ಕೂಡ್ಲಿಗಿ,ಏ 1 : ಕೂಡ್ಲಿಗಿ ತಾಲ್ಲೂಕು ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ.ಕೂಡ್ಲಿಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕಾಗಿದೆ.ಜೋತೆಯಲ್ಲಿ ಇಡೀ ತಾಲ್ಲೂಕಿನ ಜನರು ನೀರಿನ ಸಮಸ್ಯೆಯಿಂದ ಬೇಸತ್ತಿದ್ದಾರೆ.ಹೀಗಾಗಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಭರವಸೆಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನೀಡಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರದಲ್ಲಿ ಮಾತನಾಡಿದ ಅವರು ಕ್ಷೇತ್ರದ ಹಲವೆಡೆ ಫ್ಲೋರೈಡ್ ನೀರಿನ ಸಮಸ್ಯೆ ಕಾಡುತ್ತಿದೆ.ಎಲ್ಲ ಹಳ್ಳಿಗೂ ಶುದ್ಧ ನೀರು ಪೂರೈಕೆ ಆಗದೇ ಜನರು ಆರೋಗ್ಯ ಸಮಸ್ಯೆಯಿಂದ ನರಳುತ್ತೀದ್ದಾರೆ.ಜನರಿಗೆ ಶುದ್ಧ ನೀರು ಕೊಡುವ ಜವಾಬ್ದಾರಿ ಶಾಸಕರದ್ದು ಅದನ್ನು ಶಾಸಕರು ಮರೆತಿದ್ದಾರೆ.ಅಂದ ಅವರು ಬಿಜೆಪಿ ಸರ್ಕಾರ ತಾಲೂಕಿನ 80 ಕೆರೆಗಳಿಗೆ ನೀರುಣಿಸುವ ಯೋಜನೆ ತಂದು ಕಾಮಗಾರಿ ಮುಗಿಯುವ ಹಂತಕ್ಕೆ ನೋಡಿಕೊಂಡಿದ್ದರು.ಚುನಾವಣೆಗೂ ಮುಂಚೆ ಕಾಮಗಾರಿ ಉದ್ಘಾಟನೆ ಮಾಡುವ ಆಸೆ ಇತ್ತು.ಆದ್ರೇ ಚುನಾವಣೆ ಬಂದಿದ್ದರಿಂದ ಆಗಲಿಲ್ಲ.ಆದ್ರೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಬಾಕಿ ಉಳಿದಿರುವ ಶೇ. 5ರಷ್ಟುಕಾಮಗಾರಿಯನ್ನು ಶೀಘ್ರ ಮುಗಿಸಿ ಕೆರೆ ತುಂಬಿಸುವ ಕೆಲಸ ಮಾಡಬೇಕಿತ್ತು ಅದನ್ನು ಕೂಡಾ ಮಾಡದೇ ಜನರ ಮೂಗಿಗೆ ತುಪ್ಪ ಸವರಿದ್ದಾರೆ ಅಂಥಾ ಟೀಕಿಸಿದರು.
ಕೂಡ್ಲಿಗಿಗೂ ಕೂಡಾ ರೇಲ್ವೆ ಬೇಕು ಅನ್ನೋ ಕೂಗು ಬಹಳ ದಿನಗಳಿಂದ ಇದೆ.ನಾನು ಈ ಬೇಡಿಕೆ ಈಡೇರಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿವೆ.ಈ ಭಾಗದಲ್ಲಿ ರೇಲ್ವೆ ಅವಶ್ಯಕತೆ ಇದೆ ಅಂಥಾ ಹೇಳಿದ ರಾಮುಲು ಅವರು ದೇಶಕ್ಕಾಗಿ ಮೋದಿ ಗೆಲ್ಲಿಸಲು ಬಳ್ಳಾರಿಯಲ್ಲಿ ರಾಮುಲು ಗೆ ಆಶೀರ್ವಾದ ಮಾಡಿ.ಬಳ್ಳಾರಿ. ವಿಜಯನಗರ.ಜಿಲ್ಲೆಯಲ್ಲಿ ಜನರು ನನಗೆ ಆರ್ಶಿರ್ವಾದ ಮಾಡೋ ಮೂಲಕ ದೇಶದ ಅಭಿವೃದ್ಧಿ ಗೆ ಕೈ ಜೋಡಿಸಿ. ಅಂಥಾ ಮತಯಾಚನೆ ಮಾಡಿದರು.
ಪ್ರಚಾರದಲ್ಲಿ ವಿಧಾನಪರಿಷತ ಸದಸ್ಯರಾದ ರವಿಕುಮಾರ್. ವೈ.ಎಂ.ಸತೀಶ್.ಮುಖಂಡರಾದ ಬಂಗಾರು ಹನುಮಂತ.ವಿರೇಂದ್ರ ಪ್ರಾಣೇಶ್ ಸೇರಿದಂತೆ ಹಲವರು.ಭಾಗಿಯಾಗಿದ್ದರು.