ಆನೆ ಬಲ ಬಂದಂತಾಗಿದೆ: ಯಡಿಯೂರಪ್ಪ
ಜನಾರ್ದನರೆಡ್ಡಿ ಬಿಜೆಪಿಗೆ ವಾಪಸಾಗಿದ್ದರಿಂದ ಆನೆ ಬಲ ಬಂದಂತಾಗಿದೆ. ಜನಾರ್ದನರೆಡ್ಡಿಯನ್ನು ಮುಂದಿನ ದಿನದಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತೇವೆ. ಜನಾರ್ದನರೆಡ್ಡಿ ಬಿಜೆಪಿಗೆ ವಾಪಸಾಗಿದ್ದರಿಂದ ಖುಷಿಯಾಗಿದೆ. ಅವರನ್ನ ಮುಂದಿನ ದಿನಗಳಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು. ಜನಾರ್ದನ ರೆಡ್ಡಿ ಬಿಜೆಪಿಗೆ ಬಂದಿದ್ದಕ್ಕೆ ನಮಗೆ ಸಂತೋಷವಾಗಿದೆ. ಪ್ರಧಾನಿ ಮೋದಿ ನಾಯಕತ್ವ ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ರೆಡ್ಡಿ ಪಕ್ಷಕ್ಕೆ ಸೇರಿದ್ದಾರೆ. ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತವರು ಪಕ್ಷಕ್ಕೆ ಮರಳಿದ್ದಾರೆ: ಶ್ರೀರಾಮುಲು
ಜನಾರ್ದನ್ ರೆಡ್ಡಿ ಅವರು ತವರು ಪಕ್ಷಕ್ಕೆ ಮರಳಿದ್ದಾರೆ. ಒಂದಾನೊಂದು ಕಾಲದಲ್ಲಿ ಯಾವುದೇ ವಿಷಯಕ್ಕೆ ಬೇರೆಯಾಗಿದ್ವಿ. ಈಗ ಮತ್ತೆ ಬಿಜೆಪಿ ಮರಳಿದ್ದಾರೆ. ಅವರು ಬಂದಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಸಾಕಷ್ಟು ಶಕ್ತಿ ಬಂದಂತಾಗಿದೆ. ಬಳ್ಳಾರಿ, ಕೊಪ್ಪಳ ಸೇರಿ ನಮ್ಮ ಭಾಗದಲ್ಲಿ ಅತೀ ಹೆಚ್ಚು ಮತಗಳು ಬರುತ್ತವೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಬಿಜೆಪಿ ಹ್ಯಾಟ್ರಿಕ್ ಗೆಲುವು ಕಾಣಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.