ಸಿರುಗುಪ್ಪ, ಮಾ-19: ನಗರದ ನೂತನ ಪೊಲೀಸ್ ಠಾಣಾ ಆವರಣದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್, ಸಿರುಗುಪ್ಪ ಪೊಲೀಸ್ ಉಪ ವಿಭಾಗ, ಸಿರುಗುಪ್ಪ ವೃತ್ತ ಮತ್ತು ಪೊಲೀಸ್ ಠಾಣೆವತಿಯಿಂದ ಸಂಚಾರಿ ನಿಯಮಗಳ ಕುರಿತಾಗಿ ಬೈಕ್ ಜಾಥಾವು ಸೋಮವಾರ ನಡೆಯಿತು.
ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳು ಆದ ಶಂಶಾಲಂ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಪವನ್ ಕುಮಾರ್ ಎಸ್. ದಂಡಪ್ಪನವರ್, ಪೋಲಿಸ್ ಉಪ ವಜಭಾಗದ ಡಿವೈಎಸ್ಪಿ ವೆಂಕಟೇಶ್ ಮತ್ತು ಸಿರುಗುಪ್ಪ ವೃತ್ತ ಸಿಪಿಐ ಹನುಮಂತಪ್ಪ, ಪಿ.ಡಿ.ಹಳ್ಳಿ ವೃತ್ತ ನಿರೀಕ್ಷಕ ರುದ್ರಪ್ಪ, ತೆಕ್ಕಲಕೋಟೆ ವೃತ್ತ ನಿರೀಕ್ಷಕ ಸುಂದರೇಶ್, ಬಳ್ಳಾರಿ ಗ್ರಾಮೀಣ ಠಾಣೆ ವೃತ್ತ ನಿರೀಕ್ಷಕ ಸತೀಶ್ ವೇದಿಕೆಯಲ್ಲಿದ್ದರು.
ಫೆಬ್ರವರಿ ತಿಂಗಳಿನಲ್ಲಿ ಉತ್ತಮ ಸಾಧನೆಯ ಕರ್ತವ್ಯ ನಿರ್ವಹಿಸಿರುವವರಿಗೆ ಠಾಣೆಗಳ ಉತ್ತಮ ಕಾಪ್ ಕಪ್ ಆಫ್ ದಿ ಮಂತ್ ಪುರಸ್ಕಾರ ನೀಡಲಾಯಿತು. ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಇವರಿಗೂ ಉತ್ತಮ ಕರ್ತವ್ಯ ನಿರ್ವಹಿಸಿರುವುದಕ್ಕೆ ಕಾಪ್ ಆಫ್ ದಿ ಮಂತ್ ಎಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರರು ಮಾತನಾಡಿ ಇಲಾಖೆ ಶಿಸ್ತಿನಿಂದ ಕೆಲಸ ಮಾಡುತ್ತಿದ್ದು, ಇಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೋಟಾರ್ ಬೈಕ್ ಜಾಥಾ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಡಿವೈಎಸ್ಪಿ ವೆಂಕಟೇಶ್ ಮಾತನಾಡಿ ಒಂದು ಸರ್ವೆಯ ಪ್ರಕಾರ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಅಪಘಾತಗಳಿಂದಾಗಿ ಆಗಿದೆ. ಅಪಘಾತವಾದಾಗ ಮೊದಲು ತಲೆಗೆ ಪೆಟ್ಟು ಬಿದ್ದರೆ ವ್ಯಕ್ತಿ ಸಾವನ್ನಪ್ಪುತ್ತಾನೆ ಆದ್ದರಿಂದ ನಾವು ಹೆಲ್ಮೆಟ್ ಧರಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ವೇದಿಕೆಯ ಗಣ್ಯರಿಂದ ಶಿರಸ್ತ್ರಾಣಗಳನ್ನು ನೀಡಲಾಯಿತು.
ನಂತರ ಪೋಲಿಸ್ ಹಣ ಆವರಣದಿಂದ ಹೆದ್ದಾರಿ ರಸ್ತೆಯಲ್ಲಿ ನ್ಯಾಯಾಲಯದವರೆಗೂ ಸಾಗಿ ಅಲ್ಲಿ ತಿರುವು ಪಡೆದು ಟಿಪ್ಪು ಸುಲ್ತಾನ್ ವೃತ್ತದಲ್ಲಿ ತಿರುವು ಪಡೆದು ಆದೋನಿ ರಸ್ತೆ ನಂತರ ಮಹಾತ್ಮ ಗಾಂಧೀಜಿ ವೃತ್ತ ಬಳಸಿಕೊಂಡು ಮತ್ತೆ ಪೊಲೀಸ್ ಠಾಣಾ ಆ ರಣದವರೆಗೂ ಬೈಕ್ ಜಾಥಾ ನಡೆಸಲಾಯಿತು.
ಹೆಲ್ಮೆಟ್ ಧರಿಸಿದ ನೂರಕ್ಕೂ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.