ಬೆಂಗಳೂರು(ಜ.27): ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವರಾಮ ಮಂದಿರ ದರ್ಶನ ಅಭಿಯಾನದ ಅಂಗವಾಗಿ ಈ ತಿಂಗಳ31ರಂದು ಕರ್ನಾಟಕದಿಂದ ಅಯೋಧ್ಯೆಗೆ ಹೊರಡಬೇಕಿದ್ದ ಮೊದಲ ವಿಶೇಷ ರೈಲಿನ ಯಾತ್ರೆ ಒಂದು ವಾರ ಮುಂದೂಡಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ಸೂಚನೆ ರವಾನಿಸಿದ್ದು, ಈ ತಿಂಗಳ 31ರ ಬದಲಾಗಿ ಒಂದು ವಾರ ವಿಳಂಬವಾಗಿ ರೈಲು ಹೊರಡಲಿದೆ ಎಂದು ಅಭಿಯಾನದ ಸಹ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದ್ದಾರೆ.
ಸುಮಾರು 1500 ಮಂದಿ ಬೆಂಗಳೂರಿನಿಂದ ತೆರಳಬೇಕಾಗಿದ್ದ ಮೊದಲ ರೈಲಿಗೆ ಸಂಜೆಯಷ್ಟೇ ನಿಗದಿತ ಮೊತ್ತ ಪಾವತಿಸಿ ಬುಕ್ ಮಾಡಲಾಗಿತ್ತು. ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ರಾಮಮಂದಿರ ದರ್ಶನ ಮಾಡಿಸುವ ಸಲುವಾಗಿ ರಾಜ್ಯ ಬಿಜೆಪಿಯು ಈ ಅಭಿಯಾನ ಆರಂಭಿಸಿದ್ದು, ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದಾಗಿದೆ.
ಇದರ ಅಂಗವಾಗಿ ರಾಜ್ಯದಿಂದ ಹೆಚ್ಚ ಕಡಿಮೆ 35 ಸಾವಿರ ಮಂದಿ ಕಾರ್ಯಕರ್ತರು ಮಾ.25ರವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯುವ ಉದ್ದೇಶ ಹೊಂದಲಾಗಿದೆ.