ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಶಂಕಿತನ ಜಾಡು ಹಿಡಿದಿದ್ದಾರೆ. ಬಿಎಂಟಿಸಿ(BMTC) ವೋಲ್ವೋ ಡಿಪೋ- 13ರ ಕಾಮಾಕ್ಯಗೆ ಸೇರಿದ್ದ ಕೆಎ- 57- F 186 ನಂಬರಿನ ಬನಶಂಕರಿ ಯಿಂದ ಐಟಿಪಿಎಲ್ ( ಸಿಲ್ಕ್ ಬೋರ್ಡ್ ಮಾರ್ಗ ) ಹೋಗುವ ಬಸ್ನಲ್ಲಿ ಶಂಕಿತ ಪ್ರಯಾಣ ಮಾಡಿದ್ದಾನೆ.
ಬೆಂಗಳೂರು, ಮಾ.02: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಶಂಕಿತನ ಜಾಡು ಹಿಡಿದಿದ್ದಾರೆ. ಬಿಎಂಟಿಸಿ(BMTC) ವೋಲ್ವೋ ಡಿಪೋ- 13ರ ಕಾಮಾಕ್ಯಗೆ ಸೇರಿದ್ದ ಕೆಎ- 57- F 186 ನಂಬರಿನ ಬನಶಂಕರಿ ಯಿಂದ ಐಟಿಪಿಎಲ್ ( ಸಿಲ್ಕ್ ಬೋರ್ಡ್ ಮಾರ್ಗ ) ಹೋಗುವ ಬಸ್ನಲ್ಲಿ ಶಂಕಿತ ಪ್ರಯಾಣ ಮಾಡಿದ್ದಾನೆ. ಕುಂದಹಳ್ಳಿಯಿಂದ ಬಸ್ ಹತ್ತಿ, ಬಳಿಕ CMRIT ಕಾಲೇಜು ಸ್ಟಾಪ್ನಲ್ಲಿ ಇಳಿದುಕೊಂಡಿದ್ದಾನೆ. ಈ ಕುರಿತು ಆ ಬಸ್ನ ಸಿಸಿ ಟಿವಿ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಡ್ರೈವರ್ ಮತ್ತು ಕಂಡಕ್ಟರ್ ರಿಂದ ಪೋಲಿಸರು ಮಾಹಿತಿ ಪಡೆದುಕೊಂಡಿದ್ದಾರೆ.
ಮೆಜೆಸ್ಟಿಕ್ನ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹೈ ಅಲರ್ಟ್
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲರ್ಟ್ ಆದ ಪೊಲೀಸರು, ಇದೀಗ ಮೆಜೆಸ್ಟಿಕ್ನ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಲಗೇಜ್ ಚೆಕ್ ಮಾಡಿಯೇ ನಿಲ್ದಾಣಕ್ಕೆ ಸಿಬ್ಬಂದಿಗಳು ಬಿಡುತ್ತಿದ್ದಾರೆ. ಜೊತೆಗೆ ಬರುವಂತಹ ಪ್ರತಿ ಪ್ರಯಾಣಿಕರ ಮೇಲೂ ಕೆಎಸ್ಆರ್ಟಿಸಿ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದ್ರೆ ಅಂತವರ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸಲಾಗುತ್ತಿದೆ.
ಈ ಕುರಿತು ಬಿಎಂಟಿಸಿ ಎಂಡಿ ಆರ್. ರಾಮಚಂದ್ರನ್ ಮಾತನಾಡಿ, ‘ಬಿಎಂಟಿಸಿಯಲ್ಲಿ ಸಂಚರಿಸುವ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತನೆ ಮಾಡಿಕೊಂಡು ಬರುತ್ತಿದ್ದೇವೆ. ಇಂತಹ ಘಟನೆಗಳು ಆದಾಗ ಜಾಗರೂಕತೆಯಿಂದ ನಡೆಸೆಕೊಳ್ಳಬೇಕು ಎನ್ನುವುದು ಎಲ್ಲರ ಮನಸ್ಸಿನಲ್ಲಿ ಬರುತ್ತದೆ. ಜಾಗರೂಕತೆ ಆಗಿರಬೇಕು, ಅದನ್ನ ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಅನುಮಾನಾಸ್ಪದವಾದದ್ದು ಏನಾದರು ಕಂಡು ಬಂದರೆ, ಪ್ರಯಾಣಿಕರು ಕೂಡಲೇ ಚಾಲಕ ಅಥವಾ ನಿರ್ವಾಹಕರ ಗಮನಕ್ಕೆ ತರಬೇಕು ಎಂದರು. ಇದೇ ವೇಳೆ ಬಿಎಂಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳನ್ನು ಗುರುತಿಸಲು ಮೆಟಲ್ ಡಿಟೆಕ್ಟರ್ ಅಳವಡಿಕೆ ವಿಚಾರ, ‘ ಈ ಬಗ್ಗೆ ಗೃಹ ಇಲಾಖೆ ನೋಡಿಕೊಳ್ಳಬೇಕು. ನಾವು ಕೇವಲ ಬಸ್ ಗಳ ನಿರ್ವಹಣೆ ಹೇಗೆ ಮಾಡಬೇಕು ನಿಯಮ ಪ್ರಕಾರ ಮಾಡುತ್ತೇವೆ ಎಂದು ಹೇಳಿದರು.