ಬಳ್ಳಾರಿ, ಫೆಬ್ರವರಿ 19: “ರಕ್ತದಾನವನ್ನು ವ್ಯಾಪಾರದ ಅಂಗವಾಗಿ ಪರಿಗಣಿಸಬಾರದು. ರಕ್ತ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಲಾಗದು. ಇದು ಶುದ್ಧ ಮಾನವೀಯ ಸೇವೆಯ ಸಂಕೇತವಾಗಿದೆ” ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಉಪಾಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್ ಹೇಳಿದರು.
ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ (ಬಿಐಟಿಎಂ) ಮಹಾವಿದ್ಯಾಲಯದಲ್ಲಿ, ಲಿಂಗೈಕ್ಯ ಶ್ರೀಮತಿ ಬಸವರಾಜೇಶ್ವರಿಯವರ 17ನೇ ಸಂಸ್ಮರಣೆಯ ಅಂಗವಾಗಿ ಉಚಿತ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, 138 ಬಾರಿ ರಕ್ತದಾನ ಮಾಡಿದ ಡಾ. ನಾಗರಾಜ್ ಅವರ ತ್ಯಾಗ ಮತ್ತು ಸೇವೆಯನ್ನು ವಿದ್ಯಾರ್ಥಿಗಳು ಮಾದರಿಯಾಗಿ ಕಾಣಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಕಿಷ್ಕಿಂದ ವಿಶ್ವವಿದ್ಯಾಲಯ, ಬಳ್ಳಾರಿ, ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಬಳ್ಳಾರಿ, ಬಳ್ಳಾರಿ ಬಿಸಿನೆಸ್ ಕಾಲೇಜ್, ಬಳ್ಳಾರಿ, ಬಿಎಂಸಿ & ಆರ್ಸಿ, ಬಳ್ಳಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ, ರಾಷ್ಟಿಯ ಸೇವಾ ಯೋಜನೆ ಇವುಗಳ ಸಂಯುಕ್ತಾಶ್ರಯದಲ್ಲಿ ನೆರವೇರಿತು.
ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎನ್. ನಾಗಭೂಷಣ ಮಾತನಾಡಿ, “ರಕ್ತದಾನವೆಂಬುದರಿoದ ನೀವು ಸಂಕಷ್ಟದಲ್ಲಿರುವವರಿಗೆ ಜೀವನಾಡಿಯಾಗುತ್ತೀರಿ. ಅವರ ಕರಾಳ ಸಮಯದಲ್ಲಿ ಬೆಳಕಿನ ದಾರಿದೀಪವಾಗುತ್ತೀರಿ” ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕಿಷ್ಕಿಂದ ವಿಶ್ವವಿದ್ಯಾಲಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಡಾ. ಬಿಂದುರಾಣಿ, ಮೆಡಿಕಲ್ ಆಫೀಸರ್, ರಕ್ತ ಭಂಡಾರ ಅಧಿಕಾರಿಗಳು, ವಿಮ್ಸ್, ಬಳ್ಳಾರಿ ಇವರು “ನಾವು ಪ್ರತಿ ಬಾರಿ ರಕ್ತದಾನ ಮಾಡುವಾಗ, ನಾಲ್ಕು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿರುತ್ತೇವೆ. ಆದ್ದರಿಂದ ರಕ್ತದಾನ ಮಾಡುವುದರ ಜೊತೆಗೆ ಹಲವಾರು ಜೀವಗಳಿಗೆ ಮರುಜೀವನ ನೀಡಬಹುದು” ಎಂದು ತಿಳಿಸಿದರು ಹಾಗೂ ರಕ್ತದ ಮಹತ್ವವನ್ನು ತಿಳಿಸಿ, ರಕ್ತದ ಗುಂಪುಗಳು, ಅದರಿಂದ ಆಗುವ ಪ್ರಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ನಿವೃತ್ತ ರೇಡಿಯೋಲಾಜಿಸ್ಟ್ ಡಾ. ನಾಗರಾಜ್, ತಮ್ಮ ಅನುಭವಗಳನ್ನು ಹಂಚಿಕೊoಡು, ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ವಿ.ಜೆ. ಭರತ್, ಟ್ರಸ್ಟಿ, ಟಿಇಹೆಚ್ಆರ್ಡಿ ಟ್ರಸ್ಟ್, ಬಳ್ಳಾರಿ, ಡಾ. ಯು. ಈರಣ್ಣ, ಕುಲಸಚಿವರು, ಡಾ. ವಿ.ಸಿ. ಪಾಟೀಲ್, ಡೀನ್, ಕಿಷ್ಕಿಂದ ವಿಶ್ವವಿದ್ಯಾಲಯ, ಬಳ್ಳಾರಿ, ಡಾ. ಬಿ.ಎಸ್. ಖೇಣೇದ್, ಉಪ-ಪ್ರಾಚಾರ್ಯರು, ಬಿಐಟಿಎಂ, ಬಳ್ಳಾರಿ, ಡಾ. ಎಂ. ರಾಮಚಂದ್ರ, ಪ್ರಾಚಾರ್ಯರು, ಬಳ್ಳಾರಿ ಬಿಸಿನೆಸ್ ಕಾಲೇಜ್, ಡಾ. ಶೇಕ್ಮೀರ, ಎನ್ಎಸ್ಎಸ್ ಇನ್ಚಾರ್ಜ್, ಪಿ.ಅಮರೇಶಯ್ಯ, ಆಡಳಿತಾಧಿಕಾರಿಗಳು, ಬಿಐಟಿಎಂ, ಬಳ್ಳಾರಿ, ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಡಾ. ನರಸಿಂಹ ಮೂರ್ತಿ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕೌಲ್ ಬಜಾರ್, ಬಳ್ಳಾರಿ, ಅಶೋಕ್, ಎನ್ಎಸ್ಎಸ್ ಪ್ರೋಗ್ರಾಮ್ ಆಫೀಸರ್, ಇತರ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ರಕ್ತದಾನ ಶಿಬಿರ ನೆರವೇರಿದ್ದು, ಈ ಶಿಬಿರದಲ್ಲಿ 210ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಉತ್ಸಾಹದಿಂದ ರಕ್ತದಾನ ಮಾಡಿದರು.
ಪ್ರೊ. ಸಬರಿನ್, ಅಸಿಸ್ಟಂಟ್ ಪ್ರೊಫೆಸರ್, ಇಸಿಇ ವಿಭಾಗ ಸ್ವಾಗತಿಸಿದರು, ಕು. ಚಂದನ ಪ್ರಾರ್ಥಿಸಿದರು.