ಬಳ್ಳಾರಿ,ಜ.09: ಜಿಲ್ಲೆಯ ಕುರುಗೋಡುವ್ಯಾಪ್ತಿಯ ಎಮ್ಮಿಗನೂರು ಎಸ್.ವಿ.ಎಂ.ಶಾಲೆಯ ೧೦ನೇ ತರಗತಿಯ ಕೆ.ವಿ.ಹನುಮಂತ ಎನ್ನುವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರಾದ ಟಿ.ಶ್ಯಾಮ್ಭಟ್ ಹಾಗೂ ನ್ಯಾಯಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರನ್ನು ಬಾಲಕನ ಜೊತೆ ಕುಟುಂಬ ಭೇಟಿಮಾಡಿ ಮನವಿ ಪತ್ರ ಸಲ್ಲಿಸಿದರು.
ಪೊಲೀಸರ ಈ ನಡೆ ಸರಿಯಲ್ಲ ಎಂದು ಅಳಲನ್ನು ತೊಡಿಕೊಂಡರು. ವಿದ್ಯಾರ್ಥಿಯನ್ನು ಮನಬಂದAತೆ ಥಳಿಸಿದ್ದ ಆರೋಪಿಗಳನ್ನು ಕೂಡಲೇ ಬಂಧಿಸಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವ ಜೊತೆಗೆ ಕುರುಗೋಡು ಪಿಎಸ್ಐ ಸುಪ್ರೀತ್ ಮೇಲೆ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಬೇಕು ಎಂದರು.
ಪೊಲೀಸರು ರಾಜಕೀಯ ಪ್ರೇರಿತವಾಗಿ ಹಲ್ಲೆ ನಡೆಸಿದವರಿಂದಲೇ ಕೌಂಟರ್ ಪ್ರಕರಣ ದಾಖಲಿಸಿದ್ದು, ಇದರಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಕಳಂಕ ಮೂಡಿಸಲು ಹೊರಟಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು.
ದಾಖಲಾದ ಎಫ್ಐಆರ್ನಲ್ಲಿ ವಿದ್ಯಾರ್ಥಿ ಮೇಲೆ ಮತ್ತು ಅವರ ಅಜ್ಜನ ಹೆಸರು ಕೈಬಿಡಬೇಕು ಎಂದು ಪೋಷಕರು ಮತ್ತು ರಾಮಾಂಜಿನೇಯಲು ಮತ್ತು ಮತ್ತಿತರರು ಮನವಿ ಮಾಡಿದರು.