ಯಾರಿಗೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಆರ್ಥ್ರೈಟಿಸ್ ಸಮಸ್ಯೆ ಎದುರಾಗಬಹುದು. ಅದರಲ್ಲೂ 60 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರು ತಮ್ಮ ಮೂಳೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಈಗಿನ ಕಾಲದಲ್ಲಿ ಮಕ್ಕಳಿಗೂ ಕೂಡ ಆರ್ಥ್ರೈಟಿಸ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ.
ಮೂಳೆಗಳು ಹಾಗೂ ಕೀಲುಗಳ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಮ್ಮ ನಡುವೆ ಹಲವು ಜನರು ಯಮಯಾತನೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಕಷ್ಟು ಜನರನ್ನು ಕಾಡುತ್ತಿದೆ. ಹಿಂದೆಲ್ಲಾ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ, ಇದೀಗ ಮಕ್ಕಳನ್ನು ಕಾಡಲು ಆರಂಭಿಸಿದೆ.
ಇದ್ದಕ್ಕಿದಂತೆ ಕಾಲಿನ ಗಂಟುಗಳಲ್ಲಿ ನೋವು, ಕೀಲು ನೋವು, ಕೈಗಳ ಮಣಿಗಂಟಿನಲ್ಲಿ ಊತದಂತಹ ಲಕ್ಷಣಗಳು ಕಂಡು ಬರುವುದು, ಕೈಗಳ ಹಾಗೂ ಕಾಲಿನ ಬೆರಳುಗಳಲ್ಲಿ ಊತ ಹಾಗೂ ನೋವು ಕಾಣಿಸಿಕೊಳ್ಳುವುದು, ಇವೆಲ್ಲಾ ಸಂಧಿವಾತದ (ಆರ್ಥ್ರೈಟಿಸ್) ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ.
ಈ ಕಾಯಿಲೆಯನ್ನು ನಿರ್ವಹಿಸಲು ಔಷಧಿಗಳು ಲಭ್ಯವಿದ್ದರೂ, ಆಹಾರ ಕ್ರಮದಲ್ಲಿ ಕೆಲವು ಆಹಾರಗಳನ್ನು ಸೇರ್ಪಡೆಗೊಳಿಸುವ ಮೂಲಕ ನೈಸರ್ಗಿಕವಾಗಿ ನೋವನ್ನು ನಿವಾರಿಸಿಕೊಳ್ಳಬಹುದು.
ಈ ನೋವನ್ನು ನಿವಾರಿಸಬಲ್ಲ ಸೂಪರ್ ಫುಡ್ ಗಳು ಇಂತಿವೆ…
ಹಸಿರು ತರಕಾರಿ, ಸೊಪ್ಪು
ಹೆಚ್ಚಿನ ಜನರು ಪಾಲಕ್, ಬ್ರೊಕೊಲಿಯಂತಹ ಎಲೆಗಳ ಸೊಪ್ಪನ್ನು ಇಷ್ಟಪಡುವುದಿಲ್ಲ, ಆದರೆ ಇವು ಫೈಬರ್, ವಿಟಮಿನ್ ಮತ್ತು ಖನಿಜಗಳಿಂದ ಕೂಡಿರುತ್ತದೆ. ಇವು ಸಂಧಿವಾತದಿಂದ ಉಂಟಾಗುವ ನೋವು ಮತ್ತು ಉರಿಯೂತವನ್ನು ಗುಣಪಡಿಸಲು ಉತ್ತಮವಾಗಿದೆ.
