ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೨: ಅಚಲವಾದ ನಂಬಿಕೆ ಹಾಗೂ ನಿರ್ಭೀತಿಯಿಂದ ದೋಣಿ ಸಾಗಿಸಿ ದಡಮುಟ್ಟಿಸುತ್ತಿದ್ದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚೌಡಯ್ಯ ಜಯಂತಿ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ ಮಾತನಾಡಿದ ಅವರು ಚೌಡಯ್ಯ ಅವರ ವಚನಗಳು ಆಡಂಬರದಿAದ ಕೂಡಿರದೆ,ನೈಜತೆಯಿಂದ,ವೈಚಾರಿಕತೆಯಿಂದ ಕೂಡಿವೆ.
ನಿಷ್ಠೆ ಹಾಗೂ ಸತ್ಯಕ್ಕೆ ಹತ್ತಿರವಾದ ರೀತಿಯಲ್ಲಿ ವಚನಗಳನ್ನು ರಚಿಸಿ ನಿಷ್ಠೂರ ಹಾಗೂ ತಾರ್ಕಿಕ ವಚನಗಾರರೆಂದೇ ಬಿಂಬಿತರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ನೈಜತೆ ಹಾಗೂ ವೈಚಾರಿಕತೆಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಹೇಳಿದರು.
ಚಿತ್ರಕಲೆಯಲ್ಲಿ ವಿಜೇತ ಮಕ್ಕಳಾದ ಎಂಟನೇ ತರಗತಿ ಕುರುಬರ ಮನೋಹರ,ಟಿ.ಮಹೇಶ ಹಾಗೂ ಏಳನೇ ತರಗತಿ ಚಂದನ ಗೆ ಬಹುಮಾನ ವಿತರಿಸಲಾಯಿತು. ಕನ್ನಡ ಶಿಕ್ಷಕರಾದ ಶ್ವೇತಾ, ಸಮಾಜ ಶಿಕ್ಷಕರಾದ ಶಶಮ್ಮ, ನಲಿಕಲಿ ಶಿಕ್ಷಕರಾದ ರಾಮಾಂಜಿನೇಯ, ಅಂಗನವಾಡಿ ಕಾರ್ಯಕರ್ತೆ ನಿಂಗಮ್ಮ, ಊರಿನ ಲಕ್ಮ್ಷೀ ಮುಂತಾದವರು ಉಪಸ್ಥಿತರಿದ್ದರು.