ಬಳ್ಳಾರಿ,ಏ.17 : ನಗರದಲ್ಲಿ ಲಾರಿ ಮಾಲೀಕರ ಸಂಘದಿAದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆಯಲ್ಲಿ ತುರ್ತು ಸೇವೆಗಳಡಿ ಬರುವ ಸಾಗಾಣಿಕೆಗೆ ತೊಂದರೆಯಾದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 24*7 ಕಂಟ್ರೋಲ್ ರೂಂ ಆರಂಭಿಸಲಾಗಿದ್ದು, ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಸ್.ಶ್ರೀನಿವಾಸ ಗಿರಿ ಅವರು ತಿಳಿಸಿದ್ದಾರೆ.
ಕಂಟ್ರೋಲ್ ರೂಂ ಮೊಬೈಲ್ ಸಂಖ್ಯೆ 9449863496. ತುರ್ತು ಸೇವೆಗಳಿಗಾಗಿ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿದಲ್ಲಿ ತಮ್ಮ ಸೇವೆಗಳಿಗಾಗಿ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿಕಂಟ್ರೋಲ್ ರೂಂ ಆರಂಭ
