ಬಳ್ಳಾರಿ,ಜೂ.01 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ 2024-25ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಲು ಸರ್ಕಾರದ ನಿರ್ದೇಶನವಿದ್ದು, ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲಿಯೂ ಸಹ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಪಾಸ್ಗಳನ್ನು ವಿತರಣೆ ಮಾಡಲಾಗುವುದು. ಈ ಸಂಬಂಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಸ್ಗಳನ್ನು ಆನ್ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ (URL-sevasindhu.karnataka.gov.
ಬಳ್ಳಾರಿ ವಿಭಾಗದ ವ್ಯಾಪ್ತಿಯ ಬಳ್ಳಾರಿ ನಗರದಲ್ಲಿ 02 ಕೇಂದ್ರಗಳು ಮತ್ತು ಸಿರುಗುಪ್ಪ, ಕುರುಗೋಡು, ಕಂಪ್ಲಿ, ಸಂಡೂರು ಭಾಗದ ಕರ್ನಾಟಕ-ಒನ್ ಕೇಂದ್ರಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಮಾಡಲು ಗುರುತಿಸಿಲಾಗಿದೆ.
*ಕರ್ನಾಟಕ-1 ಕೇಂದ್ರಗಳ ವಿವರ:*
ಬಳ್ಳಾರಿ ನಗರದ ಹಳೇ ತಾಲ್ಲೂಕು ಕಚೇರಿ ಕಾಂಪೌಂಡ್ ಆವರಣದ ಭೂಮಿ ಕೇಂದ್ರದ ಕರ್ನಾಟಕ-ಒನ್ ಕೇಂದ್ರ ಹಾಗೂ ದುರ್ಗಮ್ಮ ಗುಡಿ ಹತ್ತಿರದ ಹಳೇ ಕಪ್ಪಗಲ್ ರಸ್ತೆಯ ಬಂಗಾರ ಸಿದ್ದಪ್ಪ ಕಾಂಪ್ಲೆಕ್ಸ್ನ ಕರ್ನಾಟಕ-ಒನ್ ಕೇಂದ್ರ, ಸಿರುಗುಪ್ಪ ಪಟ್ಟಣದ ಪಾರ್ವತಿ ನಗರದ ಕರ್ನಾಟಕ-ಒನ್ ಕೇಂದ್ರ, ಕುರುಗೋಡಿನ ಗಟ್ಟಿ ಕಾಂಪ್ಲೆಕ್ಸ್ನ ಕರ್ನಾಟಕ-ಒನ್ ಕೇಂದ್ರ, ಕಂಪ್ಲಿಯ ಚಂದ್ರಕಲಾ ಟಾಕೀಸ್ ಹತ್ತಿರದ ಕರ್ನಾಟಕ-ಒನ್ ಕೇಂದ್ರ ಮತ್ತು ಸಂಡೂರಿನ ಪುರಸಭೆ ಬಸ್ ನಿಲ್ದಾಣ ಎದುರುಗಡೆಯ ಶ್ರೀನಿವಾಸ ಕಾಂಪ್ಲೆಕ್ಸ್ನ ಕರ್ನಾಟಕ-ಒನ್ ಕೇಂದ್ರ.
ಈ ಮೇಲಿನ ಕೇಂದ್ರಗಳಲ್ಲಿ ಕರ್ನಾಟಕ-ಒನ್ [K-one] ಕೇಂದ್ರಗಳಲ್ಲಿ ಜೂನ್ 03 ರಿಂದ ವಿದ್ಯಾರ್ಥಿ ಬಸ್ ಪಾಸ್ ಪಡೆಯಬಹುದಾಗಿದೆ.
*ಅರ್ಜಿ ಸಲ್ಲಿಸುವ ವಿಧಾನ:*
ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಸೇವಾಸಿಂಧು ಪೋರ್ಟಲ್ ಐಡಿ (URL-sevasindhu.karnataka.gov.
ವಿದ್ಯಾರ್ಥಿಗಳು ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ ರೂ.30/- ಸೇವಾ ಶುಲ್ಕವನ್ನು ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿದೆ. ಸ್ಯಾಟ್ಸ್, ಯುಯುಸಿಎಂಎಸ್, ಪಿಯುಇ (SATS/ UUCMS / PUE) ಸಂಖ್ಯೆಯನ್ನು ಹೊಂದಿರದ ವಿದ್ಯಾರ್ಥಿಗಳು ವಾಸಸ್ಥಳ ವಿಳಾಸ ಹಾಗೂ ಇತರೆ ಮಾಹಿತಿ ಬಗ್ಗೆ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ಧೃಡೀಕರಣ ಪತ್ರ ಪಡೆದು ಕಡ್ಡಾಯವಾಗಿ ಸಲ್ಲಿಸಬೇಕು. ವಿದ್ಯಾರ್ಥಿ ಬಸ್ ಪಾಸ್ ವಿತರಿಸಲು ಗರಿಷ್ಠ ಪ್ರಯಾಣ ಮಿತಿ 60 ಕಿ.ಮೀ ಆಗಿರುತ್ತದೆ.
*ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ದರಗಳ ವಿವರ:*
ಪ್ರಾಥಮಿಕ ಶಾಲೆ (10 ತಿಂಗಳು): ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.150, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ.150.
ಪ್ರೌಢ ಶಾಲೆ ಬಾಲಕರು (10 ತಿಂಗಳು): ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.750, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ.150.
ಕಾಲೇಜು ಮತ್ತು ಡಿಪ್ಲೋಮಾ (10 ತಿಂಗಳು): ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.1,050, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ.150.
ಐಟಿಐ (12 ತಿಂಗಳು): ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.1,310, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ.160.
ವೃತ್ತಿಪರ ಕೋರ್ಸ್ಗಳು (10 ತಿಂಗಳು): ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.1,550, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ.150.
ಸಂಜೆ ಕಾಲೇಜು ಮತ್ತು ಪಿ.ಹೆಚ್.ಡಿ(10 ತಿಂಗಳು): ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.1,350, ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ.150.
ಈ ಮೇಲಿನ ದರದಂತೆ ವಿದ್ಯಾರ್ಥಿಯು ಕೆ-ಒನ್ ಪಾಸ್ ಕೌಂಟರ್ಗಳಲ್ಲಿ ಪಾವತಿಸಿ ವಿದ್ಯಾರ್ಥಿ ಬಸ್ ಪಾಸ್ಗಳನ್ನು ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.