ಬಳ್ಳಾರಿ: ಪ್ರತಿಯೊಂದು ಮರವು ಮಾನವನ ಜೀವ, ಮಾನವ ಜೀವಂತವಾಗಿ ಇರಲು ಗಿಡ ಮರಗಳು ಅನಿವಾರ್ಯ ಕಾಲ ಕಾಲಕ್ಕೆ ಮಳೆಯಾಗಬೇಕದಲ್ಲಿ ಗಿಡ ಮರಗಳನ್ನು ಬೆಳೆಸುವುದು ಅನಿವಾರ್ಯ ಎಂದು ಬುಡಾ ಅಧ್ಯಕ್ಷ ಆಂಜಿನೇಯುಲು ತಿಳಿಸಿದರು.
ಅವರು ನಗರದ 20ನೇ ವಾರ್ಡ್ ನ ರಾಘವೇಂದ್ರ ಕಾಲೋನಿಯ ಎರಡನೆ ಹಂತದ ಆದರ್ಶ ಉದ್ಯಾನವನ ಅಭಿವೃದ್ಧಿ ಸಂಘದವತಿಯಿಂದ ಹಮ್ಮಿಕೊಂಡಿದ್ದ ಎರಡನೇ ಬಾರಿಗೆ ಆಯ್ಕೆಯಾಗಿರುವ ಜೆ.ಎಸ್ ಆಂಜಿನೇಯಲು ಇವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾನು ಬುಡಾ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧ್ಯಕ್ಷರಾಗಿರುವುದು ಬಳ್ಳಾರಿ ಜನತೆಯ ಆಶೀರ್ವಾದ, ಮುಂಬರುವ ಮಳೆಗಾಲದಲ್ಲಿ ಪ್ರತಿ ಮನೆ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗುವುದು ಗಿಡ ಮರಗಳು ಯಾರಿಗಾದರೂ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದು, ಮಾನವನಿಗೆ ಹುಟ್ಟು ಸಾವು ಅನಿವಾರ್ಯ ಮರಗಳು ಮನುಷ್ಯನ ಜೀವವನ್ನು ಉಳಿಸುತ್ತವೆ.ಪ್ರತಿ ಮನಷ್ಯ ಗಿಡ ಅತ್ಯಂತ ಅವಶ್ಯಕ ಅದೇ ರೀತಿಯಾಗಿ ಜೀವ ಹೋದ ನಂತರ ರುದ್ರಭೂಮಿ ಅವಶ್ಯಕ ಎಂಬಂತೆ ಮೃತರ ಅಂತ್ಯ ಸಂಸ್ಕಾರ ಮಾಡುವ ರುದ್ರಭೂಮಿ ಪ್ರದೇಶಗಳಲ್ಲಿ ಕಾಂಪೌಂಡ್, ಕೊಳವೆಬಾವಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧ, ಎಂದು ಅವರು ತಿಳಿಸಿದರು.
ನಗರದ ಎಲ್ಲಾ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ನನ್ನ ಕಳೆದ ಅವದಿಯಲ್ಲಿ ಬೂಡಾವತಿಯಿಂದ ಸುಮಾರು ಮೂರು ಸಾವಿರ ಸಸಿಗಳನ್ನು ನೆಟ್ಟಿದ್ದೇನು ಅದರಲ್ಲಿ ಈಗ ಎರಡು ವರೆ ಸಾವಿರ ಸಸಿಗಳು ಗಿಡಗಳಾಗಿ ಬೆಳದೆದಿವೆ. ಪ್ರಾಧಿಕಾರದವತಿಯಿಂದ ಸಸಿಗಳನ್ನು ಮತ್ತು ಗ್ರಿಲ್ ಗಳನ್ನು ನೀಡಲಾಗುವುದು ಅದನ್ನು ಬೆಳೆಸುವ ಜವಬ್ಧಾರಿ ನಿಮ್ಮದು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಬಳಿಕ ಆದರ್ಶ ಉದ್ಯಾನವನ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೆಕೋಡಪ್ಪ ಮಾತನಾಡಿ, ಆಂಜೀನೇಯಲು ಎರಡನೇ ಬಾರಿಗೆ ಬುಡಾ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಬಳ್ಳಾರಿಯ ಅಭಿವೃದ್ದಿಗೆ ಅಂಜನೇಯಲು ಮರಳಿ ಬಂದಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು,
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ವಿವೇಕ್ (ವಿಕ್ಕಿ,) ಮುಲ್ಲಂಗಿ ನಂದೀಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ, ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್, ಆದರ್ಶ ಉದ್ಯಾನವನ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಸುರೇಶ್ಡ, ಜಿ.ನಾಗರಾಜು, ನೆಟ್ಟಕಲ್ಲಪ್ಪ, ತಲ್ಲಂ ಕಿಶೋರ್ ಸೇರಿದಂತೆ ಸಮಿತಿಯ ನಲವತ್ತು ಸಜನ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಪದ್ಮಾವತಿ.ಪ್ರದೇಶದ ಪ್ರಮುಖರಾದ ಗೋಪಾಲರೆಡ್ಡಿ, ರಾಮಮೋಹನರೆಡ್ಡಿ, ವೆಂಕಟರೆಡ್ಡಿ, ಸೇರಿದಂತೆ ಉದ್ಯಾನವನದಲ್ಲಿ ಪ್ರತಿದಿನ ವಾಯು ವಿಹಾರ ಮಾಡುವ ಜನರು ಉಪಸ್ಥಿತರಿದ್ದರು.