ಬಳ್ಳಾರಿ,ಫೆ.10; ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಅಭಿವೃದ್ಧಿಯ ಕಾರ್ಯಗಳು ನೆನಗುದಿಗೆ ಬಿದ್ದಿರುವ, ಕುಂಠಿತ ಗೊಂಡಿರುವ ಬಗ್ಗೆ ಮನವಿಯನ್ನು ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ ನಾಗೇಂದ್ರ ರವರ ಗೃಹ ಕಛೇರಿಗೆ ತೆರಳಿ, ಅವರ ಸಹೋದರರಾದ ವೆಂಕಟೇಶ್ ಪ್ರಸಾದ್ ರವರಿಗೆ ಸರ್ಕಾರಿ ಅಪ್ತಸಹಾಯಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಕೆ. ಬಿ. ವೆಂಕಟೇಶ್ವರ ನೇತೃತ್ವದಲ್ಲಿ ಜಿಲ್ಲಾದ್ಯಕ್ಷರಾದ ಅನಿಲ್ ಕುಮಾರ್ ನಾಯ್ಡು, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಗುರುಲಿಂಗನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೋಮನಗೌಡ, ನಗರದ ಪ್ರಧಾನ ಕಾರ್ಯದರ್ಶಿಗಳಾದ ರಾಮಾಂಜಿ, ಜಿಲ್ಲಾ ಖಜಾಂಚಿಯಾದ ಮಾರುತಿ ಪ್ರಸಾದ್, ಮಹಾನಗರ ಪಾಲಿಕೆಯ
ಸದಸ್ಯರಾದ ಕೆ.ಹನುಮಂತಪ್ಪ, ಅಮರನಾಥ್, ಅಶೋಕ್ ತಡೂರ್, ಹೇಮಂತ್, ಸಿದ್ದೇಶ್ ಉಳೂರು, ಮಲ್ಲೇಶ್ ಸೇರಿದಂತೆ ಹಲವಾರು ಜನರಿದ್ದರು