ಗಂಗಾವತಿ,ಸೆ.14 : ತಾಲೂಕಿನ ವಿವಿಧಡೆ ಅಕ್ರಮ ಮರುಮು ದಂದೆ ಎಗ್ಗ ಇಲ್ಲದೆ ನಡೆಯುತ್ತಿದ್ದು, ದಂಧೆಕೋರರು ರಾಜಾರೋಷವಾಗಿ ಜೆಸಿಬಿಗಳಿಂದ ಮರಮ್ ಸಾಗಾಟ ಮಾಡುತ್ತಿದ್ದರೂ, ಅಕ್ರಮ ನಿಯಂತ್ರಣ ಮಾಡುವಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭುವಿಜ್ಞಾನಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ತಾಲೂಕಿನ ವೆಂಕಟಗಿರಿ ಹೋಬಳಿಯ ವಿಠಲಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವೆಡೆ ಮರಮ್ ಮಾಫಿಯಾ ನಡೆಯುತ್ತಿದ್ದು ಮರುಮ್ ನ್ನು ವಾಹನಗಳು ಪ್ರತಿನಿತ್ಯ ನಿರಂತರವಾಗಿ ಸಾಗಿಸುತ್ತಿದ್ದು ಕೆಲ ವಾಹನಗಳು ಪರವಾನಿಗೆ ಸಹಿತ ಸಂಚಾರ ನಡೆಸಿದರೆ ಇನ್ನು ಬಹುತೇಕ ಟಿಪ್ಪರ್ ವಾಹನಗಳು ಪರವಾನಗಿ ರಹಿತ ಹಾಗೂ ಅವಧಿ ಮುಗಿದಿರುವ ಪರವಾನಿಗೆ ಮತ್ತು ಒಂದೇ ಪರವಾನಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಾಹನಕ್ಕೆ ಬಳಸಿಕೊಳ್ಳುತ್ತಿದ್ದಾರೆ
ಹಾಗೂ ಪರವಾನಿಗೆಯಲ್ಲಿರುವ ದಿನಾಂಕ ಮತ್ತು ಸಮಯವನ್ನು ಎಡಿಟಿಂಗ್ ಮಾಡುವ ಮೂಲಕ ಸುಳ್ಳು ಪರವಾನಿಗೆ ಫೋನ್ ಗಳಲ್ಲಿ ಫೋಟೋ ತೋರಿಸುವ ಮೂಲಕ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಮು ಸಾಗಾಟ ಮಾಡುತ್ತಿರುವುದು ಅಧಿಕಾರಿಗಳ ಗಮನಿಕ್ಕಿದ್ದರೂ ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಗಂಗಾವತಿ ತಾಲೂಕು ಮರಳುಗಾರಿಕೆಗೆ ಮೊದಲಿನಿಂದಲೂ ಹೆಸರುವಾಸಿ. ಕಳೆದ ನಾಲ್ಕೈದು ವರ್ಷಗಳಲ್ಲಿ ಮರಳಿಗೆ ಬಂಗಾರದ ದರ ಎಂದರೂ ತಪ್ಪಾಗಲಿಕ್ಕಿಲ್ಲ. ಅದರಂತೆಯೇ ಮರುಮ್ ಅಕ್ರಮಗಳಿಗೆ ಕೊನೆಯಿಲ್ಲ ಎನ್ನುವಂತಾಗಿದೆ. ಮರಮ್ ದಂಧೆ ತಾಲೂಕದ್ಯಂತ ತಲೆಯೆತ್ತಿ ನಿಂತಿದೆ ಮರಮ್ ಗೆ ಕೂಡ ಚಿನ್ನದ ಬೆಲೆ ಬಂದಂತಾಗಿದೆ. ನಗರಗಳಲ್ಲಿ ಹೊಸದಾಗಿ ಲೇಔಟ್ ನಿರ್ಮಾಣಕ್ಕೆ ಮರುಮ್ ಹೆಚ್ಚಿನ ಬೇಡಿಕೆ ಇದ್ದು
ಇದನ್ನೇ ಬಂಡವಾಳವಾಗಿಸಿಕೊಂಡ ಬಂಡವಾಳ ಶಾಹಿಗಳು ಹೆಚ್ಚಿನ ಆಸೆಗಾಗಿ ಪರವಾನಿಗೆ ಪಡೆಯದೇ, ಇರುವ ಸ್ಥಳದಲ್ಲಿ ಕೂಡ ಸಂಪತ್ಭರಿತ ಭೂತಾಯಿ ಒಡಲಿಗೆ ಕೈ ಹಾಕಿ ಈ ನಾಡಿನ ಸಂಪತ್ತನ್ನು ಲೂಟಿ ಮಾಡುವ ಕೆಲಸವನ್ನು ಮಾಡುತ್ತಿರುವುದರ ಖಂಡನೆ.
ಗಂಗಾವತಿ ತಾಲೂಕಿನ ಮರಮ್ ಮಾಫಿಯ ಕಿಂಗ್ ಪಿನ್ ರಸೂಲ್ !?
ಗಂಗಾವತಿ ತಾಲೂಕಿನ ವಡ್ಡರಟ್ಟಿ ನಿವಾಸಿಯಾದ ರಸೂಲ್ ಮರಮ್ ನ್ನು ಒಂದು ಪರವಾನಿಗೆಯಲ್ಲಿ ಎರಡಕ್ಕಿಂತ ಹೆಚ್ಚು ಟಿಪ್ಪರಗಳಿಗನ್ನು ಬಳಸುತ್ತಿದ್ದು ನಿರ್ಭಯವಾಗಿ, ಯಾರ ಭಯವಿಲ್ಲದೆ,ಮರಮ್ ಅಕ್ರಮವಾಗಿ ಸಾಗಿಸುತ್ತಿದ್ದಾರೆ
ಇದನ್ನು ಪ್ರಶ್ನಿಸಲು ಹೋಗುವ ಸಂಘಟನೆಗಳಿಗೆ ಬೆದರಿಕೆ ಹಾಕುವುದು ಅಧಿಕಾರಿಗಳಿಗೆ ದೂರು ನೀಡದಂತೆ ಮರಮು ದಂದೆಯ ಸರ್ವಾಧಿಕಾರಿ ಯಂತೆ ವರ್ತಿಸುತ್ತಿದ್ದಾರೆ ಇದರ ವಿರುದ್ಧ ಹೋರಾಟಕ್ಕೆ ಮುಂದಾಗುವ ಸಂಘಟನೆಗಳ ನಾಯಕರ ವಿರುದ್ಧ ಅನೇಕ ಪ್ರಬಲ ರಾಜಕೀಯ ವ್ಯಕ್ತಿಗಳ ಹೆಸರನ್ನು ಹೇಳಿ ಕಿಂಗ್ ಪಿನ್ನಂತೆ ವರ್ತಿಸುತ್ತಿರುವುದು ಖಂಡನೀಯ.ಅಧಿಕಾರಿಗಳು ಈ ಕೂಡಲೇ ದಂಧೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು.
ಅಜಯ್ ಕುಮಾರ್ ಚಲವಾದಿ
ಜಿಲ್ಲಾ ಅಧ್ಯಕ್ಷರು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ.