ಬಳ್ಳಾರಿ,ಏ 12; ಬಿಸಿಲನಾಡು ಬಳ್ಳಾರಿಯಲ್ಲಿ ಇವತ್ತು ಎರಡು ಪಕ್ಷಗಳ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು ಕೆಂಡದಂತ ಬಿಸಿಲನ್ನು ಲೆಕ್ಕಿಸದೆ ಎರಡು ಪಕ್ಷದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಲೋಕಸಭಾ ಚುನಾವಣೆಯ ಕಾವು ಬಳ್ಳಾರಿ ಬಿಸಿಲನ್ನೆ ಮೀರಿಸುವ ರೀತಿ ಎರಡು ಪಕ್ಷದ ಕಾರ್ಯಕರ್ತರು ಸೇರಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇಂದು ಬಿಜೆಪಿಯಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀರಾಮುಲುತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ನಗರದ ಎಸ್ ಪಿ ಸರ್ಕಲ್ನಿಂದ ಬೃಹತ್ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ತೆರಳಿದ ಶ್ರೀರಾಮುಲು ಅಂಡ್ ಟೀಂ ಎಸಿ ಸರ್ಕಲ್ನಿಂದ ದುರ್ಗಮ್ಮ ದೇವಸ್ಥಾನಕ್ಕೆ ಬಂದು ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದು ನಂತರ ಅಲ್ಲಿಂದ ಅಂಡರ್ ಬ್ರಿಡ್ಜ್ ಮೂಲಕ ಡಬಲ್ ರಸ್ತೆ ರಾಯಲ್ ವೃತ್ತ ಅಲ್ಲಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಯಾದ ಪ್ರಶಾಂತ್ ಕುಮಾರ್ ಮಿಶ್ರಾ- ತಮ್ಮ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಎಸ್ ಪಿ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರ ಮಧ್ಯೆ ತೆರೆದ ವಾಹನದಲ್ಲಿ ಅಭ್ಯರ್ಥಿ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎನ್.ರವಿಕುಮಾರ್, ಮಾಜಿ ಸಚಿವ ಆನಂದ್ ಸಿಂಗ್, ಮಾಜಿ ಶಾಸಕರುಗಳಾದ ಜಿ.ಸೋಮಶೇಖರ್ ರೆಡ್ಡಿ, ಟಿ.ಹೆಚ್.ಸುರೇಶ್ ಬಾಬು, ಶಾಸಕ ನೇಮಿರಾಜ್ ನಾಯ್ಕ, ಕೃಷ್ಣಾ ನಾಯ್ಕ, ವೈ.ಎಂ.ಸತೀಶ್, ಮುಖಂಡರಾದ ಗಾಲಿ ಲಕ್ಷ್ಮೀ ಅರುಣಾ, ಶ್ರೀರಾಮುಲುರವರ ಪತ್ನಿ ಭಾಗ್ಯಲಕ್ಷ್ಮಿ, ದೀಪಾ ಸುರೇಶ್ ಬಾಬು, ನಟಿ ಶೃತಿ ಸೇರಿದಂತೆ ಇನ್ನಿತರರು ಇದ್ದರು.
ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಜೈಕಾರ ಮುಗಿಲು ಮುಟ್ಟಿತ್ತು. ಕೆಂಡದಂತ ಸುಡು ಬಿಸಿಲನ್ನು ಲೆಕ್ಕಿಸದೇ ಕಾರ್ಯಕರ್ತರು ಡಿಸಿ ಕಛೇರಿವರೆಗೂ ಮೆರವಣಿಗೆಯಲ್ಲಿ ಸಾಗಿದರು. ಇನ್ನು ಮೆರವಣಿಗೆಯ ಉದ್ದಕ್ಕೂ ಕಾರ್ಯಕರ್ತರಿಗೆ ನೀರಿನ ಮತ್ತು ಮಜ್ಜಿಗೆ ” ವ್ಯವಸ್ಥೆ ಮಾಡಲಾಗಿತ್ತು ಬಿಜೆಪಿ ಮುಖಂಡರು ತೆರದ ವಾಹನದಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರರ್ದಶಿಸಿದರು. ಇತ್ತ ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಶ್ರೀರಾಮುಲುರವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಮೆರವಣಿಗೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಟಿ ಶೃತಿ, ಗಾಲಿ ಅರುಣಾ ಲಕ್ಷ್ಮಿ, ಹಡಗಲಿ ಶಾಸಕ ಕೃಷ್ಣಾನಾಯ್, ಮಾಜಿ ಸಚಿವ ಆನಂದ್ ಸಿಂಗ್, ಮಾಜಿ ಶಾಸಕರಾದ ಟಿ.ಹೆಚ್.ಸುರೇಶ್ .ಎಸ್.ಸೋಮಲಿಂಗಪ್ಪ, ಶ್ರೀರಾಮುಲು ಪತ್ನಿ ಭಾಗ್ಯಲಕ್ಷ್ಮೀ, ಮಗ ಧನುಷ್, ಹಂಪಿ ರಮಣ, ಕೆ.ಎಸ್.ದಿವಾಕರ್, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ, ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಹನುಮಂತಪ್ಪ, ಗುಡಿಗಂಟಿ ಹನುಮಂತ, ಎಂ.ಗೋವಿಂದರಾಜುಲು, ವೇಮಣ್ಣ, ಮಲ್ಲನಗೌಡ, ಇಬ್ರಾಹಿಂ ಬಾಬು, ಸುರೇಖಾ, ಗುರುಲಿಂಗನಗೌಡ, ಓಬಳೇಶ್, ರಾಜೀವ್ ತೋಗರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು