ರಾಯಚೂರು, ಜು.15 : ರಾಯಚೂರು ಲೋಕಸಭಾ ಕ್ಷೇತ್ರದ ಸದಸ್ಯ ಜಿ.ಕುಮಾರ್ ನಾಯಕರಿಗೆ ರೈಲ್ವೆ ಬೋರ್ಡ್ ಮಾಜಿ ಸದಸ್ಯ ,ಸಮಾಜ ಸೇವಕ ಡಾ.ಬಾಬುರಾವ ಅವರ ನೇತೃತ್ವದಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ರೈಲ್ವೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಜಿ. ಕುಮಾರ ನಾಯಕ ಅವರು ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು ಎ೦ದು ಬಾಬುರಾವ ಅವರು ಹೇಳಿದರು. ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಮೀನಾ, ರೈಲ್ವೆ ಸ್ಟೇಷನ್ ಮ್ಯಾನೇಜರ್ ಹೇಮರಾಜ್, ಮುಖ್ಯ ವಾಣಿಜ್ಯ ನಿರೀಕ್ಷಕ ಸುನೀಲ್ ಕುಮಾರ್ ,ಸರಕುಗಳ ಮೇಲ್ವಿಚಾರಕ ಬಸಮಾಜ ಉಪಸ್ಥಿತರಿದ್ದರು.