ಬಳ್ಳಾರಿ,ಸೆ.22: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಇದೇ ಮೊದಲಬಾರಿ ಬಳ್ಳಾರಿ ಜಿಲ್ಲೆಯ ವ್ಯಾಪಾರ -ವಾಣಿಜ್ಯೋದ್ಯಮಿಗಳನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿರುವ `ಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್-2024′ ಅವಾರ್ಡ್ ಅನ್ನು ಐವರಿಗೆ ಸಾಧಕರಿಗೆ ಭಾನುವಾರ ಪ್ರದಾನ ಮಾಡಿ ಗೌರವಿಸಿ ಅಭಿನಂದಿಸಲಾಯಿತು.
ಬಳಾರಿಯ ಬಲಿಜ ಭವನದಲ್ಲಿ ಭಾನುವಾರ ನಡೆದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ 71ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 2024ರ ವರ್ಷದ ಸಾಂಪ್ರದಾಯಿಕ ಕಲೆ ಮತ್ತು ಬೋಟಿಕ್ ವಿಭಾಗದಲ್ಲಿ ಪ್ರಕೃತಿ ಸೋರಪ್ಪು ಅವರಿಗೆ `ಬಿಡಿಸಿಸಿ ಅಂಡ್ ಐ ವುಮನ್ ಎಂಟ್ರಿಪ್ಯುನರ್’, ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ಕೊಡುಗೈ ದಾನಿಗಳಾಗಿರುವ ಸಿದ್ಧರಾಮನಗೌಡ ಮಸೂದಿಪುರ ಅವರಿಗೆ ಮೂಲಭೂತ ಸೌಲಭ್ಯಗಳ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಇನ್ಫ್ರಾ ಅವಾರ್ಡ್’ ಮತ್ತು ಸತ್ರಾಲ ರಮೇಶ್ ಅವರಿಗೆ ಜ್ಯುಯಲರಿ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಎಂಟ್ರಿಪ್ಯುನರ್’, ಗಣಪಾಲ್ ಐನಾಥ್ರೆಡ್ಡಿ ಅವರಿಗೆ ಫರ್ಟಿಲೈಜರ್ ಅಂಡ್ ಕೆಮಿಕಲ್ಸ್ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಅಗ್ರಿಪ್ಯುನರ್’ ಮತ್ತು ನಂದಿ ಪೈಪ್ಸ್ನ ಅನಂತುಲ ಸುಧಾಕರ್ ಅವರಿಗೆ ಕೈಗಾರಿಕಾ ಉತ್ಪನ್ನ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಮ್ಯಾನ್ಯುಫಕ್ಚರಿಂಗ್ ಬ್ಯುಸಿನೆಸ್ ಅವಾರ್ಡ್’ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಮತ್ತ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಅವರು, `ಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್-2024′ ಅವಾರ್ಡ್ಗಳು ವೃತ್ತಿ ನಾವೀನ್ಯತೆ, ನಾಯಕತ್ವ ಮತ್ತು ಉದ್ಯಮದಲ್ಲಿರುವ ಸಾಧನೆಯನ್ನು ಗುರುತಿಸಿ ಗೌರವಿಸುವ ವೇದಿಕೆಯಾಗಿದೆ. ಈ ಪ್ರಶಸ್ತಿ – ಪುರಸ್ಕಾರ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಾರ, ಉದ್ಯಮ ಮತ್ತು ಕೈಗಾರಿಕೆಗಳಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಪ್ರೋತ್ಸಾಹಿಸಲು, ಸ್ಟಾರ್ಟ್ಅಪ್ಗಳನ್ನು ಬೆಳೆಸುವ ನಿಟ್ಟಿನಲ್ಲಿ ಪೂರಕವಾಗಿವೆ ಎಂದು ತಿಳಿಸಿದ್ದಾರೆ.
`ಬಿಡಿಸಿಸಿ ಅಂಡ್ ಐ ವುಮನ್ ಎಂಟ್ರಿಪ್ಯುನರ್’ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿದ ಪ್ರಕೃತಿ ಸೋರಪ್ಪು ಅವರು, ಮಹಿಳೆಯಾದ ನನ್ನನ್ನು ಗುರುತಿಸಿ, ಪ್ರಶಸ್ತಿ – ಪುರಸ್ಕಾರ ನೀಡಿ ಗೌರವಿಸಿದ್ದಕ್ಕಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಮತ್ತ ಸರ್ವ ಆಜೀವ ಸದಸ್ಯರುಗಳಿಗೆ ನಾನು ಆಭಾರಿ. ನನ್ನನ್ನು ಗುರುತಿಸಿದ್ದು, ಜಿಲ್ಲೆಯ ಮಹಿಳಾ ಉದ್ಯಮಿಗಳ ಸಾಧನೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.
2023-24ರ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ರ್ಯಾಂಕ್ಗಳನ್ನು ಪಡೆದು, ತೇರ್ಗಡೆ ಆಗಿರುವ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ, ಅಭಿನಂದಿಸಲಾಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ. ಮಹಾರುದ್ರಗೌಡ ಅವರು ಸ್ವಾಗತಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸರೆಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಅವರು ವಂದನಾರ್ಪಣೆ ಸಲ್ಲಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು.
: News-Adds purpose pls contact : v.ravi, editor,suvarna vaahini. phone : 9880163290