ಬಳ್ಳಾರಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಗೋ ಹಿಂಸೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬಳ್ಳಾರಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಚಾಮರಾಜ ಪೇಟೆ ಸಚಿವ ಜಮೀರ್ ಅಹಮದ್ ಕ್ಷೇತ್ರದಲ್ಲಿ ಆಕಳ ಕೆಚ್ಚಲು ಕೊಯ್ದು ವಿಕೃತಿ ಮೇರದ ಹಿನ್ನೆಲೆಯಲ್ಲಿ ಗೋಮೂತ್ರ ಹಾಕಿ ಸೆಗಣಿ ಸಾರಿಸಿ ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದ ಬಳಿ ಸೇರಿದ ರೈತ ಮೋರ್ಚಾದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರಕರಣದ ಸಂಬಂಧ ಬಳ್ಳಾರಿ ಬಿಜೆಪಿಯ ರೈತಮೋರ್ಚಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಘಟನೆಗೆ ಪರೋಕ್ಷವಾಗಿ ಜಮೀರ್ ಆಹ್ಮದ್ ಅವರ ಸಾಫ್ಟ್ ಕಾರ್ನರ್ ಕಾರಣವಾಗಿದೆ ಹಾಗೂ
ತಮ್ಮ ಕ್ಷೇತ್ರದಲ್ಲಿಯೇ ಹೀಗೆ ಆದರೂ ಗಂಭೀರವಾಗಿ ಪರಿಗಣಿಸದ ಜಮೀರ್ ಬಳ್ಳಾರಿಯನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.
ವಹಿಸಿ ಕೊಂಡು ಅರು ತಿಂಗಳಾದರೂ ಒಮ್ಮೆಯೂ ಜಿಲ್ಲೆಗೆ ಬಂದಿಲ್ಲ ಇಂತಹ ಜಮೀರ್ ಅಹ್ಮದ್ ನಮ್ಮ ಜಿಲ್ಲೆಗೆ ಉಸ್ತುವಾರಿಯಾಗಿರೋ ದೌರ್ಬಗ್ಯ ಎಂದು ದೂರಿದರು.
ತಪ್ಪಿತಸ್ಥರು ಒಬ್ಬರಲ್ಲ ನಾಲ್ಕೈದು ಜನರಿದ್ದು ಉಳಿಸೋ ಕೆಲಸವಾಗುತ್ತಿದೆ ಕೂಡಲೇ ಎಲ್ಲರನ್ನೂ ಬಂಧಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ರೈತ ಮೊರ್ಚ ಜಿಲ್ಲಾ ಅದ್ಯಕ್ಷ ಐನಾಥ ರೆಡ್ಡಿ ಒಬಿಸಿ ಮಾರ್ಚದ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಊಳೂರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.