹಾಗೂ ಗೌರವಾಧ್ಯಕ್ಷರಾಗಿ ಎಚ್. ಬಾಳನಗೌಡ್ರು ಅವರು ಸರ್ವ ಸದಸ್ಯರ ಸಹಮತ ಮೇರೆಗೆ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಕ್ಷೇತ್ರ ಯೋಜನಾಧಿಕಾರಿ ವೆಂಕಟೇಶ ಪಟಗಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರೂಪಶ್ರೀ, ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ನ ಸದಸ್ಯರು ಹಾಗೂ ಏರ್ರಿತಾತ ದಾಸೋಹ ಸಮಿತಿಯ ಸದಸ್ಯರು. ಚೇಳ್ಳಗುರ್ಕಿ ಗ್ರಾಮ ಪಂಚಾಯತ್ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು, ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಯೋಜನೆಯ ಕಾರ್ಯಕರ್ತರು ಭಾಗವಹಿಸಿದ್ದರು.
ಕೆರೆ ತುಂಬಿಸುವ ಯೋಜನೆ, ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಬೇಕು, ಮಧ್ಯವ್ಯಸನಿಗಳನ್ನು ಮಧ್ಯದಿಂದ ಮುಕ್ತ ಮಾಡುವ ಸಂಕಲ್ಪವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ, ಸರ್ಕಾರ ಮಾಡುವ ಕೆಲಸವನ್ನು ಯೋಜನೆ ಮಾಡುತ್ತಿದ್ದು, ನಿಜಕ್ಕೂ ಶ್ಲಾಘನೀಯ.
ಎಲ್. ವಿರೂಪಾಕ್ಷಪ್ಪ- ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಬಳ್ಳಾರಿ.