ಬಳ್ಳಾರಿ, ಏ.13: ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮತ್ತು ಅವರ ಅವಲಂಬಿತರ ಬಳಿ ಒಟ್ಟಾರೆ 72.45 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅವರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಈ ಪೈಕಿ ಖುದ್ದು ರಾಮುಲು ಬಳಿ ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 45.88 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೆ. ಇದರಲ್ಲಿ 6,22,57,520 ರೂ.ಮೌಲ್ಯದ ಚರಾಸ್ತಿ, 39,65,44,800 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರ ಜೊತೆಗೆ ಇವರು 6.70 ಕೋಟಿ ರೂ. ಸಾಲ ಹೊಂದಿದ್ದಾರೆ.ಇನ್ನು ಪತ್ನಿ ಭಾಗ್ಯಲಕ್ಷ್ಮಿ ಹೆಸರಲ್ಲಿ 22.57 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಈ ಪೈಕಿ ಚರಾಸ್ತಿ 2.28 ರೂ. ಇದ್ದರೆ ಸ್ಥಿರಾಸ್ತಿ 20.29 ಕೋಟಿ ರೂ. ಮೌಲ್ಯದ್ದಾಗಿದೆ. ಮಗನ ಹೆಸರಲ್ಲಿ 3.68 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ರಾಮುಲು ಸರ್ಕಾರಕ್ಕೆ ಕಟ್ಟಬೇಕಾದ 28 ಲಕ್ಷ ರೂ. ಮೌಲ್ಯದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಅವರು ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟಾರೆ 49.76 ಲಕ್ಷ ರೂ. ಆದಾಯ ಗಳಿಸಿದ್ದಾಗಿ ಪ್ರಮಾಣೀಕರಿಸಿದ್ದಾರೆ. ಪತ್ನಿ 9 ಲಕ್ಷ ರೂ. ಮಗ 1.9 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಇವರ ವಿರುದ್ಧ ಭೂ ಕಬಳಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಕೋರ್ಟ್ನಲ್ಲಿ, ಅಕ್ರಮ ಆಸ್ತಿ ಪಡೆದ ಬಗ್ಗೆ ಬಳ್ಳಾರಿ ಲೋಕಾಯುಕ್ತದಲ್ಲಿ, ತೆರಿಗೆ ವಂಚನೆ ಕುರಿತು ಬೆಂಗಳೂರಿನಲ್ಲಿ, ಎನ್ಎಂಡಿ ಆಕ್ಟ್-2005 ಅಡಿ ಚೆಳ್ಳಿಕೆರೆಯಲ್ಲಿ ಸೇರಿ ಒಟ್ಟು ಐದು ಪ್ರಕರಣಗಳಿವೆ.ಯಾವುದೇ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ಆಗಿಲ್ಲ ಎಂದು ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ದೃಢೀಕರಿಸಿದ್ದಾರೆ.