ನೈಸರ್ಗಿಕವಾಗಿ ವಿಟಮಿನ್ ಇ ಮತ್ತು ಸಿ ಯಿಂದ ತುಂಬಿರುವ, ಎಲೆಗಳ ಸೊಪ್ಪಿನ ಸೇವನೆಯು ಕಾರ್ಟಿಲೆಜ್ ಅನ್ನು ಬಲಪಡಿಸಲು ಮತ್ತು ಕೀಲುಗಳ ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಕಾಲಜನ್ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬೆರ್ರಿ ಹಣ್ಣುಗಳು
ಅರಿಶಿನ
ಸಂಧಿವಾತದ ನೋವನ್ನು ನಿವಾರಿಸಲು ಅರಿಶಿನವು ಪ್ರಯೋಜನಕಾರಿ ಎಂದು ವೈದ್ಯರು ಪರಿಗಣಿಸುತ್ತಾರೆ. ಏಕೆಂದರೆ, ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
ಶುಂಠಿ
ಡ್ರೈಫ್ರೂಟ್ಸ್
ಕೊಬ್ಬಿನ ಅಂಶ ಎಂದ ಕೂಡಲೇ ಜನರು ದೂರ ಓಡುತ್ತಾರೆ. ಆದರೆ, ಕೊಬ್ಬಿನ ಅಂಶದಲ್ಲಿ ಎರಡು ವಿಧಗಳು ಕಂಡುಬರುತ್ತವೆ. ಆರೋಗ್ಯಕರವಾದ ಕೊಬ್ಬಿನ ಅಂಶಗಳು ಒಂದು ಕಡೆಯಾದರೆ, ಕೆಟ್ಟ ಕೊಬ್ಬಿನ ಅಂಶ ಅಥವಾ ಕೊಲೆಸ್ಟ್ರಾಲ್ ಅಂಶ ಮತ್ತೊಂದು ಕಡೆ. ಆರೋಗ್ಯಕರವಾದ ಕೊಬ್ಬಿನ ಅಂಶಗಳು ನಮ್ಮ ದೇಹಕ್ಕೆ ತುಂಬಾ ಅವಶ್ಯಕ ಮತ್ತು ನಾವು ತೆಗೆದುಕೊಳ್ಳಬೇಕು ಕೂಡ. ಇವುಗಳು ಸಿಗುವ ಮುಖ್ಯ ಆಹಾರ ಪದಾರ್ಥಗಳು ಎಂದರೆ ಅದು ಡ್ರೈಫ್ರೂಟ್ಸ್. ಬಾದಾಮಿ ಗೋಡಂಬಿ ಪಿಸ್ತ ವಾಲ್ನಟ್ ಖರ್ಜೂರ ಎಳ್ಳು ಫ್ಲಾಕ್ಸ್ ಸೀಡ್ಸ್ ಸೂರ್ಯಕಾಂತಿ ಬೀಜಗಳು ಇತ್ಯಾದಿ.
ಇದರ ಜೊತೆಗೆ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಮತ್ತು ತುಪ್ಪದ ಬಳಕೆಯನ್ನು ಕೂಡ ಆಹಾರದಲ್ಲಿ ಮಾಡಿಕೊಳ್ಳುವುದರಿಂದ ಮೂಳೆಗಳಿಗೆ ಅತ್ಯಂತ ಸಹಕಾರಿ ಎನಿಸುವ ಒಳ್ಳೆಯ ಕೊಬ್ಬಿನ ಅಂಶಗಳು ಸಿಗುತ್ತಾ ಹೋಗುತ್ತವೆ.
ಆಲಿವ್ ಎಣ್ಣೆ
ಗ್ರೀನ್ ಟೀ
ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಇದು ನಿಮ್ಮ ಇಂದ್ರಿಯಗಳನ್ನು ಆಕ್ಟೀವ್ ಮಾಡುವುದಲ್ಲದೆ ದೇಹದಲ್ಲಿನ ಊತ, ಕೀಲುಗಳು ಮತ್ತು ಮೊಣಕಾಲುಗಳಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅನಾನಸ್
ಈ ಆಹಾರಗಳು ಸಂಧಿವಾತದ ನೋವನ್ನು ನಿವಾರಿಸಲು ಸಹಾಯ ಮಾಡಬಹುದಾದರೂ ಸಮಸ್ಯೆ ತೀವ್ರಗೊಂಡಾಗ ಆರೋಗ್ಯ ವೃತ್ತಿಪರರನ್ನು ಸಮಾಲೋಚಿಸುವುದು ಅತ್ಯಗತ್ಯವಾಗಿರುತ್ತದೆ.